ಕರ್ನಾಟಕ

karnataka

ETV Bharat / bharat

ಉತ್ತರ ಬಂಗಾಳ ಪ್ರವಾಸದ ಕೊನೆ ದಿನ ಮಕ್ಕಳೊಂದಿಗೆ ಕಾಲ ಕಳೆದ ಸಿಎಂ ಮಮತಾ ಬ್ಯಾನರ್ಜಿ - ಉತ್ತರ ಬಂಗಾಳ ಪ್ರವಾಸ ಕೈಗೊಂಡಿದ್ದ ಮಮತಾ ಬ್ಯಾನರ್ಜಿ

ಕಳೆದ ಕೆಲ ದಿನಗಳಿಂದ ಸಿಎಂ ಮಮತಾ ಬ್ಯಾನರ್ಜಿ ಅವರು ಉತ್ತರ ಬಂಗಾಳ ಪ್ರವಾಸ ಕೈಗೊಂಡಿದ್ದರು. ಪ್ರವಾಸದ ಕೊನೆ ದಿನವನ್ನು ಅಲ್ಲಿನ ಸ್ಥಳೀಯ ಮಕ್ಕಳೊಂದಿಗೆ ಕಳೆದರು.

Mamata Banerjee Spends Nice Moments With Children
ಮಕ್ಕಳೊಂದಿಗೆ ಕಾಲ ಕಳೆದ ಸಿಎಂ ಮಮತಾ ಬ್ಯಾನರ್ಜಿ

By

Published : Oct 28, 2021, 7:24 PM IST

ಕುರ್ಸಿಯಾಂಗ್‌(ಪಶ್ಚಿಮ ಬಂಗಾಳ):ಉತ್ತರ ಬಂಗಾಳ ಪ್ರವಾಸದ ಕೊನೆ ದಿನವಾದ ಇಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಲ್ಲಿನ ಸ್ಥಳೀಯ ಮಕ್ಕಳೊಂದಿಗೆ ಕಾಲ ಕಳೆದರು.

ಮಕ್ಕಳೊಂದಿಗೆ ಕಾಲ ಕಳೆದ ಸಿಎಂ ಮಮತಾ ಬ್ಯಾನರ್ಜಿ

ಇಂದು ಬೆಳಗ್ಗೆ ವಾಕಿಂಗ್​ ಮಾಡಿದ ದೀದಿ, ಅಲ್ಲಿನ ಸ್ಥಳೀಯ ಮಕ್ಕಳೊಂದಿಗೆ ಕೆಲವು ಗಂಟೆಗಳನ್ನು ಕಳೆದರು. ಪುಟಾಣಿಗಳೊಂದಿಗೆ ಮಾತನಾಡಿ, ಅವರ ವ್ಯಾಸಂಗ, ಕುಟುಂಬ, ವಿದ್ಯಾಭ್ಯಾಸದ ಬಗ್ಗೆ ಕುಶಲೋಪಚರಿ ವಿಚಾರಿಸಿದರು. ಬಳಿಕ ಚಾಕೊಲೇಟ್​, ಸಿಹಿ - ತಿಂಡಿಗಳನ್ನು ಮಕ್ಕಳಿಗೆ ವಿತರಿಸಿದರು.

ಕಳೆದ ಹಲವು ದಿನಗಳಿಂದ ಮುಖ್ಯಮಂತ್ರಿಗಳು ಪಶ್ಚಿಮ ಬಂಗಾಳದಲ್ಲಿ ಬಿಡುವಿಲ್ಲದೇ ಒಂದರ ನಂತರ ಒಂದರಂತೆ ನಡೆದ ಆಡಳಿತಾತ್ಮಕ ಸಭೆಗಳು ಮತ್ತು ಇತರ ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಇದಿರಂದ ಆಯಾಸಗೊಂಡಿದ್ದ ಸಿಎಂ, ಕೊನೆ ದಿನವನ್ನು ಮಕ್ಕಳೊಂದಿಗೆ ಕಳೆದರು. ನಂತರ ಕುರ್ಸಿಯಾಂಗ್‌ನಿಂದ ಬ್ಯಾನರ್ಜಿ ಗೋವಾಕ್ಕೆ ಪ್ರಯಾಣ ಬೆಳೆಸಿದಳು.

ಬಿಜೆಪಿ ಆಡಳಿತದಲ್ಲಿರುವ ಗೋವಾದಲ್ಲಿ ಶೀಘ್ರದಲ್ಲೇ ವಿಧಾನಸಭಾ ಚುನಾವಣೆ ನಡೆಯಲಿದ್ದು, ತೃಣಮೂಲ ಕಾಂಗ್ರೆಸ್ ಅಧಿಕಾರ ಹಿಡಿಯುವ ಹಂಬಲದಲ್ಲಿದೆ. ಅದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದೆ. ಈ ಸಮಯದಲ್ಲಿ ಮಮತಾ ಭೇಟಿ ಸಾಕಷ್ಟು ಮಹತ್ವ ಪಡೆಯಲಿದೆ.

ಇದನ್ನೂ ಓದಿ: ಕ್ರೂಸ್‌ ಹಡಗಿನಲ್ಲಿ ಡ್ರಗ್ಸ್‌ ಪಾರ್ಟಿ ಪ್ರಕರಣ; ಶಾರುಖ್‌ ಖಾನ್‌ ಪುತ್ರ ಆರ್ಯನ್‌ಗೆ ಜಾಮೀನು ಮಂಜೂರು

ABOUT THE AUTHOR

...view details