ಕರ್ನಾಟಕ

karnataka

ETV Bharat / bharat

ಗುಜರಾತ್​​ನಲ್ಲಿ ಕಿಶನ್​ ಹತ್ಯೆ ಪ್ರಕರಣ: ಪರಿಸ್ಥಿತಿ ಉದ್ವಿಗ್ನ, ಪೊಲೀಸರಿಂದ ಲಾಠಿಚಾರ್ಜ್​​

ಆಕ್ಷೇಪಾರ್ಹ ರೀತಿಯ ಪೋಸ್ಟ್ ಹಾಕಿದ್ದಾನೆಂಬ ಕಾರಣಕ್ಕಾಗಿ ಗುಜರಾತ್​​ನಲ್ಲಿ ಯುವಕನೋರ್ವನ ಕೊಲೆ ಮಾಡಲಾಗಿದ್ದು, ಈ ಪ್ರಕರಣ ಇದೀಗ ಉದ್ವಿಗ್ನತೆ ಪಡೆದುಕೊಂಡಿದೆ.

Maldhari society protest in Rajkot
Maldhari society protest in Rajkot

By

Published : Jan 31, 2022, 5:33 PM IST

ರಾಜ್​​ಕೋಟ್​(ಗುಜರಾತ್​):ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ ಪ್ರಕಟಿಸಿದ್ದಕ್ಕಾಗಿ ಜನವರಿ 25ರಂದು 30 ವರ್ಷದ ಕಿಶನ್​ ಎಂಬ ಯುವಕನ ಹತ್ಯೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಉದ್ವಿಗ್ನತೆ ಸೃಷ್ಟಿಯಾಗಿದೆ. ಮಲ್ದಾರಿ ಸಮುದಾಯದಿಂದ ರಾಜಕೋಟ್​​ನಲ್ಲಿ ಪ್ರತಿಭಟನೆ ನಡೆಸಲಾಗ್ತಿದ್ದು, ಈ ವೇಳೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.

ಗುಜರಾತ್​​ನಲ್ಲಿ ಕಿಶನ್​ ಹತ್ಯೆ ಪ್ರಕರಣ ಖಂಡಿಸಿ ಪ್ರತಿಭಟನೆ ವೇಳೆ ಲಾಠಿ ಚಾರ್ಜ್​

ಕಿಶನ್ ಭಾರವಾಡ ಕೊಲೆ ಖಂಡಿಸಿ ಮಾಲ್ದಾರಿ ಸಮುದಾಯ ರಾಜ್​ಕೋಟ್​​ನ ರೇಸ್​ಕೋರ್ಸ್​ನಲ್ಲಿರುವ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ನಿರ್ಧರಿಸಿತ್ತು. ಪ್ರತಿಭಟನೆ ವೇಳೆ ಬಂದ್​ಗೆ ಕರೆ ನೀಡಲಾಗಿತ್ತು. ಈ ವೇಳೆ ಕೆಲವರು ಬಲವಂತವಾಗಿ ಅಂಗಡಿ ಮುಚ್ಚಲು ಮುಂದಾಗಿದ್ದು, ಪರಿಸ್ಥಿತಿ ಕೈಮೀರಿ ಹೋಗಿದೆ. ಪರಿಸ್ಥಿತಿ ನಿಯಂತ್ರಿಸುವ ಉದ್ದೇಶದಿಂದ ಪೊಲೀಸರು ಲಾಠಿಚಾರ್ಜ್ ನಡೆಸಿದ ಹಿನ್ನೆಲೆ ಕೆಲವರು ಗಾಯಗೊಂಡಿದ್ದಾರೆ. ರಾಜ್​ಕೋಟ್​​ ಜೊತೆಗೆ ಅಹಮದಾಬಾದ್​, ಸೂರತ್​, ಕರ್ಜನ್​ ಸೇರಿದಂತೆ ಅನೇಕ ಕಡೆ ಕಿಶನ್​ ಕೊಲೆ ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿಗಳು ಸಲ್ಲಿಕೆಯಾಗಿವೆ.

ಇದನ್ನೂ ಓದಿರಿ:ಟಾಟಾ ಸ್ಟೀಲ್​ ಲಿಮಿಟೆಡ್​​ ಪಾಲಾದ 'ನೀಲಾಚಲ್ ಇಸ್ಪಾಟ್ ನಿಗಮ್'.. ಕೇಂದ್ರದಿಂದ 12,100 ಕೋಟಿಗೆ ಬಿಡ್​ ಖರೀದಿಸಿದ ಟಾಟಾ ಗ್ರೂಪ್​​.

ಅನ್ಯ ಧರ್ಮಕ್ಕೆ ಸಂಬಂಧಿಸಿದಂತೆ ಕಿಶನ್​​ ಜನವರಿ 6ರಂದು ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದ ಎನ್ನಲಾಗ್ತಿದೆ. ಇದು ವಿವಾದದ ರೂಪ ಪಡೆದುಕೊಳ್ಳುತ್ತಿದ್ದಂತೆ ಕ್ಷಮೆಯಾಚನೆ ಮಾಡಿದ್ದ ವಿಡಿಯೋ ಸಹ ಫೇಸ್​ಬುಕ್​ನಲ್ಲಿ ಹರಿಬಿಟ್ಟಿದ್ದನು. ಇದರ ಮಧ್ಯೆ ಕೂಡ ಇಬ್ಬರು ಮುಸುಕುಧಾರಿಗಳು ಗುಂಡಿನ ದಾಳಿ ನಡೆಸಿ, ಆತನ ಕೊಲೆ ಮಾಡಿದ್ದರು.

ಇದರ ಬೆನ್ನಲ್ಲೇ ಪ್ರಕರಣ ಮತ್ತಷ್ಟು ವಿವಾದ ಪಡೆದುಕೊಂಡು, ದುಷ್ಕರ್ಮಿಗಳನ್ನ ಬಂಧನ ಮಾಡುವಂತೆ ಮಲ್ದಾರಿ ಸಮುದಾಯ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಇದರಲ್ಲಿ ವಿಶ್ವ ಹಿಂದೂ ಪರಿಷತ್​ ಕೂಡ ಭಾಗಿಯಾಗಿದೆ. ಇದೇ ವಿಚಾರವಾಗಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಲಾಠಿಚಾರ್ಜ್​ ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್​ನ ಎಟಿಎಸ್​​ ಅಧಿಕಾರಿಗಳು ಈಗಾಗಲೇ ಧರ್ಮಗುರುವೊಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details