ಕರ್ನಾಟಕ

karnataka

ETV Bharat / bharat

ಗಂಗಾ ನದಿಯಲ್ಲಿ ತೇಲುತ್ತಿರುವ ಮೃತದೇಹಗಳ ದೃಶ್ಯ ಭಯಾನಕ: ಮಲ್ಲಿಕಾರ್ಜುನ​ ಖರ್ಗೆ

ಬಿಹಾರದ ಮಹಾದೇವ್​ ಘಾಟ್​ನಿಂದ ಸುಮಾರು ಒಂದು ಕಿಲೋ ಮೀಟರ್​ ದೂರದಲ್ಲಿ ಈ ಮೃತದೇಹಗಳು ಕಂಡು ಬಂದಿವೆ. ಕೊರೊನಾ ಸಮಯದಲ್ಲಿ ಮನೆಯಲ್ಲೇ ಮೃತಪಟ್ಟವರ ದೇಹಗಳನ್ನು ಆಯಾ ಕುಟುಂಬಸ್ಥರು ಗಂಗಾ ನದಿಗೆ ಬಿಟ್ಟಿರುವ ಶಂಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ನಿನ್ನೆ ಈಟಿವಿ ಭಾರತದಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ಇದೀಗ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜನ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಮಲ್ಲಿಕಾರ್ಜುನ್​ ಖರ್ಗೆ
ಮಲ್ಲಿಕಾರ್ಜುನ್​ ಖರ್ಗೆ

By

Published : May 11, 2021, 1:19 PM IST

Updated : May 11, 2021, 1:27 PM IST

ಹೈದರಾಬಾದ್: ನಿನ್ನೆ ಬಿಹಾರದ ಬಕ್ಸಾರ್‌ ಎಂಬಲ್ಲಿ ಗಂಗಾ ನದಿ ದಡದ ಬಳಿಯಿರುವ ಮಹಾದೇವ ಘಾಟ್​ನಲ್ಲಿ ಸುಮಾರು 50ಕ್ಕೂ ಹೆಚ್ಚು ಮೃತದೇಹಗಳು ತೇಲಿ ಬಂದಿದ್ದು, ಮೃತದೇಹಗಳನ್ನು ನಾಯಿಗಳು ತಿನ್ನುತ್ತಿರುವ ದೃಶ್ಯ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಕೊರೊನಾ ಸಮಯದಲ್ಲಿ ಮನೆಯಲ್ಲೇ ಮೃತಪಟ್ಟವರ ದೇಹಗಳನ್ನು ಆಯಾ ಕುಟುಂಬಸ್ಥರು ಗಂಗಾ ನದಿಗೆ ಬಿಟ್ಟಿರುವ ಶಂಕೆ ವ್ಯಕ್ತವಾಗಿತ್ತು.

ಈ ಬಗ್ಗೆ ಟ್ವೀಟ್​ ಮಾಡಿರುವ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ​ ಖರ್ಗೆ, ನಮ್ಮ ದೇಶ ಎಲ್ಲಿಗೆ ಬಂದು ನಿಂತಿದೆ ನೋಡಿ? ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

"ಗಂಗಾ ಮತ್ತು ಯಮುನಾದಲ್ಲಿ ತೇಲುತ್ತಿರುವ ಮೃತದೇಹಗಳ ದೃಶ್ಯಗಳು ಭಯಾನಕವಾಗಿವೆ. ತಮ್ಮ ಮನೆಯಲ್ಲಿ ಸತ್ತವರ ಕೊನೆಯ ವಿಧಿಗಳನ್ನೂ ಸಹ ಪ್ರೀತಿಪಾತ್ರರು ಮಾಡಲಾಗದಂತಹ ಸ್ಥಿತಿ ಬಂದೋದಗಿರುವುದನ್ನು ನೋಡುವುದು ನೋವಿನ ಸಂಗತಿ. ಜೀವಂತ ಅಥವಾ ಸತ್ತವರ ಬಗ್ಗೆ ಈ ಸರ್ಕಾರಕ್ಕೆ ಗೌರವವಿಲ್ಲ. ನಮ್ಮ ಮನವಿ ಅವರ ಕಿವಿಗೂ ಬೀಳುತ್ತಿಲ್ಲ" ಎಂದು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ಈಟಿವಿ ಭಾರತ ಎಕ್ಸ್​ಕ್ಲೂಸಿವ್..​ ಗಂಗಾ ನದಿಯಲ್ಲಿ ತೇಲಿ ಬಂದ್ವು 50ಕ್ಕೂ ಹೆಚ್ಚು ಮೃತದೇಹಗಳು!

Last Updated : May 11, 2021, 1:27 PM IST

ABOUT THE AUTHOR

...view details