ಕರ್ನಾಟಕ

karnataka

ETV Bharat / bharat

6 ವರ್ಷದಲ್ಲಿ 38 ಬಾಲಕಿಯರ ಮೇಲೆ ಅತ್ಯಾಚಾರ; ಕೊಲೆ ಆರೋಪಿಗೆ ಶಿಕ್ಷೆ! - rape and murder case in delhi

ದೆಹಲಿಯಲ್ಲಿ ವಿಕೃತ ಮನಸ್ಸಿನ ವ್ಯಕ್ತಿಗೆ ಶಿಕ್ಷೆ ವಿಧಿಸಲಾಗಿದೆ. 6 ವರ್ಷದಲ್ಲಿ ಈತ 38 ಮಕ್ಕಳ ಮೇಲೆ ದೌರ್ಜನ್ಯ ಎಸಗಿ ಕೊಲೆ ಮಾಡಿರುವ ಆಘಾತಕಾರಿ ಅಂಶ ಬಹಿರಂಗವಾಗಿದೆ.

ಬಡಮಕ್ಕಳ ಮೇಲೆ ಅತ್ಯಾಚಾರ ಕೊಲೆ
ಬಡಮಕ್ಕಳ ಮೇಲೆ ಅತ್ಯಾಚಾರ ಕೊಲೆ

By

Published : May 11, 2023, 3:45 PM IST

ನವದೆಹಲಿ: 6 ವರ್ಷದಲ್ಲಿ 38 ಬಾಲಕಿಯರ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿಯನ್ನು ಇಲ್ಲಿನ ರೋಹಿಣಿ ನ್ಯಾಯಾಲಯ ಅಪರಾಧಿ ಎಂದು ಘೋಷಿಸಿ ಶಿಕ್ಷೆ ವಿಧಿಸಿದೆ. ಈತನ ವಿರುದ್ಧ ಇರುವ ಆರೋಪಗಳಲ್ಲಿ ಎರಡೂವರೆ ವರ್ಷದ ಬಾಲಕಿಯೂ ಬಲಿಯಾಗಿರುವುದು ದುರಂತ.

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಸುತ್ತಲಿನ ಪ್ರದೇಶದಲ್ಲಿ ಬಡಮಕ್ಕಳನ್ನು ಟಾರ್ಗೆಟ್​ ಮಾಡಿ ಅತ್ಯಾಚಾರ ಮಾಡಿ ಬಳಿಕ ಕೊಲೆ ಮಾಡುತ್ತಿದ್ದ ಕೀಚಕನನ್ನು ಪೊಲೀಸರು 6 ವರ್ಷದ ಬಾಲಕಿ ಅಪಹರಣ, ಹತ್ಯೆ ಪ್ರಕರಣದಲ್ಲಿ ಬಂಧಿಸಿದ್ದರು. ವಿಚಾರಣೆಯ ವೇಳೆ ಈತ ತನ್ನ ಕ್ರೌರ್ಯದ ಬಗ್ಗೆ ಒಂದೊಂದಾಗಿ ಬಾಯ್ಬಿಟ್ಟಿದ್ದಾನೆ.

ರವೀಂದರ್ ಕುಮಾರ್ ಕೀಚಕ ಆರೋಪಿ. ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಅಪ್ರಾಪ್ತರ ಮೇಲೆ ಅತ್ಯಾಚಾರ ಮತ್ತು ಹತ್ಯೆ ಮಾಡಿದ 38 ಪ್ರಕರಣಗಳನ್ನು ಈತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ದೆಹಲಿಯ ವಾಯುವ್ಯ ಜಿಲ್ಲೆಯಲ್ಲಿ 6 ವರ್ಷದ ಬಾಲಕಿ ಅತ್ಯಾಚಾರವಾಗಿ ಕೊಲೆಯಾಗಿದ್ದಳು. ಪ್ರಕರಣಕ್ಕೆ ಸಂಬಂಧಿಸಿದಂತೆ 2015ರಲ್ಲಿ ರವೀಂದರ್​​ ಕುಮಾರ್​ನನ್ನು ಪೊಲೀಸರು ಬಂಧಿಸಿದ್ದರು. ಕೊಲೆ ಮಾಡಿದ ಸ್ಥಳಕ್ಕೆ ಈತನನ್ನು ಕರೆದೊಯ್ದಲಾಗಿತ್ತು. ಬಾಲಕಿಯ ಮೃತದೇಹವು ನಿರ್ಮಾಣ ಹಂತದ ಮೂರು ಅಂತಸ್ತಿನ ಕಟ್ಟಡದಲ್ಲಿ ಪತ್ತೆಯಾಗಿತ್ತು.

ಇದನ್ನೂ ಓದಿ:ರಿಲಾಕ್ಸ್ ಮೂಡ್​ನಲ್ಲಿ ನಾಯಕರು, ಆಪ್ತರೊಂದಿಗೆ ಚಹಾಕೂಟ : 141 ಸ್ಥಾನ ಗೆಲ್ಲುತ್ತೇವೆ ಎಂದ ಡಿಕೆಶಿ

ಬಳಿಕ ಕಟ್ಟಡದ ಎರಡನೇ ಮಹಡಿಯಲ್ಲಿ ಕೆಲವು ದಾಖಲೆಗಳು ಸಿಕ್ಕಿದ್ದವು. ಇದರಲ್ಲಿ ಇನ್ನೊಬ್ಬ ವ್ಯಕ್ತಿಯ ಹೆಸರಿನಲ್ಲಿನ ಡ್ರೈವಿಂಗ್ ಲೈಸೆನ್ಸ್ ಕೂಡ ಸಿಕ್ಕಿತ್ತು. ಆತನನ್ನೂ ಪೊಲೀಸರು ಪತ್ತೆ ಮಾಡಿದ್ದರು. ತನ್ನನ್ನು ಹಾಗೂ ಸಹೋದರನನ್ನು ರವೀಂದರ್​ ಹಲ್ಲೆ ಮಾಡಿ ತಮ್ಮಲ್ಲಿದ್ದ ದ್ವಿಚಕ್ರವಾಹನ, ಚಾಲನಾ ಪರವಾನಗಿ, ಮೊಬೈಲ್ ಫೋನ್ ಹಾಗೂ 2000 ರೂ.ಗಳನ್ನು ದೋಚಿ ಪರಾರಿಯಾಗಿದ್ದ ಎಂದು ಅವರು ತಿಳಿಸಿದ್ದರು. ಈ ವೇಳೆ ಪೊಲೀಸರು ರವೀಂದರ್ ಮೇಲೆ ದಾಳಿ ನಡೆಸಿದ್ದರು.

ಬಡಮಕ್ಕಳೇ ಈತನ ಟಾರ್ಗೆಟ್​:ಉತ್ತರಪ್ರದೇಶದ ಬದೌನ್​ ಮೂಲದ ಆರೋಪಿ ರವೀಂದರ್​, ಬಡಮಕ್ಕಳನನ್ನೇ ಟಾರ್ಗೆಟ್​​ ಮಾಡುತ್ತಿದ್ದ. ಚಿಕ್ಕ ಬಾಲಕಿಯರನ್ನು ಮಾತ್ರ ಗುರಿಯಾಗಿಸಿಕೊಂಡು ಈತ ಕೃತ್ಯ ಎಸಗುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಬಾಲಕಿಯರು ಕಾಣೆಯಾದ ಬಳಿಕ ಅವರ ಪೋಷಕರು ಸಲ್ಲಿಸಿದ ದೂರುಗಳ ಬಗ್ಗೆ ಕ್ರಮೇಣ ಹೆಚ್ಚು ಗಮನ ಹರಿಸುವುದಿಲ್ಲ ಎಂದು ಈತನ ನಂಬಿಕೆಯಾಗಿತ್ತು. ಇದರಿಂದಲೇ ಈತ ದೆಹಲಿ, ಹರಿಯಾಣ, ಉತ್ತರಪ್ರದೇಶದಲ್ಲಿ ಕುಕೃತ್ಯಗಳನ್ನು ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡೂವರೆ ವರ್ಷದ ಬಾಲಕಿ ಬಲಿ:ಈತನ ರಕ್ತ ದಾಹಕ್ಕೆ ಎರಡೂವರೆ ವರ್ಷದ ಬಾಲಕಿ ಕೂಡ ಬಲಿಯಾಗಿದ್ದಾಳೆ. 2011ರಲ್ಲಿ ದೆಹಲಿಯ ಹೊರವಲಯದಲ್ಲಿ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿ ಶವವನ್ನು ಕಾಡಿನಲ್ಲಿ ಬಿಸಾಡಿದ್ದ. ಇದೇ ರೀತಿ 30 ಮಕ್ಕಳ ಮೇಲೆ ಅತ್ಯಾಚಾರ ಎಸಗಿದ್ದನ್ನು ರವೀಂದರ್ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಸುಡಾನ್​ನಲ್ಲಿ ಮತ್ತೆ ಭುಗಿಲೆದ್ದ ಸಂಘರ್ಷ: ರಾಜಧಾನಿ ಖಾರ್ಟೂಮ್​​ನಲ್ಲಿ ಭೀಕರ ಬಾಂಬಿಂಗ್!

ABOUT THE AUTHOR

...view details