ಕರ್ನಾಟಕ

karnataka

ETV Bharat / bharat

ಮಲಯಾಳಂ ಸಹ ಭಾರತೀಯ ಭಾಷೆ, ತಾರತಮ್ಯ ನಿಲ್ಲಿಸಿ: ರಾಹುಲ್ ಗಾಂಧಿ

ದೇಶದ ಇತರ ಭಾಷೆಗಳಲ್ಲಿ ಮಾತನಾಡುವವರ ವಿರುದ್ಧ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ದೆಹಲಿಯ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಗೋವಿಂದ್ ವಲ್ಲಭ್ ಪಂತ್ ಇನ್​ಸ್ಟಿಟ್ಯೂಟ್ ಹೊರಡಿಸಿದ ಸುತ್ತೋಲೆಗೆ ಕೈ ನಾಯಕ ರಾಹುಲ್ ಗಾಂಧಿ ವಿರೋಧ ವ್ಯಕ್ತಪಡಿಸಿದ್ದಾರೆ.

Malayalam is as Indian as any other Indian language
ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ

By

Published : Jun 6, 2021, 9:32 AM IST

ನವದೆಹಲಿ: ಮಲಯಾಳಂ ಸಹ ಭಾರತೀಯ ಭಾಷೆ, ಭಾಷಾ ತಾರತಮ್ಯವನ್ನು ನಿಲ್ಲಿಸಿ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ​ಗಾಂಧಿ ಗರಂ ಆಗಿದ್ದಾರೆ.

ದೆಹಲಿಯ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಗೋವಿಂದ್ ವಲ್ಲಭ್ ಪಂತ್ ಇನ್​ಸ್ಟಿಟ್ಯೂಟ್ (ಜಿಐಪಿಎಂಇಆರ್) ತನ್ನೆಲ್ಲಾ ಶುಶ್ರೂಷಾ ಸಿಬ್ಬಂದಿ ಸಂವಹನಕ್ಕಾಗಿ ಹಿಂದಿ ಮತ್ತು ಇಂಗ್ಲಿಷ್ ಮಾತ್ರ ಬಳಸುವಂತೆ ನಿರ್ದೇಶಿಸಿತ್ತು. ಇತರ ಭಾಷೆಗಳಲ್ಲಿ ಮಾತನಾಡುವವರ ವಿರುದ್ಧ ಗಂಭೀರ ಕ್ರಮದ ಎಚ್ಚರಿಕೆ ನೀಡಿದ್ದು ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಹಲವು ರಾಜಕೀಯ ನಾಯಕರು ಸಹ ಆಸ್ಪತ್ರೆಯ ಆಡಳಿತ ಮಂಡಳಿಯ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:ಕೇರಳ ದಾದಿಯರಿಗೆ ಹಿಂದಿ/ಇಂಗ್ಲಿಷ್‌ನಲ್ಲಿ ಮಾತನಾಡಲು ದೆಹಲಿ ಆಸ್ಪತ್ರೆ ಆದೇಶ: ಕೈ ನಾಯಕರ ಆಕ್ರೋಶ

ABOUT THE AUTHOR

...view details