ಪುಣೆ(ಮಹಾರಾಷ್ಟ್ರ):ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದನ್ನು ಪ್ರಶ್ನಿಸಿ 400 ರೂಪಾಯಿ ದಂಡ ಪಾವತಿಸುವಂತೆ ಕೇಳಿದ್ದಕ್ಕಾಗಿ ಆಕ್ರೋಶಗೊಂಡಿದ್ದ ಕಾರಿನಲ್ಲಿ ಕುಳಿತಿದ್ದ ವ್ಯಕ್ತಿ ಟ್ರಾಫಿಕ್ ಪೊಲೀಸ್ ಕಾನ್ಸ್ಟೇಬಲ್ ಕುತ್ತಿಗೆ ಹಿಡಿದು ಎಳೆದೊಯ್ದಿರುವ ಘಟನೆ ನಗರದಲ್ಲಿ ನಡೆದಿತ್ತು. ಇದೀಗ ಆರೋಪಿಯ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಟ್ರಾಫಿಕ್ ಪೊಲೀಸ್ ಕುತ್ತಿಗೆ ಬಿಗಿದಪ್ಪಿ ಎಳೆದೊಯ್ದ ಆರೋಪಿಯನ್ನ ಬಂಧಿಸಿದ ಖಾಕಿ!! - ಟ್ರಾಫಿಕ್ ನಿಯಮ ಉಲ್ಲಂಘನೆ
ರಸ್ತೆ ನಿಯಮ ಉಲ್ಲಂಘಟನೆ ಮಾಡಿದ್ದಕ್ಕಾಗಿ ದಂಡ ಪಾವತಿಸುವಂತೆ ಕೇಳಿದ್ದಕ್ಕಾಗಿ ಆಕ್ರೋಶಗೊಂಡಿದ್ದ ವಾಹನ ಸವಾರ ಅಮಾನವೀಯ ರೀತಿ ನಡೆದುಕೊಂಡಿರುವ ಘಟನೆ ನಡೆದಿತ್ತು..
cop on car's bonnet
ಚಲಿಸುತ್ತಿದ್ದ ಕಾರಿನಲ್ಲಿದ್ದ ವ್ಯಕ್ತಿಯೊಬ್ಬ ಟ್ರಾಫಿಕ್ ಪೊಲೀಸ್ ಕಾನ್ಸ್ಟೇಬಲ್ ಕುತ್ತಿಗೆ ಬಿಗಿದಪ್ಪಿ, ಅಂದಾಜು 700 ರಿಂದ 800 ಮೀಟರ್ ದೂರ ಎಳೆದೊಯ್ದಿದ್ದನು. ಈ ಸಂಬಂಧ ಪೊಲೀಸ್ ಕಾನ್ಸ್ಟೇಬಲ್ ಶೇಷರಾವ್ ಜೈಭಯ್(43) ಮುಂಡ್ವಾ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಮುಂಡ್ವಾ ಪೊಲೀಸರು, ಪ್ರಶಾಂತ್ ಶ್ರೀಧರ್ ಕಾಂತವರ್ನನ್ನು ಇದೀಗ ಬಂಧಿಸಿದ್ದಾರೆ. ಅಲ್ಲದೆ, ಆತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ.