ಕರ್ನಾಟಕ

karnataka

ETV Bharat / bharat

ಕಾನ್​​ ಚಲನಚಿತ್ರೋತ್ಸವದ ರೆಡ್​ ಕಾರ್ಪೆಟ್​​ ಮೇಲೆ ಕಾಣಿಸಿಕೊಂಡ ಭಾರತದ ಮೊದಲ ಜಾನಪದ ಗಾಯಕ! - ರೆಡ್​ ಕಾರ್ಪೆಟ್​​ ಮೇಲೆ ಕಾಣಿಸಿಕೊಂಡ ಭಾರತದ ಮೊದಲ ಜಾನಪದ ಗಾಯಕ

ವಿಶ್ವ ಸಿನಿಮಾರಂಗದ ಅತಿದೊಡ್ಡ ಕಾನ್​​ ಚಿತ್ರೋತ್ಸವದ ರೆಡ್​ ಕಾರ್ಪೆಟ್​​ ಮೇಲೆ ರಾಜಸ್ಥಾನದ ಗಾಯಕ ಮಾಮೆ ಖಾನ್ ಕಾಣಿಸಿಕೊಂಡು ಇತಿಹಾಸ ನಿರ್ಮಿಸಿದ್ದಾರೆ.

Rajasthani folk singer Mame Khan
ರಾಜಸ್ಥಾನದ ಗಾಯಕ ಮಾಮೆ ಖಾನ್

By

Published : May 18, 2022, 7:35 PM IST

ಜೈಪುರ (ರಾಜಸ್ಥಾನ): ಫ್ರಾನ್ಸ್​ನಲ್ಲಿ ನಡೆಯುತ್ತಿರುವ 75ನೇ ಕಾನ್​​ ಚಲನಚಿತ್ರೋತ್ಸವದಲ್ಲಿ ರಾಜಸ್ಥಾನದ ಗಾಯಕ ಹೊಸ ಇತಿಹಾಸ ಬರೆದಿದ್ದಾರೆ. ಕಾನ್​​​​ ಚಲನಚಿತ್ರೋತ್ಸವದ ರೆಡ್​​ ಕಾರ್ಪೆಟ್​ ಮೇಲೆ ನಡೆದ ಭಾರತದ ಮೊದಲ ಜಾನಪದ ಗಾಯಕ ಎಂಬ ಹೆಗ್ಗಳಿಗೆ ಮಾಮೆ ಖಾನ್ ಪಾತ್ರವಾಗಿದ್ದಾರೆ.

ಕಾನ್​ ಚಲನಚಿತ್ರೋತ್ಸವದ ರೆಡ್​ ಕಾರ್ಪೆಟ್​​ ಮೇಲೆ ಕಾಣಿಸಿಕೊಂಡ ಭಾರತದ ಮೊದಲ ಜಾನಪದ ಗಾಯಕ

ರಾಜಸ್ಥಾನವು ಜಾನಪದ ಕಲೆ ಮತ್ತು ಸಂಸ್ಕೃತಿ ಶ್ರೀಮಂತ ನಾಡಾಗಿದ್ದು, ಗಾಯಕ ಮಾಮೆ ಖಾನ್ ರಾಜಸ್ಥಾನಿ ಸಾಂಪ್ರದಾಯಿಕ ಉಡುಗೆಯಲ್ಲಿ ರೆಡ್​ ಕಾರ್ಪೆಟ್​ನಲ್ಲಿ ಕಾಣಿಸಿಕೊಂಡು ಮಿಂಚಿದ್ದಾರೆ. ಮೇ 17ರಿಂದ ವಿಶ್ವ ಸಿನಿಮಾರಂಗದ ಅತಿದೊಡ್ಡ ಚಿತ್ರೋತ್ಸವ ಆರಂಭವಾಗಿದ್ದು, ಇದು ಮೇ 28ರವರೆಗೆ ನಡೆಯಲಿದೆ. ಎರಡನೇ ದಿನವಾದ ಬುಧವಾರ ರಾಜಸ್ಥಾನಿ ಗಾಯಕ ಮಾಮೆ ಖಾನ್ ರೆಡ್ ಕಾರ್ಪೆಟ್ ಮೇಲೆ ನಡೆದ ಮೊದಲ ಭಾರತೀಯ ಜಾನಪದ ಕಲಾವಿದರಾಗಿ ಹೊರಹೊಮ್ಮಿದರು.

ಕಾನ್​​ ಚಲನಚಿತ್ರೋತ್ಸವದ ರೆಡ್​ ಕಾರ್ಪೆಟ್​​ ಮೇಲೆ ಕಾಣಿಸಿಕೊಂಡ ಭಾರತದ ಮೊದಲ ಜಾನಪದ ಗಾಯಕ

ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಸಾಟೊ ಗ್ರಾಮದ ಮಾಮೆ ಖಾನ್, ಬಾಲಿವುಡ್‌ನಲ್ಲಿ ಅನೇಕ ಹಾಡುಗಳನ್ನು ರಚಿಸಿದ್ದಾರೆ ಮತ್ತು ಹಾಡಿದ್ದಾರೆ. ಈ ಕ್ಯಾನ್ಸ್​​ ಚಲನಚಿತ್ರೋತ್ಸವದಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್, ದೀಪಿಕಾ ಪಡುಕೋಣೆ, ಶೇಖರ್ ಕಪೂರ್, ಪೂಜಾ ಹೆಗ್ಡೆ, ನವಾಜುದ್ದೀನ್ ಸಿದ್ದಿಕಿ, ತಮನ್ನಾ ಭಾಟಿಯಾ, ಆರ್.ಮಾಧವನ್, ಎ.ಆರ್.ರೆಹಮಾನ್, ಪ್ರಸೂನ್ ಜೋಷಿ, ವಾಣಿ ತ್ರಿಪಾಠಿ, ರಿಕಿ ಕೇಜ್ ಸೇರಿದಂತೆ ಮುಂತಾದವರು ಭಾಗವಹಿಸಿದ್ದಾರೆ.

ಇದನ್ನೂ ಓದಿ:'ನಾವು ಶ್ರೇಷ್ಠತೆಯ ತುತ್ತತುದಿಯಲ್ಲಿದ್ದೇವೆ, ಕಾನ್​ ಫಿಲ್ಮ್​ ಫೆಸ್ಟಿವಲ್​​ ಭಾರತದಲ್ಲೂ ನಡೆಯುವ ದಿನ ಬರುತ್ತೆ': ದೀಪಿಕಾ

ABOUT THE AUTHOR

...view details