ಪುಣೆ (ಮಹಾರಾಷ್ಟ್ರ): ಪ್ರೇಯಸಿ ಜೊತೆ ಮದುವೆಯಾಗುವ ಸಲುವಾಗಿ ಯಾವುದೋ ಇಂಜೆಕ್ಷನ್ ಕೊಟ್ಟು ಪತಿಯೇ ಸಾಯಿಸಿದ ಘಟನೆ ಪುಣೆ ಬಳಿ ನಡೆದಿದೆ. ಪತ್ನಿಯೊಂದಿಗೆ ಪ್ರೇಮ ವಿವಾಹವಾಗಿದ್ದರೂ ಇತ್ತೀಚೆಗೆ ಪರಿಚಯವಾದ ಇನ್ನೊಬ್ಬಳೊಂದಿಗೆ ಮದುವೆಯಾಗುವ ಆಸೆಯಿಂದ ಪುರುಷ ನರ್ಸ್ ಆಗಿದ್ದ ವ್ಯಕ್ತಿಯೊಬ್ಬ ಈ ದುಷ್ಕೃತ್ಯ ಎಸಗಿದ್ದಾನೆ.
ಪ್ರಕರಣದ ವಿವರ: ಮುಳಶಿ ತಾಲೂಕಿನ ಘೋಟಾವಡೆ ಪಾಟಾ ಪ್ರದೇಶದಲ್ಲಿನ ಆಸ್ಪತ್ರೆಯೊಂದರಲ್ಲಿ ಪುರುಷ ನರ್ಸ್ ಆಗಿ ಕೆಲಸ ಮಾಡುವ ಸ್ವಪ್ನಿಲ್ ವಿಭೀಷಣ ಸಾವಂತ (23 ವರ್ಷ, ಬೀಡ ಜಿಲ್ಲೆ ಆಷ್ಟಿ ತಾಲೂಕು ಸಾಂಗವಿ ನಿವಾಸಿ) ಎಂಬಾತನ ವಿವಾಹ ಪ್ರಿಯಾಂಕಾ ಕ್ಷೇತ್ರೆ (22)ಳೊಂದಿಗೆ ನಡೆದಿತ್ತು. 5 ತಿಂಗಳ ಹಿಂದೆ ಕಾಸಾರ ಅಂಬೋಲಿಗೆ ಬಂದಿದ್ದ ಅವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ನಂತರ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಹುಡುಗಿಯೊಬ್ಬಳೊಂದಿಗೆ ಸ್ವಪ್ನಿಲ್ನ ಪರಿಚಯವಾಗಿದೆ. ಪರಿಚಯ ಪ್ರೇಮಕ್ಕೆ ತಿರುಗಿದೆ. ಹೀಗಾಗಿ ಆತ ಮತ್ತೊಂದು ವಿವಾಹ ಮಾಡಿಕೊಳ್ಳುವ ಕನಸು ಕಾಣತೊಡಗಿದ್ದ. ಆದರೆ, ಇದಕ್ಕೆ ಮೊದಲ ಪತ್ನಿ ಅಡ್ಡಿಯಾಗುತ್ತಾಳೆ ಎಂದು ತಿಳಿದು ಅವಳನ್ನು ಕೊಲ್ಲುವ ಯೋಜನೆ ರೂಪಿಸಿದ್ದ.
ಇದನ್ನು ಓದಿ:'ಅಫ್ತಾಬ್ ನನ್ನ ಕೊಲೆ ಮಾಡ್ತಾನೆ, ಕಾಪಾಡಿ..' 2020ರಲ್ಲಿ ಶ್ರದ್ಧಾ ಬರೆದ ಪತ್ರ ಇಲ್ಲಿದೆ ನೋಡಿ