ಉತ್ತರಾಖಂಡ:ಸಾಮಾಜಿಕ ಮಾಧ್ಯಮಗಳಲ್ಲಿ ಮಕ್ಕಳ ಅಶ್ಲೀಲ ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ಅಪ್‌ಲೋಡ್ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಅಶ್ಲೀಲ ಚಿತ್ರ ಹಂಚಿಕೆ: ಆರೋಪಿ ಬಂಧನ - ಉತ್ತರಾಖಂಡ
ಸಾಮಾಜಿಕ ಮಾಧ್ಯಮಗಳಲ್ಲಿ ಮಕ್ಕಳ ಅಶ್ಲೀಲ ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ಅಪ್‌ಲೋಡ್ ಮಾಡುತ್ತಿದ್ದ ಎಂಬ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಲಾಗಿದೆ. ಕೆಲವು ಕುಟುಂಬಗಳು ಈ ಬಗ್ಗೆ ನೇರವಾಗಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರಿಂದ ತ್ವರಿತವಾಗಿ ಕ್ರಮ ಜರುಗಿಸಲಾಗಿದೆ.
ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ರೂರ್ಕಿ ಪೊಲೀಸರು ಈ ವಿಷಯವನ್ನು ಕೈಗೆತ್ತಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿಯು ಸಿವಿಲ್ ಲೈನ್ ಕೊಟ್ವಾಲಿ ಪ್ರದೇಶದ ದಾಂಡೇರಾ ನಿವಾಸಿ ಎಂದು ತಿಳಿದುಬಂದಿದೆ. ವರದಿಯ ಪ್ರಕಾರ, ಕೆಲವು ಕುಟುಂಬಗಳು ನೇರವಾಗಿ ಗೃಹ ಸಚಿವಾಲಯಕ್ಕೆ ದೂರು ನೀಡಿದ್ದ ಹಿನ್ನೆಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಈ ವಿಷಯವು ಮಕ್ಕಳಿಗೆ ಸಂಬಂಧಿಸಿರುವುದರಿಂದ ಗೃಹ ಸಚಿವಾಲಯ ತಕ್ಷಣ ಕ್ರಮ ಕೈಗೊಂಡು ದೂರನ್ನು ಡೆಹ್ರಾಡೂನ್ ಸೈಬರ್ ಸೆಲ್‌ಗೆ ರವಾನಿಸಿ ತಕ್ಷಣ ವಿಚಾರಣೆಗೆ ಆದೇಶಿಸಿದೆ. ವರದಿಯನ್ನು ಹರಿದ್ವಾರದಲ್ಲಿರುವ ಎಸ್‌ಎಸ್‌ಪಿ ಕಚೇರಿಗೆ ಕಳುಹಿಸಲಾಗಿದೆ.