ಪಣಜಿ: ತೃಣಮೂಲ ಕಾಗ್ರೆಸ್ ಅಗ್ರ ನಾಯಕಿ, ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಇದೇ 28ರಂದು ಗೋವಾಗೆ ಭೇಟಿ ನೀಡುತ್ತಿದ್ದಾರೆ. ಮುಂದಿನ ವರ್ಷದ ಗೋವಾದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆಡಳಿತ ಪಕ್ಷ ಬಿಜೆಪಿಯನ್ನು ಮಣಿಸಲು ಪಣತೊಟ್ಟಿರುವ ದೀದಿ, ಇತರೆ ಪಕ್ಷಗಳು ಟಿಎಂಸಿಯೊಂದಿಗೆ ಕೈಜೋಡಿಸುವಂತೆ ಆಹ್ವಾನ ನೀಡಿದ್ದಾರೆ.
2022ಕ್ಕೆ ನಡೆಯುವ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಸ್ಪರ್ಧಿಸುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈಗಾಗಲೇ ಘೋಷಣೆ ಮಾಡಿದ್ದಾರೆ. 28 ರಂದು ಗೋವಾಕ್ಕೆ ನನ್ನ ಚೊಚ್ಚಲ ಭೇಟಿಗೆ ತಯಾರಿ ನಡೆಸುತ್ತಿದ್ದು, ಬಿಜೆಪಿಯನ್ನು ಸೋಲಿಸಲು ಮತ್ತು ಅವರ ವಿಭಜಕ ಅಜೆಂಡಾವನ್ನು ಸೋಲಿಸಲು ಎಲ್ಲಾ ವ್ಯಕ್ತಿಗಳು, ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳಿಗೆ ನಾನು ಕರೆ ನೀಡುತ್ತೇನೆ. ಕಳೆದ 10 ವರ್ಷಗಳಿಂದ ಗೋವಾದ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ ಎಂದು ದೀದಿ ಟ್ಟೀಟ್ ಮಾಡಿದ್ದಾರೆ.