ಹೌರಾ(ಪಶ್ಚಿಮ ಬಂಗಾಳ):ತೃಣಮೂಲ ಕಾಂಗ್ರೆಸ್ಗೆ(ಟಿಎಂಸಿ) ಮುಸ್ಲಿಮರು ಒಗ್ಗಟ್ಟಿನಿಂದ ಮತ ಚಲಾವಣೆ ಮಾಡುವಂತೆ ಹೇಳಿಕೆ ನೀಡಿದ್ದ ಮಮತಾ ಬ್ಯಾನರ್ಜಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿ, ಮುಂದಿನ 48 ಗಂಟೆಗಳಲ್ಲಿ ಉತ್ತರ ನೀಡುವಂತೆ ಸೂಚನೆ ನೀಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಮತಾ ಬ್ಯಾನರ್ಜಿ, ಇಂತಹ 10 ನೋಟಿಸ್ ಬಂದರೂ ತಾವು ಈ ಹೇಳಿಕೆಯಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳುವುದಿಲ್ಲ ಎಂದಿದ್ದು, ಎಲ್ಲರೂ ಒಗ್ಗಟ್ಟಿನಿಂದ ಮತಚಲಾವಣೆ ಮಾಡುವಂತೆ ಹೇಳುವೆ ಎಂದು ಹೇಳಿದ್ದಾರೆ.
4ನೇ ಹಂತದ ಚುನಾವಣೆಗೋಸ್ಕರ ಪ್ರಚಾರ ನಡೆಸುತ್ತಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇಂತಹ 10 ನೋಟಿಸ್ಗಳು ನನ್ನ ವಿರುದ್ಧ ಬಂದರೂ ನಾನು ಹೇಳಿಕೆಯಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಕೊಳ್ಳುವುದಿಲ್ಲ. ನನ್ನ ಉತ್ತರ ಒಂದೇ ಆಗಿರುತ್ತದೆ ಎಂದಿದ್ದಾರೆ. ಪ್ರತಿಯೊಬ್ಬರಿಗೂ ನಾನು ಹೇಳುತ್ತಿರುವುದು ಒಗ್ಗಟ್ಟಿನಿಂದ ಮತ ಚಲಾವಣೆ ಮಾಡಿ. ಇದರಲ್ಲಿ ಯಾವುದೇ ಒಡಕು ಬೇಡ. ಹಿಂದೂ. ಮುಸ್ಲಿಂ, ಸಿಖ್ ಹಾಗೂ ಕ್ರಿಶ್ಚಿಯನ್ ಒಗ್ಗಟ್ಟಿನಿಂದ ಮತ ಚಲಾವಣೆ ಮಾಡಿ ಎಂದಿರುವ ಅವರು, ಸಿಂಗಲ್ ವೋಟ್ ಕೂಡ ಬಿಜೆಪಿಗೆ ನೀಡಬೇಡಿ ಎಂದಿದ್ದಾರೆ.
ಇದನ್ನೂ ಓದಿ: ಕೋಮು ನೆಲೆಯಲ್ಲಿ ಮತಯಾಚನೆ ಆರೋಪ: ದೀದಿಗೆ ಚುನಾವಣೆ ಆಯೋಗದ ನೋಟಿಸ್ ಜಾರಿ