ಕಣ್ಣೂರು(ಕೇರಳ): ವಯೋವೃದ್ಧನ ಆರೈಕೆಗೋಸ್ಕರ ನೇಮಕಗೊಂಡಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬ ಆತನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಅದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿಯ ಬಂಧನ ಮಾಡುವಲ್ಲಿ ಇಸ್ರೇಲ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೇರ್ಟೇಕರ್ ಆಗಿ ಕೇರಳ ಮೂಲಕ ವ್ಯಕ್ತಿಯೊಬ್ಬ ಇಸ್ರೇಲ್ನಲ್ಲಿ ಸೇವೆ ಸಲ್ಲಿಸುತ್ತಿದ್ದ. ತಾನು ಕೆಲಸ ಮಾಡ್ತಿದ್ದ ಮನೆಯಲ್ಲಿ ವೃದ್ಧರೊಬ್ಬರ ಮೇಲೆ ಅಮಾನವೀಯ ರೀತಿಯಲ್ಲಿ ಹಲ್ಲೆ ಮಾಡಿದ್ದು, ಅದರ ವಿಡಿಯೋ ಮನೆಯಲ್ಲಿ ಅಳವಡಿಕೆ ಮಾಡಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅದರ ಗಮನಿಸಿದ ವೃದ್ಧನ ಮಗಳು ಆರೋಪಿ ವಿರುದ್ಧ ದೂರು ದಾಖಲು ಮಾಡಿದ್ದರು. ಕಣ್ಣೂರಿನ ಪಿಣರಾಯಿಯ ಎರುವತ್ತಿ ಮೂಲದ ದಿಪನ್(24) ಎಂಬಾತನನ್ನ ಇಸ್ರೇಲ್ ಪೊಲೀಸರು ಬಂಧನ ಮಾಡಿದ್ದಾರೆ. ಕಳೆದ ಆರು ತಿಂಗಳ ಹಿಂದೆ ಇಸ್ರೇಲ್ನ ಜೆರುಸಲೇಂಗೆ ತೆರಳಿದ್ದ ದಿಪನ್ ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದ.