ಮುಂಬೈ:ಬಾಲಿವುಡ್ ಫಿಟ್ನೆಸ್ ಫ್ರೀಕ್ ಮಲೈಕಾ ಅರೋರಾ ತಮ್ಮ ಫಿಟ್ನೆಸ್ ಮೂಲಕವೇ ಸಾಕಷ್ಟು ಹೆಸರು ಮಾಡಿದ್ದಾರೆ. ಎರಡು ಮಕ್ಕಳ ತಾಯಿಯಾಗಿದ್ದರೂ ಇನ್ನು ಯಂಗ್ ಆಗಿ ಕಾಣುವ ಮಲೈಕಾ, ಇಂದು ಯೋಗಾಸನದ ನಂತರ ಜಿಮ್‌ನ ಹೊರಗೆ ಸಹೋದರಿ ಅಮೃತಾ ಅರೋರಾ ಅವರೊಂದಿಗೆ ಪಾಪರಾಜಿಗಳ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದಾರೆ.
ಮುಂಬೈ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಚ್ಚು ನೆಲೆಸಿರುವ ಸೆಲಬ್ರಿಟಿಗಳು ಆಗಾಗ್ಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಮಲೈಕಾ ಅರೋರಾ ಸಹ ಜಿಮ್ ಮತ್ತು ಯೋಗದ ಸೆಷನ್‌ಗಳ ನಂತರ ಆಗಾಗ್ಗೆ ಹೊರಗೆ ಕಾಣಿಸಿಕೊಳ್ಳುತ್ತಾರೆ. ಜೊತೆಗೆ ಆಗಾಗ ತಮ್ಮ ಪ್ರಮುಖ ಫಿಟ್ನೆಸ್ ವಿಡಿಯೋಗಳನ್ನು ಫಾಲೋವರ್‌ಗಳೊಂದಿಗೆ ಹಂಚಿಕೊಳ್ಳುತ್ತಾರೆ.