ಕರ್ನಾಟಕ

karnataka

ETV Bharat / bharat

'ಹಿಜಾಬ್​ ಕಾರಣಕ್ಕಾಗಿ ಹೆಣ್ಣು ಮಕ್ಕಳಿಗೆ ಶಾಲಾ ಪ್ರವೇಶ ನೀಡದಿರುವುದು ಅತ್ಯಂತ ಭೀಕರ':ಹಿಜಾಬ್​ ವಿವಾದಕ್ಕೆ ಮಲಾಲಾ ಪ್ರತಿಕ್ರಿಯೆ - ಮಲಾಲಾ ಯೂಸೂಫ್ ಪ್ರತಿಕ್ರಿಯೆ

ಕರ್ನಾಟಕದಲ್ಲಿನ ಹಿಬಾಬ್​-ಕೇಸರಿ ವಿವಾದಕ್ಕೆ ಸಂಬಂಧಿಸಿದಂತೆ ವಿಶ್ವದ ಕಿರಿಯ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸಫ್‌ಜೈ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

Malala Yousafzai On  Hijab Row
Malala Yousafzai On Hijab Row

By

Published : Feb 9, 2022, 5:11 AM IST

ನವದೆಹಲಿ:ಕಳೆದ ಕೆಲ ದಿನಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಿಜಾಬ್​ ವಿವಾದ ತೀವ್ರ ಭುಗಿಲೆದ್ದಿದ್ದು, ಇದೇ ಕಾರಣಕ್ಕಾಗಿ ಅನೇಕ ಕಡೆ ಪ್ರತಿಭಟನೆ ಸಹ ನಡೆದಿದೆ. ಇದರ ಮಧ್ಯೆ ಇಂದಿನಿಂದ ರಾಜ್ಯದಲ್ಲಿ ಮೂರು ದಿನಗಳ ಕಾಲ ಶಾಲಾ-ಕಾಲೇಜ್​ಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೊಬೆಲ್​ ಶಾಂತಿ ಪುರಸ್ಕೃತೆ, ಮಕ್ಕಳ ಹೋರಾಟಗಾರ್ತಿ ಯೂಸೂಫ್ ಮಲಾಲಾ ಪ್ರತಿಕ್ರಿಯೆ ನೀಡಿದ್ದಾರೆ.

ಕರ್ನಾಟಕದಲ್ಲಿ ಉಂಟಾಗಿರುವ ಹಿಜಾಬ್​ ವಿಚಾರವಾಗಿ ಟ್ವೀಟ್ ಮಾಡಿರುವ ಮಲಾಲಾ, ಕಾಲೇಜ್​​ಗಳು ನಮ್ಮನ್ನು ಅಧ್ಯಯನ ಮತ್ತು ಹಿಜಾಬ್​ ನಡುವಿನ ಆಯ್ಕೆ ಮಾಡಲು ಒತ್ತಾಯಿಸುತ್ತಿದೆ.

ಇದನ್ನೂ ಓದಿರಿ:ರಾಜ್ಯದಲ್ಲಿ ಭುಗಿಲೆದ್ದ ಹಿಜಾಬ್​ ವಿವಾದ: ಇಂದಿನಿಂದ ಮೂರು ದಿನ ಶಾಲಾ-ಕಾಲೇಜುಗಳಿಗೆ ರಜೆ

ಹೆಣ್ಣು ಮಕ್ಕಳು ಹಿಜಾಬ್ ಹಾಕಿಕೊಂಡು ಶಾಲೆಗೆ ಹೋಗುವುದನ್ನ ನಿರಾಕರಣೆ ಮಾಡಿರುವುದು ಅತ್ಯಂತ ಭಯಾನಕ.ಮಹಿಳೆಯರು ಬಟ್ಟೆ ಧರಿಸುವ ವಿಚಾರವಾಗಿ ಟೀಕಿಸುವ ಪ್ರಕ್ರಿಯೆ ಮುಂದುವರೆದಿದೆ. ಹೆಣ್ಣು ಮಕ್ಕಳು ಕಡಿಮೆ ಅಥವಾ ಹೆಚ್ಚು ಬಟ್ಟೆ ಧರಿಸುವುದಕ್ಕಾಗಿ ಟೀಕಿಸುವ ಸಂಪ್ರದಾಯ ನಿಲ್ಲಬೇಕು ಎಂದಿರುವ ಅವರು, ಮುಸ್ಲಿಂ ಮಹಿಳೆಯರನ್ನ ಕೀಳಾಗಿ ಕಾಣುವ ನೀತಿ ಕೊನೆಯಾಗಬೇಕು ಎಂದಿದ್ದಾರೆ.

ಉಡುಪಿಯಲ್ಲಿ ಉದ್ಭವಗೊಂಡಿದ್ದ ಹಿಜಾಬ್​ ವಿವಾದ ಈಗಾಗಲೇ ಬಹುತೇಕ ಎಲ್ಲ ಜಿಲ್ಲೆಗಳಿಗೂ ಹಬ್ಬಿದ್ದು, ಇದೇ ವಿಚಾರವಾಗಿ ನಿನ್ನೆ ಶಿವಮೊಗ್ಗದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಸಹ ನಡೆದಿದೆ.

ABOUT THE AUTHOR

...view details