ಬರ್ಮಿಂಗ್ಹ್ಯಾಮ್ನಲ್ಲಿರುವ ನಮ್ಮ ಮನೆಯಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸಫ್ಝಾಯಿ ಅವರು ಅಸ್ಸರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ನವ ಜೋಡಿಗೆ ನಟಿ ಪ್ರಿಯಾಂಕಾ ಚೋಪ್ರಾ ಶುಭಾಶಯ ಕೋರಿದ್ದಾರೆ.
ದಾಂಪತ್ಯಕ್ಕೆ ಕಾಲಿಟ್ಟ ಮಲಾಲಾ ಜೋಡಿಗೆ ಶುಭ ಹಾರೈಸಿದ ನಟಿ ಪ್ರಿಯಾಂಕಾ ಚೋಪ್ರಾ
ಹಾಲಿವುಡ್ ಹಾಗೂ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಲಾಲಾ ಯೂಸಫ್ಝಾಯಿ ಮತ್ತು ಅಸ್ಸರ್ ಜೋಡಿಗೆ ಇನ್ಸ್ಟಾಗ್ರಾಮ್ನಲ್ಲಿ ಶುಭ ಹಾರೈಸಿದ್ದಾರೆ.
ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಮುದ್ದಾದ ಜೋಡಿಯ ಫೋಟೋ ಶೇರ್ ಮಾಡಿರುವ ಪ್ರಿಯಾಂಕಾ, ಅಭಿನಂದನೆಗಳು ಮಲಾಲಾ. ನಿಮ್ಮ ಮುಂದಿನ ದಾಂಪತ್ಯ ಜೀವನ ಸುಖ ಮತ್ತು ಸಂತೋಷಕರವಾಗಿರಲೆಂದು ನಾನು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಸಾಮಾಜಿಕ ಕಾರ್ಯಕರ್ತೆ ಮಲಾಲಾ ಅವರು ಟ್ವಿಟ್ಟರ್ನಲ್ಲಿ ತಮ್ಮ ಪತಿ ಅಸ್ಸರ್ ಜೊತೆಗೆ ತೆಗೆಸಿಕೊಂಡ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸರಳವಾಗಿ ವಿವಾಹವಾಗಿರುವುದನ್ನು ತಿಳಿಸಿದ್ದರು. ಜೊತೆಗೆ ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲೆ ಇರಲಿ. ಪತಿ-ಪತ್ನಿಯಾಗಿ ಹೊಸ ಪಯಣದಲ್ಲಿ ಸಾಗುತ್ತಿರುವುದಕ್ಕೆ ನಮಗೆ ಸಂತೋಷವಾಗಿದೆ ಎಂದು ಶುಭ ಸುದ್ದಿ ಶೇರ್ ಮಾಡಿದ್ದರು.