ಹೈದರಾಬಾದ್: ಮದುವೆಯಾಗುವಂತೆ ಪೀಡಿಸುತ್ತಿದ್ದ ಸಲೂನ್ ಬಾಯ್ ಯುವತಿ ಮೇಲೆ ಕತ್ತಿಯಿಂದ ದಾಳಿ ನಡೆಸಿರುವ ಘಟನೆ ನಗರದಲ್ಲಿ ಸಂಚಲನ ಮೂಡಿಸಿದೆ.
ಮಾಹಿತಿಗಳ ಪ್ರಕಾರ
ರಂಗಾರೆಡ್ಡಿ ಜಿಲ್ಲಾ ನಾರ್ಸಿಂಗಿ ವಲಯದ ಹೈದರ್ಷಾಕೋಟ್ನ ಲಕ್ಷ್ಮಿನಗರದ ನಿವಾಸಿ ಆಗಿರುವ ಯುವತಿ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ವಾಸಿಸುತ್ತಿದ್ದ ನಗರದಲ್ಲೇ ಶಾರುಖ್ ಸಲ್ಮಾನ್ ಎಂಬ ಯುವಕ ಸಲೂನ್ ಬಾಯ್ ಆಗಿ ಕೆಲಸ ಮಾಡುತ್ತಿದ್ದಾನೆ. ಟೆಕ್ಕಿಯೊಂದಿಗೆ ಶಾರೂಖ್ ಪರಿಚಯ ಬೆಳೆಸಿಕೊಂಡಿದ್ದಾನೆ. ಬಳಿಕ ಶಾರೂಖ್ ತನ್ನ ಲವ್ ಪ್ರಪೋಸಲ್ ಆಕೆಯ ಮುಂದಿಟ್ಟಿದ್ದಾನೆ. ಆದ್ರೆ ಯುವತಿ ಶಾರೂಖ್ ಪ್ರೀತಿಯನ್ನು ತಿರಸ್ಕರಿಸಿದ್ದಾಳೆ. ಆಗಿನಿಂದಲೂ ಶಾರೂಖ್ ಆಕೆಯನ್ನು ಬೆಂಬಿಡದೇ ಕಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಟೆಕ್ಕಿ ಮೇಲೆ ತರಕಾರಿ ಹೆಚ್ಚುವ ಕತ್ತಿಯಿಂದ ದಾಳಿ ಮಾಡಿದ ಸಲೂನ್ ಬಾಯ್ ಈ ಹಿಂದೆ ಶಾರೂಖ್ ಯುವತಿಗೆ ಕಿರುಕುಳ ನೀಡುತ್ತಿರುವುದರ ಬಗ್ಗೆ ಆಕೆಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ತಿಳಿದು ಬಂದಿದೆ. ನಿನ್ನೆ ರಾತ್ರಿ 8 ಗಂಟೆ ಸುಮಾರು ಕೆಲಸ ಮುಗಿಸಿಕೊಂಡು ಯುವತಿ ತನ್ನ ಅಪಾರ್ಟ್ಮೆಂಟ್ ಬಳಿ ಬಂದಿದ್ದಾಳೆ. ಈ ವೇಳೆ, ಶಾರೂಖ್ ತನ್ನನ್ನು ಮದುವೆಯಾಗುವಂತೆ ಪೀಡಿಸಿದ್ದಾನೆ. ಇದಕ್ಕೊಪ್ಪದ ಕಾರಣ ಶಾರೂಖ್ ಯುವತಿ ಮೇಲೆ ತರಕಾರಿ ಹೆಚ್ಚುವ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಘಟನೆ ಬಳಿಕ ಶಾರೂಖ್ ಪರಾರಿಯಾಗಲು ಯತ್ನಿಸಿದ್ದಾನೆ. ಆದ್ರೆ ಸ್ಥಳೀಯರು ಆರೋಪಿಯನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಮಗಳನ್ನು ಪೋಷಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂತ್ರಸ್ತೆಯನ್ನು ಬಿಜೆಪಿ ರಾಜ್ಯ ಅಧ್ಯಕ್ಷ ಬಂಡಿ ಸಂಜಯ್ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ.
ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.