ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶಾದ್ಯಂತ ಕೋವಿಡ್ ಬಿಗಡಾಯಿಸಿ ಆಕ್ಸಿಜನ್ ಕೊರತೆಯಿಂದ ರೋಗಿಗಳು ಮೃತಪಡುತ್ತಿದ್ದಾರೆ. ಆದ್ರೆ ಇಲ್ಲೋರ್ವ ಖದೀಮ ಅಕ್ರಮವಾಗಿ ತನ್ನ ಮನೆಯಲ್ಲಿಯೇ ಆಮ್ಲಜನಕದ ಸಿಲಿಂಡರ್‌ಗಳನ್ನು ಸಂಗ್ರಹಿಸಿಟ್ಟುಕೊಂಡು ಹೆಚ್ಚಿಗೆ ಬೆಲೆಗೆ ವ್ಯಾಪಾರ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ನಿಖರ ಮಾಹಿತಿಯ ಮೇರೆಗೆ ದೆಹಲಿಯ ದಶರತ್ಪುರ ಪ್ರದೇಶದಲ್ಲಿರುವ ಮನೆಯೊಂದರಲ್ಲಿ ಪೊಲೀಸರು ದಾಳಿ ನಡೆಸಿದಾಗ ತಲಾ 67 ಲೀಟರ್ ಸಾಮರ್ಥ್ಯವುಳ್ಳ 32 ದೊಡ್ಡ ಹಾಗೂ ತಲಾ 10 ಲೀಟರ್ ಸಾಮರ್ಥ್ಯದ 16 ಸಣ್ಣ ಆಕ್ಸಿಜನ್ ಸಿಲಿಂಡರ್ಗಳು ಪತ್ತೆಯಾಗಿವೆ. ಮನೆಯ ಮಾಲೀಕನಾಗಿರುವ ಆರೋಪಿ ಅನಿಲ್ ಕುಮಾರ್ನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.