ಕರ್ನಾಟಕ

karnataka

ETV Bharat / bharat

ದಿನವೂ ಏರುತ್ತಿರುವ ಬೆಲೆ: ಬಿಜೆಪಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ - ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ್​ ಖರ್ಗೆ ಸುದ್ದಿ

ಬೆಲೆ ಏರಿಕೆ ಹಿನ್ನೆಲೆ ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Mallikarjun Kharge outrage on central government, Petrol and disel price hike issue, Congress leader Mallikarjun Kharge news, ಬೆಲೆ ಏರಿಕೆ ವಿಚಾರ ಮಲ್ಲಿಕಾರ್ಜುನ್​ ಖರ್ಗೆ ಕೇಂದ್ರ ವಿರುದ್ಧ ಆಕ್ರೋಶ, ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆ ಏರಿಕೆ, ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ್​ ಖರ್ಗೆ ಸುದ್ದಿ,
ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಖರ್ಗೆ

By

Published : Mar 24, 2022, 2:05 PM IST

Updated : Mar 24, 2022, 3:29 PM IST

ನವದೆಹಲಿ: ಪೆಟ್ರೋಲ್ ಬೆಲೆ ಏರಿಕೆ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುನ್ನಡೆಸಿರುವ ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ​ ಖರ್ಗೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು 80,90 ಪೈಸೆ, ಒಂದು ರೂಪಾಯಿ ಅಂತಾ ಬೆಲೆ ಏರಿಸುತ್ತಲೇ ಇದ್ದಾರೆ. ಬೆಲೆ ಏರಿಕೆ ಮಾಡೋದಾದರೆ 10 - 20 ರೂಪಾಯಿಗಳನ್ನಾದರೂ ಏರಿಸಲಿ. ಇದರಿಂದ ಜನರಿಗೂ ನಿಮ್ಮ ಬಗ್ಗೆ ತಿಳಿಯುತ್ತೆ ಎಂದು ಕಟಕಿಯಾಡಿದರು.

ಬಡವರ ಜೀವನ ಜೊತೆ ಚೆಲ್ಲಾಟವಾಡುವುದನ್ನು ನಿಲ್ಲಿಸಿ, ಬೆಲೆ ಏರಿಕೆಗೆ ಸಾಮಾನ್ಯ ಜನರು ತತ್ತರಿಸಿದ್ದಾರೆ. ಪಂಚ ರಾಜ್ಯ ಚುನಾವಣೆ ಬಳಿಕ ನಾವು ಏನು ಮಾಡಿದರೂ ನಡೆಯುತ್ತೆ ಎಂಬ ಭ್ರಮೆಯಲ್ಲಿ ಬಿಜೆಪಿಯವರಿದ್ದಾರೆ. ಹೀಗಾಗಿ ಇವರು ಆಡಿದ್ದೆ ಆಟವಾಗಿದೆ. ಇದನ್ನು ನಾನು ಖಂಡಿಸುತ್ತೇನೆ ಎಂದು ಕೇಂದ್ರದ ವಿರುದ್ಧ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.


ಬಿರ್ಭೂಮ್ ಹತ್ಯಾಕಾಂಡ ಬಗ್ಗೆ ಮಾತನಾಡಿದ ಅವರು, ದೇಶದಲ್ಲಿ ನಡೆಯುತ್ತಿರುವ ಘಟನೆಗಳು ರಾಜಕೀಯ ಪ್ರೇರಿತವಾಗಿವೆ. ಬಿಜೆಪಿ ಸರ್ಕಾರದಲ್ಲಿ ಇಂತಹ ಘಟನೆಗಳ ನಡೆದರೆ ಅದರ ಬಗ್ಗೆ ಅವರು ಸಮರ್ಥನೆ ನೀಡುತ್ತಾರೆ. ಈಗ ಬಂಗಾಲದಲ್ಲಿ ನಡೆದ ಘಟನೆ ಬಗ್ಗೆ ಮತ್ತೊಂದು ಪಕ್ಷ ಸಮರ್ಥನೆ ನೀಡುತ್ತಿದೆ. ಆದರೆ, ಸಾಮಾನ್ಯ ಜನಕ್ಕೆ ತೊಂದರೆ ಕೊಡುವ ಉದ್ದೇಶ ಎಲ್ಲೆಡೆ ನಡೆಯುತ್ತಿದೆ. ಇದು ದೇಶಕ್ಕೆ ಒಳ್ಳೆಯದಲ್ಲ ಎಂದು ಹೇಳಿದರು.

ಓದಿ:ಸ್ಯಾಂಡಲ್​ವುಡ್ ಆ್ಯಕ್ಷನ್​ ಕ್ವೀನ್​ಗೆ​ ಮಾಲಾಶ್ರೀ ಎಂದು ಹೆಸರಿಟ್ಟವರಾರು?: ತೆಲುಗು ಶೋನಲ್ಲಿ ಸ್ವಾರಸ್ಯಕರ ವಿಚಾರ ಬಹಿರಂಗ

ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ಕೊಂಡೊಯ್ಯುವ ಕೆಲಸವನ್ನು ಯಾಕೆ ಮಾಡಿದರು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ರಾಜಸಭೆಯಲ್ಲಿ ಪ್ರಶ್ನಿಸಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಖರ್ಗೆ, ಜವಾಹರ್​ ಲಾಲ್​ ನೆಹರೂ ವಿಶ್ವವಿದ್ಯಾಲಯದಲ್ಲಿ ನಿರ್ಮಲಾ ಸೀತಾರಾಮನ್​ ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಇತಿಹಾಸ ಓದಿ ಅವರ ಬಗ್ಗೆ ತಿಳಿದುಕೊಂಡಿದ್ದರೆ ಒಳ್ಳೆದಾಗ್ತಿತ್ತು.

ಇಲ್ಲದಿದ್ದರೆ ಕಾಂಗ್ರೆಸ್​ ಪಕ್ಷದಲ್ಲಿರುವ ಅವರ ಪತಿ ಡಾ. ಪರಕಲ ಪ್ರಭಾಕರ್ ಅವ​ರನ್ನು ಕೇಳಿದರೆ ಸಾಕು. ಅವರು ನೆಹರೂಜೀ ಅವರ ಸಮರ್ಥಕರಾಗಿದ್ದು, ಅವರ ಬಗ್ಗೆ ಅನೇಕ ಅರ್ಟಿಕಲ್​ ಬರೆದಿದ್ದಾರೆ. ದೇಶವನ್ನು ಶಕ್ತಿಯುತವಾಗಿ ಮಾಡುವುದರಲ್ಲಿ ಮತ್ತು ಎಲ್ಲರನ್ನೂ ಒಗ್ಗೂಡಿಸುವಲ್ಲಿ ನೆಹರು ಮತ್ತು ವಲ್ಲಭಭಾಯಿ ಪಟೇಲ್​ ಪ್ರಯತ್ನಗಳ ಬಗ್ಗೆ ತಿಳಿಯಲಿ ಎಂದರು. ರಾಜ್ಯಸಭೆಯಲ್ಲಿ ಪ್ರತಿಬಾರಿ ಕಾಂಗ್ರೆಸ್​ನ್ನು ಪ್ರಶ್ನಿಸುವುದೇ ಅವರ ಅಭ್ಯಾಸವಾಗಿದೆ.

30 ವರ್ಷದೊಳಗಿನ ಯುವಕರ ದಾರಿ ತಪ್ಪಿಸುವ ಕೆಲಸ ನಿರ್ಮಲಾ ಸೀತಾರಾಮನ್​ ಮಾಡುತ್ತಿದ್ದಾರೆ. ಇದು ದೇಶಕ್ಕೆ ಒಳ್ಳೆದಲ್ಲ. ಅಟಲ್​ ಬಿಹಾರಿ ವಾಜಪೇಯಿ, ಎಲ್​.ಕೆ ಅಡ್ವಾಣಿ ಸಹ ನೆಹರು ಬಗ್ಗೆ ಮಾತನಾಡಿದರೂ ಅವರಿಗೆಲ್ಲ ಕಲಾಪಗಳಲ್ಲೇ ಉತ್ತರಿಸಿದ್ದೇವೆ. ಈಗ ನಿರ್ಮಲಾ ಸೀತಾರಾಮನ್​ ಅದೇ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಅದರ ವಿರುದ್ಧವೇ ತಿರುಗಿ ಬೀಳುತ್ತಿದ್ದಾರೆ. ಕಾಲೇಜು ಹೆಸರು ಹಾಳು ಮಾಡುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

Last Updated : Mar 24, 2022, 3:29 PM IST

ABOUT THE AUTHOR

...view details