ನವದೆಹಲಿ:ಕೆಲವು ದಿನಗಳಿಂದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಹಲವು ರೀತಿಯ ಬೆಳವಣಿಗೆ ನಡೆಯುತ್ತಿದ್ದು ಚರ್ಚೆಗೆ ಕಾರಣವಾಗಿದೆ. ಇತ್ತೀಚೆಗೆ ಕಪಿಲ್ ಸಿಬಲ್ ಪಕ್ಷದಲ್ಲಿ ಅಧ್ಯಕ್ಷರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ಕೊಟ್ಟಿದ್ದಾರೆ.
‘ಪಕ್ಷದಲ್ಲಿ ಅಧ್ಯಕ್ಷರಿಲ್ಲ ಎಂಬುದಾದರೆ ಈ ವರ್ಷದ ಆರಂಭದಲ್ಲಿ ಚುನಾವಣೆ ಹೇಗೆ ನಡೆಯಿತು?' ಎಂದು ಕೇಳಿದ್ದಾರೆ. ಅಷ್ಟೇ ಅಲ್ಲ, 'ಎಲ್ಲಾ ಪಕ್ಷಗಳಲ್ಲೂ ಒಳ ಜಗಳಗಳು ಇರುತ್ತವೆ. ಪಕ್ಷ ರಾಜಕೀಯ ಬಿಕ್ಕಟ್ಟು ಎದುರಿಸುತ್ತಿರುವುದು ಇದು ಹೊಸದೇನಲ್ಲ. ನಾವು ಶೀಘ್ರದಲ್ಲಿಯೇ ಈ ಬಿಕ್ಕಟ್ಟನ್ನು ಪರಿಹರಿಸುತ್ತೇವೆ ಮತ್ತು ಇನ್ನಷ್ಟು ಬಲವಾಗುತ್ತೇವೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.