ನವದೆಹಲಿ:ಕಾಂಗ್ರೆಸ್ ಸ್ಪಂದಿಸದ ಕಾರಣ ಮಮತಾ ಬ್ಯಾನರ್ಜಿ ಅವರು ಎಲ್ಲಾ ಸಮಾನ ಮನಸ್ಕ ಪಕ್ಷಗಳನ್ನು ಒಟ್ಟುಗೂಡಿಸಿ ವಿರೋಧ ಪಕ್ಷವನ್ನು ಕಟ್ಟಲು ಮಾಡಿದ ಪ್ರಯತ್ನಗಳು ವಿಫಲವಾದವು ಎಂದು ತೃಣಮೂಲ ಕಾಂಗ್ರೆಸ್ ಸಂಸದ ಸುಖೆಂದು ಶೇಖರ್ ರಾಯ್ ಅವರು ಹೇಳಿದ್ದಾರೆ.
ಸಂಸತ್ತಿನ ಕೊನೆಯ ಅಧಿವೇಶನದ ಸಮಯದಲ್ಲಿ ಮತ್ತು ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ನಂತರ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ದೆಹಲಿಗೆ ತೆರಳಿ, ಸೋನಿಯಾ ಗಾಂಧಿ ಮತ್ತು ವಿವಿಧ ರಾಜಕೀಯ ಪಕ್ಷಗಳ ಇತರ ಕೆಲವು ನಾಯಕರನ್ನು ಭೇಟಿ ಮಾಡಿದರು. ಬಿಜೆಪಿಯ ಸವಾಲುಗಳನ್ನು ಗಂಭೀರವಾಗಿ ಪರಿಗಣಿಸಲು ಎಲ್ಲರೂ ಒಂದೇ ಒಟ್ಟಾಗಬೇಕು ಎಂದು ಅವರು ಮನವಿ ಮಾಡಿದರು" ಎಂದು ಟಿಎಂಸಿ ಸಂಸದ ರಾಯ್ ಹೇಳಿದ್ರು.
"ಬಿಜೆಪಿ ವಿರುದ್ಧ ರಾಷ್ಟ್ರವ್ಯಾಪಿ ಪ್ರಚಾರ ಕೈಗೊಳ್ಳಲು ಸಾಮಾನ್ಯ ಕ್ರಿಯಾ ಯೋಜನೆ ರೂಪಿಸಲು ಸಮಾನ ಮನಸ್ಕ ಪಕ್ಷಗಳ ಸಭೆಗಳನ್ನು ಕರೆಯಲು ಕ್ರಮ ಕೈಗೊಳ್ಳುವಂತೆ ಅವರು ಸೋನಿಯಾ ಗಾಂಧಿಯವರಲ್ಲಿ ಕೇಳಿಕೊಂಡರು. ಆದರೆ, ಕಾಂಗ್ರೆಸ್ ಪಕ್ಷವು ಬಹುಶಃ ತನ್ನ ಆಂತರಿಕ ಸಮಸ್ಯೆಗಳಲ್ಲಿ ನಿರತವಾಗಿತ್ತು, ಸೂಕ್ತ ಸ್ಪಂದನೆ ನೀಡಲಿಲ್ಲ. ತೃಣಮೂಲ ಕಾಂಗ್ರೆಸ್ ಅನಿರ್ದಿಷ್ಟಾವಧಿಯವರೆಗೆ ಕಾಯಲು ಸಾಧ್ಯವಿಲ್ಲ, ”ಎಂದು ಅವರು ಹೇಳಿದರು.