ಕರ್ನಾಟಕ

karnataka

ETV Bharat / bharat

ಮದ್ಯ ಸೇವನೆ ನಿಲ್ಲಿಸುವಂತೆ ಬುದ್ಧಿವಾದ ಹೇಳಿದ್ದಕ್ಕೆ ಪತ್ನಿಗೆ ಈ ಶಿಕ್ಷೆ! - stop drinking alcohol

ತೆಲಂಗಾಣದ ರಾಜಣ್ಣ ಸಿರಿಸಿಲ್ಲ ಜಿಲ್ಲೆಯಲ್ಲಿ ಪತಿಯಿಂದ ತೀವ್ರವಾಗಿ ಹಲ್ಲೆಗೊಳಗಾದ ಮಹಿಳೆಯೊಬ್ಬರು ತಲೆಗೆ ಹೊಕ್ಕಿದ್ದ ಕತ್ತಿ ಸಮೇತ ಆಸ್ಪತ್ರೆಗೆ ಬಂದರು.

Man attacks wife with a sickle for advising him to stop drinking alcohol
ಮದ್ಯ ಸೇವನೆ ನಿಲ್ಲಿಸುವಂತೆ ಹೇಳಿದ್ದಕ್ಕೆ ದಾಳಿ ಮಾಡಿದ ಪತಿ: ತಲೆಗೆ ಹೊಕ್ಕಿ ಕುಡುಗೋಲಿನೊಂದಿಗೆ ಆಸ್ಪತ್ರೆಗೆ ಬಂದ ಪತ್ನಿ

By

Published : Jun 29, 2023, 8:15 PM IST

ರಾಜಣ್ಣ ಸಿರಿಸಿಲ್ಲ (ತೆಲಂಗಾಣ):ಮದ್ಯ ಸೇವನೆ ನಿಲ್ಲಿಸುವಂತೆ ಬುದ್ಧಿವಾದ ಹೇಳಿದ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿ ಮೇಲೆ ಕತ್ತಿಯಿಂದ ಭೀಕರವಾಗಿ ಹಲ್ಲೆ ಮಾಡಿದ್ದಾನೆ. ಕತ್ತಿ ಆಕೆಯ ತಲೆಯೊಳಗೆ ಸಿಲುಕಿಕೊಂಡಿದೆ. ಈ ಘಟನೆ ತೆಲಂಗಾಣದ ರಾಜಣ್ಣ ಸಿರಿಸಿಲ್ಲ ಜಿಲ್ಲೆಯಲ್ಲಿ ನಡೆದಿದ್ದು, ಅದೃಷ್ಟವಶಾತ್ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಲ್ಲಿನ ಎಲ್ಲರೆಡ್ಡಿಪೇಟೆ ಮಂಡಲದ ನಿವಾಸಿ ನಿರ್ಮಲಾ ಎಂಬವರು ಗಾಯಗೊಂಡಿದ್ದಾರೆ. ಪತ್ನಿ ಒಗ್ಗು ಮಲ್ಲೇಶ್ ಕುಡಿತದ ಚಟ ಹೊಂದಿದ್ದ. ಇದರಿಂದ ಕೆಲವು ದಿನಗಳಿಂದ ಪತಿ-ಪತ್ನಿ ನಡುವೆ ಜಗಳ ನಡೆಯುತ್ತಿತ್ತು. ಬುಧವಾರವೂ ಕೂಡ ಇಬ್ಬರ ನಡುವೆ ಇದೇ ವಿಷಯವಾಗಿ ಗಲಾಟೆ ಶುರುವಾಗಿದೆ. ಇದರಿಂದ ಬೇಸತ್ತ ನಿರ್ಮಲಾ ಪತಿ ಮಲ್ಲೇಶ್​ಗೆ ಕುಡಿತ ನಿಲ್ಲಿಸುವಂತೆ ಹೇಳಿದ್ದಾರೆ.

ಆದರೆ, ಗಲಾಟೆ ವಿಕೋಪಕ್ಕೆ ತಿರುಗಿದೆ. ಗಂಡ-ಹೆಂಡತಿ ನಡುವೆ ತೀವ್ರ ವಾಗ್ವಾದ ನಡೆದಿದೆ. ಇದೇ ಕೋಪದಲ್ಲಿ ಮಲ್ಲೇಶ್ ಪತ್ನಿಯ ಮೇಲೆ ಕೈಗೆ ಸಿಕ್ಕ ಕತ್ತಿಯಿಂದಲೇ ಹಲ್ಲೆ ನಡೆಸಿದ್ದಾನೆ. ಕತ್ತಿ ತಲೆಯೊಳಗೆ ಹೊಕ್ಕಿಕೊಂಡಿದ್ದು, ನೋವು ತಡೆಯಲಾರದೇ ಆಕೆ ಜೋರಾಗಿ ಕಿರುಚಿದ್ದಾರೆ. ಮನೆಯ ಅಕ್ಕಪಕ್ಕದ ಸಮೀಪದ ಜನರು ಸ್ಥಳಕ್ಕೆ ಓಡಿ ಬಂದಿದ್ದಾರೆ. ಆದರೆ, ಅವರು ಬರುವಷ್ಟರಲ್ಲಿ ಮಲ್ಲೇಶ್ ಸ್ಥಳದಿಂದ ಓಡಿ ಹೋಗಿದ್ದ. ಮತ್ತೊಂದೆಡೆ, ನಿರ್ಮಲಾ ತಲೆಯಿಂದ ತೀವ್ರ ರಕ್ತಸ್ರಾವವಾಗಿದೆ. ತಕ್ಷಣವೇ 108 ಆ್ಯಂಬುಲೆನ್ಸ್​ ಕರೆ ಮಾಡಿ ತಲೆಯೊಳಗೆ ಹೊಕ್ಕ ಕತ್ತಿಸಮೇತ ಆಕೆಯನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಜಿಲ್ಲಾಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಕರೀಂನಗರಕ್ಕೆ ಕಳುಹಿಸಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:Mandya Murder: ಸಕ್ಕರೆನಾಡಲ್ಲಿ ಹಾಡಹಗಲೇ ರೌಡಿಶೀಟರ್ ಬರ್ಬರ ಹತ್ಯೆ.. ಭಯಾನಕ ಕೊಲೆ ಕಂಡು ಬೆಚ್ಚಿಬಿದ್ದ ಮಂಡ್ಯ ಜನರು

ABOUT THE AUTHOR

...view details