ಕರ್ನಾಟಕ

karnataka

ಕೋವಿಡ್​ ಎರಡನೇ ಅಲೆ: ಅಗತ್ಯ ಆಮ್ಲಜನಕಕ್ಕಾಗಿ ಪ್ರಧಾನಿಗೆ ದೀದಿ ಪತ್ರ- ಕೇಂದ್ರದ ವಿರುದ್ಧ ಆಕ್ರೋಶ

By

Published : May 7, 2021, 5:37 PM IST

ಒಂದು ಕಡೆ ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳಕ್ಕೆ ಸಮರ್ಪಕವಾಗಿ ಆಮ್ಲಜನಕ ಹಂಚಿಕೆ ಮಾಡುತ್ತಿಲ್ಲ. ಮತ್ತೊಂದು ಕಡೆ ಬಂಗಾಳಕ್ಕೆ ಇರುವ ಕೋಟಾವನ್ನು ಮೊಟಕುಗೊಳಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ. ನಮ್ಮ ರಾಜ್ಯದ ಕೋಟಾದ ಆಮ್ಲಜನಕವನ್ನು ಇತರ ರಾಜ್ಯಗಳಿಗೆ ಪೂರೈಸುತ್ತಿದೆ ಎಂದು ಪತ್ರದಲ್ಲಿ ಅವರು ಆರೋಪಿಸಿದ್ದಾರೆ.

ಕೋವಿಡ್​ ಎರಡನೇ ಅಲೆ: ಅಗತ್ಯ ಆಮ್ಲಜನಕಕ್ಕಾಗಿ ಪ್ರಧಾನಿಗೆ ದೀದಿ ಪತ್ರ- ಕೇಂದ್ರದ ವಿರುದ್ಧ ಆಕ್ರೋಶ
ಕೋವಿಡ್​ ಎರಡನೇ ಅಲೆ: ಅಗತ್ಯ ಆಮ್ಲಜನಕಕ್ಕಾಗಿ ಪ್ರಧಾನಿಗೆ ದೀದಿ ಪತ್ರ- ಕೇಂದ್ರದ ವಿರುದ್ಧ ಆಕ್ರೋಶ

ಕೋಲ್ಕತ್ತಾ: ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಆಮ್ಲಜನಕ ಪೂರೈಸುವ ಭರವಸೆ ನೀಡುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಒಂದು ಕಡೆ ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳಕ್ಕೆ ಸಮರ್ಪಕವಾಗಿ ಆಮ್ಲಜನಕ ಹಂಚಿಕೆ ಮಾಡುತ್ತಿಲ್ಲ. ಮತ್ತೊಂದು ಕಡೆ ಬಂಗಾಳಕ್ಕೆ ಇರುವ ಕೋಟಾವನ್ನು ಮೊಟಕುಗೊಳಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ. ನಮ್ಮ ರಾಜ್ಯದ ಕೋಟಾದ ಆಮ್ಲಜನಕವನ್ನು ಇತರ ರಾಜ್ಯಗಳಿಗೆ ಪೂರೈಸುತ್ತಿದೆ ಎಂದು ಪತ್ರದಲ್ಲಿ ಅವರು ಆರೋಪಿಸಿದ್ದಾರೆ. "ಆದಾಗ್ಯೂ, ಆಮ್ಲಜನಕದ ಪೂರೈಕೆಯಲ್ಲಿ ಅಸಮರ್ಪಕತೆಯಿಂದಾಗಿ ಪಶ್ಚಿಮ ಬಂಗಾಳದ ಪರಿಸ್ಥಿತಿ ಆತಂಕಕಾರಿ ಹಂತ ತಲುಪುತ್ತಿದೆ. ಪಶ್ಚಿಮ ಬಂಗಾಳಕ್ಕೆ ಪ್ರತಿದಿನ 550 ಮೆಟ್ರಿಕ್ ಟನ್ ಆಮ್ಲಜನಕದ ಅವಶ್ಯಕತೆಯಿದೆ. ಇದನ್ನು ತಕ್ಷಣ ಕೇಂದ್ರ ಸರ್ಕಾರ ಪೂರೈಕೆ ಮಾಡಬೇಕು. ಈ ಸಂಬಂಧ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮಮತಾ ಬ್ಯಾನರ್ಜಿ ಪ್ರಧಾನಿ ಅವರಿಗೆ ಮನವಿ ಮಾಡಿದ್ದಾರೆ.

ಸಾಕಷ್ಟು ಪ್ರಮಾಣದ ಆಮ್ಲಜನಕದ ಕೊರತೆ ಹಿನ್ನೆಲೆಯಲ್ಲಿ ಜೀವಗಳಿಗೆ ಅಪಾಯ ಎದುರಾಗುವ ಭೀತಿ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ, ತುರ್ತು ಸಹಕಾರ ನೀಡುವ ಭರವಸೆಯಲ್ಲಿ ತಾವಿರುವುದಾಗಿ ಪತ್ರದಲ್ಲಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಸಿಎಂ ಮಮತಾ ಬ್ಯಾನರ್ಜಿ ಅವರ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಪ್ರಸ್ತುತ ದೈನಂದಿನ ಆಮ್ಲಜನಕದ ಅವಶ್ಯಕತೆ 470 ಮೆಟ್ರಿಕ್ ಟನ್ ಮತ್ತು ಮುಂದಿನ ಏಳು ರಿಂದ ಎಂಟು ದಿನಗಳಲ್ಲಿ ದಿನಕ್ಕೆ 550 ಮೆಟ್ರಿಕ್ ಟನ್‌ಗೆ ಹೆಚ್ಚಾಗುವ ನಿರೀಕ್ಷೆಯಿದೆ.

ಆದ್ದರಿಂದ ಕೇಂದ್ರ ಸರ್ಕಾರವು ಹೆಚ್ಚುವರಿ ಆಮ್ಲಜನಕದ ಪೂರೈಕೆ ಖಚಿತಪಡಿಸಿಕೊಳ್ಳಬೇಕು. ಪಶ್ಚಿಮ ಬಂಗಾಳಕ್ಕೆ ಸಮರ್ಪಕ ಆಮ್ಲಜನಕವನ್ನು ಪೂರೈಸುವ ಬದಲು, ಕೇಂದ್ರ ಸರ್ಕಾರವು ಇತರ ರಾಜ್ಯಗಳಿಗೆ ಸರಬರಾಜು ಮಾಡಲು ರಾಜ್ಯದ ಕೋಟಾ ಮೊಟಕುಗೊಳಿಸುತ್ತಿದೆ ಎಂದು ಅವರು ಇದೇ ವೇಳೆ ಆರೋಪಿಸಿದ್ದಾರೆ.

ABOUT THE AUTHOR

...view details