ಪೂರ್ವ ಮದಿನಿಪುರ (ಪಶ್ಚಿಮ ಬಂಗಾಳ):ಪ್ರಧಾನಿ ನರೇಂದ್ರ ಮೋದಿ 'ಟಿಎಂಸಿ ಕಳ್ಳ', ಸುವೇಂದು ಅಧಿಕಾರಿ 'ದ್ರೋಹಿ' ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಪೂರ್ವ ಮದಿನಿಪುರದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ದೀದಿ, "ಓಡಿಹೋದವರು ದ್ರೋಹ ಮಾಡಿದ್ದಾರೆ. ಯಾರು ಎಷ್ಟು ತೆಗೆದುಕೊಂಡಿದ್ದಾರೆ ಎಂದು ಕೇಳಿ. ಟಿಎಂಸಿ ಕಳ್ಳ ನರೇಂದ್ರ ಮೋದಿ, ದರೋಡೆಕೋರರ ಮುಖ್ಯಸ್ಥ. ಯಾರೇ ಬರಲಿ ಅಥವಾ ಹೋಗಲಿ ನಾನು ಹೆದರುವುದಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ನಾನು ತುಂಬಾ ಗೌರವವನ್ನು ಹೊಂದಿದ್ದೆ. ಅವರನ್ನು ತುಂಬಾ ನಂಬಿದ್ದೆ. ಮಾ ತಾರಾ ದೇವಿಯ ಚಿತ್ರವನ್ನು ನಾನೇ ಚಿತ್ರಿಸಿದ್ದೇನೆ ಮತ್ತು ಅದನ್ನು ಅವರಿಗೆ ನೀಡಿದ್ದೇನೆ ಮತ್ತು ಇಂದು ಅವರು ದ್ರೋಹಿಗಳು. ನೆನಪಿಡಿ ಇವರಿಗಿಂತ ದೊಡ್ಡ ವಂಚಕ ಯಾರೂ ಇರಲಾರರು. ಮದಿನಿಪುರದ ಜನರು ಅಂತಹ ಜನರಿಂದ ತಮ್ಮನ್ನು ಮುಕ್ತಗೊಳಿಸಿಕೊಳ್ಳಬೇಕು ಎಂದು ಸುವೇಂದು ಅಧಿಕಾರಿ ವಿರುದ್ಧ ಹರಿಹಾಯ್ದರು.