ಕರ್ನಾಟಕ

karnataka

ETV Bharat / bharat

ಮಮತಾ ಬ್ಯಾನರ್ಜಿ 66 ವರ್ಷದ ಆಂಟಿ, ಸ್ವಲ್ಪ ಸಂಯಮ ಪ್ರದರ್ಶಿಸಲಿ: ಬಿಜೆಪಿ ಮುಖಂಡನ ವ್ಯಂಗ್ಯ - ಮಮತಾ ಬ್ಯಾನರ್ಜಿ

ಅವರು ಮುಖ್ಯಮಂತ್ರಿ ಆಗಿರುವುದರಿಂದ ಸ್ವಲ್ಪ ಸಂಯಮ ಪ್ರದರ್ಶಿಸಬೇಕು. ಪ್ರಧಾನಮಂತ್ರಿಗಳಿಗೆ ಅವಾಚ್ಯ ಭಾಷೆಯನ್ನು ಬಳಸುತ್ತಾರೆ. ಅವರು 66 ವರ್ಷದ ಆಂಟಿ ಎಂದು ನಂದಿಗ್ರಾಮ್​ನಲ್ಲಿ ನಡೆದ ಚುನಾವಣೆ ಪ್ರಚಾರದ ವೇಳೆ ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಹೇಳಿದರು.

Suvendu Adhikari
Suvendu Adhikari

By

Published : Apr 1, 2021, 2:08 PM IST

ಕೋಲ್ಕತ್ತಾ: ಒಂದು ಕಾಲದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿಶ್ವಾಸಾರ್ಹ ಸಹಾಯಕರಾಗಿದ್ದ ಬಿಜೆಪಿ ಮುಖಂಡ ಸುವೇಂದು ಅಧಿಕಾರಿ, ಬಂಗಾಳ ಸಿಎಂ ಅವರನ್ನ ಆಂಟಿ ಎಂದು ಸಂಬೋಧಿಸಿದ್ದು, ಇಳಿ ವಯಸ್ಸಿನಲ್ಲಿ ಅವಾಚ್ಯ ಭಾಷೆಯ ಬಳಕೆ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಅವರು ಸೋಲುವುದು ಖಚಿತ ಎಂದೂ ಅವರು ಭವಿಷ್ಯ ನುಡಿದರು. ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಡೆಯುತ್ತಿದೆ. ಗೂಂಡಾಗಿರಿಯಲ್ಲಿ ಪಾಲ್ಗೊಳ್ಳದಂತೆ ಮುಖ್ಯಮಂತ್ರಿಗೆ ಸಲಹೆ ನೀಡಿದರು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅವರು ಮುಖ್ಯಮಂತ್ರಿ ಆಗಿರುವುದರಿಂದ ಸ್ವಲ್ಪ ಸಂಯಮ ಪ್ರದರ್ಶಿಸಬೇಕು. ಪ್ರಧಾನಮಂತ್ರಿಗಳಿಗೆ ಅವಾಚ್ಯ ಭಾಷೆಯನ್ನು ಬಳಸಬಾರದು. ಅವರು 66 ವರ್ಷದ ಆಂಟಿ ಎಂದು ನಂದಿಗ್ರಾಮ್​ದಲ್ಲಿ ಮತಚಲಾವಣೆ ಬಳಿಕ ಈ ರೀತಿ ಸಂಬೋಧನೆ ಮಾಡಿದ್ದಾರೆ.

ABOUT THE AUTHOR

...view details