ಕರ್ನಾಟಕ

karnataka

ETV Bharat / bharat

ಸ್ಕೂಟರ್‌ನಲ್ಲಿ ಕುಳಿತು ಟ್ರಾಫಿಕ್‌ ಸಿಗ್ನಲ್‌ನಲ್ಲಿ ಯುವಕ-ಯುವತಿಯಿಂದ ಸ್ನಾನ!; ಪೊಲೀಸರಿಂದ ಎಚ್ಚರಿಕೆ- ವಿಡಿಯೋ - ಯೂಟ್ಯೂಬರ್ ಆದರ್ಶ್ ಶುಕ್ಲಾ ವಿಡಿಯೋ

ಮಹರಾಷ್ಟ್ರದಲ್ಲಿ ಯುವಕ ಮತ್ತು ಯುವತಿ ಸ್ಕೂಟರ್​ನಲ್ಲಿ ಸವಾರಿ ಮಾಡುತ್ತಾ ಸಿಗ್ನಲ್‌​ನಲ್ಲಿ ಮಗ್​ನಿಂದ ನೀರು ಮೈಮೇಲೆ ಸುರಿದುಕೊಂಡರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

vairal vedio
ಸ್ಕೂಟರ್​ಲ್ಲಿ ಸ್ನಾನ

By

Published : May 19, 2023, 1:04 PM IST

ಮಹರಾಷ್ಟ್ರ: ದೇಶಾದ್ಯಂತ ಬಿಸಿಲಿನ ಝಳ ಹೆಚ್ಚಾಗುತ್ತಿದ್ದು, ಜನರು ಸೆಖೆಯಿಂದ ಪಾರಾಗಲು ಹಲವು ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಮಹರಾಷ್ಟ್ರದ ಯುವ ಜೋಡಿಯೊಂದು ಸ್ಕೂಟರ್​ನಲ್ಲಿ ಸ್ನಾನ ಮಾಡುತ್ತಾ ವಾಹನ ಚಲಾಯಿಸಿಕೊಂಡು ಹೋಗಿರುವ ಘಟನೆ ನಡೆದಿದೆ. ಇವರು ಸವಾರಿ ಜೊತೆಗೆ ಸ್ನಾನ ಮಾಡಿಕೊಂಡ ವಿಡಿಯೋ ವೈರಲ್ ಆಗಿದೆ. ಯುವಕ ಕ್ಷಮೆ ಕೇಳಿದ ಪ್ರಸಂಗವೂ ನಡೆದಿದೆ.

ಸೋಷಿಯಲ್​ ಮೀಡಿಯಾದಲ್ಲಿ ಹೆಸರು ಗಿಟ್ಟಿಸಿಕೊಳ್ಳಲು ಏನೆಲ್ಲ ಹರಸಾಹಸ ಪಡುತ್ತಾರೆ ಎಂಬುದನ್ನು ದಿನನಿತ್ಯ ನೋಡುತ್ತೇವೆ. ಆದರೆ ಸಾರ್ವಜನಿಕವಾಗಿ ಸಂಚರಿಸುವ ರಸ್ತೆಯಲ್ಲೇ ಯುವಕ-ಯುವತಿ ಈ ರೀತಿಯಾಗಿ ವರ್ತಿಸಿರುವುದು ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದೆ. ಮುಂಬೈ ಸಮೀಪದ ಥಾಣೆಯಲ್ಲಿ ಘಟನೆ ನಡೆದಿದ್ದು, ವಿಡಿಯೋ ಗಮನಿಸುತ್ತಿದ್ದಂತೆಯೇ ಪೊಲೀಸರು ಅಗತ್ಯ ಕ್ರಮಕ್ಕೆ ಮುಂದಾಗಿದ್ದಾರೆ.

ವೈರಲ್ ವಿಡಿಯೋದಲ್ಲಿ ಯುವಕ, ಯುವತಿ ಥಾಣೆಯ ಉಲ್ಲಾಸ್‌ನಗರದ ಟ್ರಾಫಿಕ್ ಸಿಗ್ನಲ್‌ನಲ್ಲಿ ಸ್ಕೂಟರ್‌ನಲ್ಲಿ ಸಂಚರಿಸುತ್ತಿರುವುದನ್ನು ನೋಡಬಹುದು. ಯುವತಿ ಹಸಿರು ಬಣ್ಣದ ಬಕೆಟ್​ನಲ್ಲಿ ನೀರು ಹಿಡಿದು ಕೆಂಪು ಮಗ್​ನಲ್ಲಿ ನೀರನ್ನು ತನ್ನ ಮೈಮೇಲೆ, ವಾಹನ ಚಲಾಯಿಸುತ್ತಿರುವ ಯುವಕನ ಮೇಲೂ ಹಾಕುತ್ತಾ ಎಂಜಾಯ್ ಮಾಡುತ್ತಾಳೆ. ಅದೇ ಸಿಗ್ನಲ್​ನಲ್ಲಿದ್ದ ಇತರೆ ಸವಾರರು ಇವರನ್ನು ನೋಡಿ ಸ್ವಲ್ಪ ಮುಜುಗರ ಜೊತೆಗೆ ಮನರಂಜನೆ ಪಡೆದಂತೆ ಕಾಣಿಸುತ್ತದೆ. ಸಿಗ್ನಲ್​ ಮುಗಿದ ಮೇಲೆ ಇದೇ ರೀತಿಯಾಗಿ ಮುಂದುವರೆಯುತ್ತಾ ಸಾಗುತ್ತಾರೆ.

ಥಾಣೆ ಡಿಜಿಪಿ ಈ ಕುರಿತು ಪ್ರತಿಕ್ರಿಯಿಸಿ, ಉಲ್ಲಾಸನಗರದ ಮುಖ್ಯ ಸಿಗ್ನಲ್‌ 17ರಲ್ಲಿ ಘಟನೆ ನಡೆದಿದೆ. ಮನರಂಜನೆಯ ಹೆಸರಿನಲ್ಲಿ ಇಂತಹ ಅಸಂಬದ್ಧತೆಗೆ ಅವಕಾಶವಿಲ್ಲ ಎಂದರು.

ಕ್ಷಮೆ ಯಾಚಿಸಿದ ಯೂಟ್ಯೂಬರ್​: ಸ್ನಾನ ಮಾಡುತ್ತಾ ಸವಾರಿ ಮಾಡಿರುವ ವಿಡಿಯೋದಲ್ಲಿರುವ ವ್ಯಕ್ತಿ ಮುಂಬೈನ ಯೂಟ್ಯೂಬರ್ ಆದರ್ಶ್ ಶುಕ್ಲಾ. ದ್ವಿಚಕ್ರ ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸುವ ಸಂಚಾರಿ ನಿಯಮಗಳನ್ನು ಪಾಲಿಸದೇ ಇದ್ದುದರಿಂದ ಇವರು ಮುಂಬೈ ಪೊಲೀಸರಲ್ಲಿ ಇನ್ಸ್ಟಾಗ್ರಾಮ್​ನಲ್ಲಿ ಕ್ಷಮೆ ಯಾಚಿಸಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, "ನಾನು ನೀರು ಹಾಕಿಕೊಳ್ಳುತ್ತಾ ವಾಹನ ಚಾಲನೆ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಆದರೆ, ಹಾಗೆ ಮಾಡುವಾಗ ನಾನು ಹೆಲ್ಮೆಟ್ ಧರಿಸಿರಲಿಲ್ಲ. ಅದು ನನ್ನ ದೊಡ್ಡ ತಪ್ಪು ಎಂದು ಬರೆದುಕೊಂಡಿದ್ದಾರೆ.

ಜೊತೆಗೆ ಕಾಮೆಂಟ್ ಅನ್ನು ಪೋಸ್ಟ್ ಮಾಡಿ ತನ್ನ ಬೆಂಬಲಿಗರಿಗೆ ತಾವೂ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸುವಂತೆ ಹೇಳಿದ್ದಾರೆ. ನಿಯಮಗಳನ್ನು ಅನುಸರಿಸದಿದ್ದಕ್ಕಾಗಿ ದಂಡ ಪಾವತಿಸುವುದಾಗಿ ಶುಕ್ಲಾ ತಿಳಿಸಿದ್ದಾರೆ. ನನ್ನನ್ನು ಬಂಧಿಸಲಾಗುತ್ತಿದೆ ಎಂಬ ತಪ್ಪು ಮಾಹಿತಿಯನ್ನು ದಯವಿಟ್ಟು ಹರಡಬೇಡಿ. ನಾನು ತಪ್ಪು ಮಾಡಿದ್ದೇನೆ ಮತ್ತು ಅದಕ್ಕಾಗಿ ದಂಡ ಪಾವತಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಬಿಸಿಲಿನ ಧಗೆ: ಸ್ಕೂಟರ್​ ಓಡಿಸುತ್ತಲೇ ಸ್ನಾನ ಮಾಡಿದ ಯುವಕನಿಗೆ ಪೊಲೀಸರಿಂದ ಶಾಕ್

ABOUT THE AUTHOR

...view details