ಕರ್ನಾಟಕ

karnataka

By

Published : Aug 28, 2021, 9:16 PM IST

ETV Bharat / bharat

ಅಮಾನವೀಯ: ವ್ಯಕ್ತಿಯನ್ನ ಪಿಕಪ್ ವಾಹನಕ್ಕೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದರು... Video

ಆದಿವಾಸಿ ಬುಡಕಟ್ಟು ಜನಾಂಗದ ವ್ಯಕ್ತಿಯನ್ನು ಕಳ್ಳನೆಂದು ಶಂಕಿಸಿ ಕಾಲಿಗೆ ಹಗ್ಗಕಟ್ಟಿ ಎಳೆದೊಯ್ದಿರುವ ಅಮಾನವೀಯ ಘಟನೆ ಭೋಪಾಲ್​ ಜಿಲ್ಲೆಯಲ್ಲಿ ನಡೆದಿದೆ.

ಪಿಕಪ್
ಪಿಕಪ್

ಭೋಪಾಲ್(ಮಧ್ಯಪ್ರದೇಶ): ಕಾಲಿಗೆ ಹಗ್ಗ ಕಟ್ಟಿ ಪಿಕ್​ವಾಹನದ ಮೂಲಕ ಎಳೆದೊಯ್ದು ವ್ಯಕ್ತಿ ಮೃತಪಟ್ಟಿರುವ ಅಮಾನವೀಯ ಘಟನೆ ನೀಮುಚ್​ನಲ್ಲಿ ನಡೆದಿದೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಇನ್ನಿಲ್ಲದ ಟೀಕೆ ವ್ಯಕ್ತವಾಗುತ್ತಿದೆ.

ಕಳ್ಳನೆಂದು ಶಂಕೆ: ಪಿಕಪ್ ವಾಹನದಲ್ಲಿ ವ್ಯಕ್ತಿ ಎಳೆದೊಯ್ದ ಕಿಡಿಗೇಡಿಗಳು.. ದಾರುಣ ಸಾವು

45 ವರ್ಷದ ವ್ಯಕ್ತಿಯ ಮೇಲೆ ಕಳ್ಳತನದ ಆರೋಪ ಮಾಡಿರುವ ಗುಂಪೊಂದು ಆತನಿಗೆ ಹಿಗ್ಗಾಮುಗ್ಗ ಥಳಿಸಿ, ಈ ಕೃತ್ಯವೆಸಗಿದೆ. ಬನದಾ ಹಳ್ಳಿಯ ನಿವಾಸಿ ಕನ್ಹಾ ಅಲಿಯಾಸ್ ಕನ್ಹಿಯಾ ಭೀಲ್ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ನಮಗೊಬ್ಬ ಕಳ್ಳ ಸಿಕ್ಕಿದ್ದಾನೆಂದು ಟ್ರಕ್ ಚಾಲಕ, ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು, ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಆ ವೇಳೆಗಾಗಲೇ ವ್ಯಕ್ತಿ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ.

ಗುರುವಾರ ಜೆತಿಯಾ ಗ್ರಾಮದಲ್ಲಿ ನಡೆದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಆದಿವಾಸಿ ವ್ಯಕ್ತಿಯನ್ನು 8 ಜನರ ಗುಂಪೊಂದು ಹಿಗ್ಗಾಮುಗ್ಗಾ ಥಳಿಸುತ್ತಿದೆ. ಕನ್ಹಾ ಹೊಡೆಯಬೇಡಿ ಎಂದು ಎಷ್ಟೇ ಮನವಿ ಮಾಡಿದೂ, ಗುಂಪು ಕ್ಯಾರೆ ಎಂದಿಲ್ಲ.

ಇದನ್ನೂ ಓದಿ: ಸ್ಕೇಟಿಂಗ್ ಚಕ್ರದ ಬೋಲ್ಟ್​​​ನಲ್ಲಿ ಚಿನ್ನ ಸಾಗಾಟ: ₹16 ಲಕ್ಷ ಮೌಲ್ಯದ ಚಿನ್ನ ವಶಕ್ಕೆ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನೀಮುಚ್​ನ ಎಸ್​ಪಿ ಸೂರ್ಜ್ ವರ್ಮಾ, ವಿಡಿಯೋ ಆಧರಿಸಿ ಐವರನ್ನು ಬಂಧಿಸಲಾಗಿದೆ. ಉಳಿದವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದರು. ಬಂಧಿತರ ವಿರುದ್ಧ ಕೊಲೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ, ಇತರೆ ಐಪಿಸಿ ಸೆಕ್ಷನ್​ಗಳಡಿ ಪ್ರಕರಣ ದಾಖಲಿಸಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್​ನಾಥ್​ ಟ್ವೀಟ್ ಮಾಡಿದ್ದು, ಮಧ್ಯಪ್ರದೇಶದಲ್ಲಿ ಏನು ನಡೆಯುತ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ABOUT THE AUTHOR

...view details