ಕರ್ನಾಟಕ

karnataka

ETV Bharat / bharat

ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಸಭೆಯಲ್ಲಿ ಪಾಲ್ಗೊಳ್ಳಲಿರುವ ಮಮತಾ, ಔತಣಕೂಟಕ್ಕೆ ಗೈರು.. - ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಸಭೆಯಲ್ಲಿ ಪಾಲ್ಗೊಳ್ಳಲಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಔತಣಕೂಟಕ್ಕೆ ಗೈರು ಹಾಜರಾಗಲಿದ್ದಾರೆ.

Mamata Banerjee
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

By

Published : Jul 15, 2023, 11:05 PM IST

Updated : Jul 16, 2023, 6:31 AM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ):ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷದ ಮೈತ್ರಿಕೂಟದ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಆದರೆ, ಔತಣಕೂಟದಲ್ಲಿ ಮಾತ್ರ ಪಾಲ್ಗೊಳ್ಳುವುದಿಲ್ಲ. ಜುಲೈ 17 ಮತ್ತು 18 ರಂದು ಬೆಂಗಳೂರಿನಲ್ಲಿ ಪ್ರತಿಪಕ್ಷಗಳು ಎರಡನೇ ಬಾರಿಗೆ ಸಭೆ ನಡೆಸಲಿವೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ಜುಲೈ 18 ರಂದು ನಡೆದ ಸಭೆಯಲ್ಲಿ ಮಮತಾ ಬ್ಯಾನರ್ಜಿ ಅವರು ಹಿಂದಿನ ದಿನ ಜುಲೈ 17ರಂದು ಔತಣಕೂಟದಲ್ಲಿ ಗೈರು ಹಾಜರಾಗಲಿದ್ದಾರೆ. ಆ ಔತಣಕೂಟದಲ್ಲಿ 17 ಪ್ರತಿಪಕ್ಷಗಳ ಎಲ್ಲಾ ಪ್ರಮುಖ ನಾಯಕರು ಉಪಸ್ಥಿತರಿರಲಿದ್ದಾರೆ. ಆದರೆ ಮಮತಾ ಮಾತ್ರ ಪಾಲ್ಗೊಳ್ಳುವುದಿಲ್ಲ.

ಜೂನ್ 23ರಂದು ನಿತೀಶ್ ಕುಮಾರ್ ನೇತೃತ್ವದಲ್ಲಿ ಪಾಟ್ನಾದಲ್ಲಿ ಮೊದಲ ಪ್ರತಿಪಕ್ಷ ಸಭೆ ನಡೆಯಿತು. ಅದರ ನಂತರ, ಪ್ರತಿ ಪಕ್ಷಗಳು ಜುಲೈ 17 ಮತ್ತು 18 ರಂದು ಎರಡು ದಿನಗಳ ಸಭೆ ನಡೆಸಲಿದ್ದು, ಮೊದಲು ಶಿಮ್ಲಾದಲ್ಲಿ ಮತ್ತು ನಂತರ ಬೆಂಗಳೂರಿನಲ್ಲಿ ನಡೆಯಲಿದೆ. 17ರಂದು ನಡೆಯಲಿರುವ ಸಮಗ್ರ ಸಭೆಯ ನಂತರ ವಿರೋಧ ಪಕ್ಷಗಳ ಉನ್ನತ ನಾಯಕರು ಭೋಜನಕೂಟಕ್ಕೆ ಭೇಟಿ ನೀಡುವುದಕ್ಕೂ ಸಹಮತ ನೀಡಿದ್ದಾರೆ. ಕಾಂಗ್ರೆಸ್ ನಾಯಕಿ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಆಗಮಿಸಲಿದ್ದಾರೆ. ವಿರೋಧ ಪಕ್ಷಗಳ ಔತಣಕೂಟದಲ್ಲಿ ಮಮತಾ ಬ್ಯಾನರ್ಜಿ ಭಾಗವಹಿಸುವುದಿಲ್ಲ.

ಸಿಎಂ ಮಮತಾ ಬ್ಯಾನರ್ಜಿ ಶಸ್ತ್ರಚಿಕಿತ್ಸೆ:ಮುಖ್ಯಮಂತ್ರಿಯ ಮಮತಾ ಬ್ಯಾನರ್ಜಿ ಶಸ್ತ್ರಚಿಕಿತ್ಸೆಯ ನಂತರ ಅನುಸರಿಸಬೇಕಾದ ಹಲವಾರು ನಿಯಮಗಳು ಇರುತ್ತವೆ. ಇದರಿಂದ ತೃಣಮೂಲ ಔತಣಕೂಟದಲ್ಲಿ ಗೈರುಹಾಜರಾಗಲಿದೆ. ಆದರೆ, ಜುಲೈ 18ರಂದು ದಿನಪೂರ್ತಿ ನಡೆಯುವ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಜೂನ್ 27 ರಂದು, ಉತ್ತರ ಬಂಗಾಳದ ಸೇವಕ್ ಏರ್‌ಬೇಸ್‌ನಲ್ಲಿ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್ ಸಮಯದಲ್ಲಿ ಮಮತಾ ಬ್ಯಾನರ್ಜಿ ಅವರ ಎಡ ಮೊಣಕಾಲಿಗೆ ಗಾಯವಾಗಿತ್ತು. ಆ ನಂತರ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ಮುಖ್ಯಮಂತ್ರಿಯವರ ಎಡ ಮೊಣಕಾಲಿಗೆ ಮೈಕ್ರೋಸರ್ಜರಿ ಕೂಡ ಮಾಡಲಾಯಿತು. ಮೊಣಕಾಲಿನ ಗಾಯದಿಂದಾಗಿ ಮಮತಾ ಅವರು ಪಂಚಾಯತ್ ಚುನಾವಣೆಯ ಪ್ರಚಾರಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಆದರೆ, ಮುಖ್ಯಮಂತ್ರಿಗೆ ವಿಮಾನ ಹತ್ತಲು ಹಾಗೂ ವಿರೋಧ ಪಕ್ಷಗಳ ಸಭೆಯಲ್ಲಿ ಪಾಲ್ಗೊಳ್ಳಲು ವೈದ್ಯರು ಅನುಮತಿ ನೀಡಿದ್ದಾರೆ ಎಂದು ತೃಣಮೂಲ ಮೂಲಗಳು ತಿಳಿಸಿವೆ.

ಅದೇ ಸಮಯದಲ್ಲಿ, ಅವರು ಸಾಧ್ಯವಾದಷ್ಟು ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಅಲ್ಲದೆ, ವೈದ್ಯರು ಕೆಲವು ನಿರ್ಬಂಧಗಳನ್ನು ವಿಧಿಸಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳು ಭೋಜನವನ್ನು ಬಿಡುತ್ತಾರೆ. ಆದರೆ, ಜುಲೈ 18ರಂದು ನಡೆಯಲಿರುವ ದಿನದ ಸಭೆಯಲ್ಲಿ ಮಮತಾ ಪಾಲ್ಗೊಳ್ಳಲಿದ್ದಾರೆ.

ಸಭೆಯಲ್ಲಿ ಭಾವಹಿಸುವವರು ಯಾರು?:ಮತ್ತೊಂದೆಡೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 17ರಂದು ಬೆಂಗಳೂರಿನಲ್ಲಿ ವಿರೋಧ ಪಕ್ಷಗಳಿಗೆ ಔತಣಕೂಟವನ್ನು ಆಯೋಜಿಸಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಪಕ್ಷಗಳ ಎರಡನೇ ಸಭೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರು ಭಾಗವಹಿಸುವ ನಿರೀಕ್ಷೆಯಿದೆ.

ಆಮ್ ಆದ್ಮಿ ಸೇರಿದಂತೆ 24 ವಿರೋಧ ಪಕ್ಷಗಳನ್ನು ಸಭೆಗೆ ಆಹ್ವಾನಿಸಲಾಗಿದೆ. ತೃಣಮೂಲ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮತ್ತು ರಾಜ್ಯಸಭಾ ಸಂಸದ ಡೆರೆಕ್ ಒಬ್ರೇನ್ ಅವರು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಜೊತೆಗೆ ವಿರೋಧ ಪಕ್ಷದ ಮೈತ್ರಿಕೂಟದ ಸಭೆಗೆ ಹೋಗಲಿದ್ದಾರೆ. ತೃಣಮೂಲ ಮೂಲಗಳ ಪ್ರಕಾರ ಅಭಿಷೇಕ್ ಬ್ಯಾನರ್ಜಿ ಅವರು ಮುಖ್ಯಮಂತ್ರಿಯವರ ಪ್ರತಿನಿಧಿಯಾಗಿ ಔತಣಕೂಟದಲ್ಲಿ ಪಾಲ್ಗೊಳ್ಳಬಹುದು. ವೈದ್ಯರ ಸಲಹೆಯಂತೆ ಮಮತಾ ಬ್ಯಾನರ್ಜಿ ಸಭೆ ಮುಗಿಸಿ ಶೀಘ್ರವೇ ಕೋಲ್ಕತ್ತಾಗೆ ವಾಪಸಾಗಲಿದ್ದಾರೆ ಎಂದು ಮೂಲಗಳ ತಿಳಿಸಿವೆ.

ಇದನ್ನೂ ಓದಿ:ದೆಹಲಿ ಸುಗ್ರೀವಾಜ್ಞೆ ವಿರೋಧಿಸಲು ಕಾಂಗ್ರೆಸ್​ ನಿರ್ಣಯ.. ಸೋನಿಯಾ ಗಾಂಧಿ ನೇತೃತ್ವದ ಸಭೆಯಲ್ಲಿ ನಿರ್ಧಾರ

Last Updated : Jul 16, 2023, 6:31 AM IST

ABOUT THE AUTHOR

...view details