ಕರ್ನಾಟಕ

karnataka

ETV Bharat / bharat

'ಯೋಗದಿಂದಾಗಿ ನಾನು ಬದುಕುಳಿದೆ': ನಟಿ ಮಲೈಕಾ ಅರೋರಾ ಈ ಮಾತು ಹೇಳಿದ್ಯಾಕೆ ಗೊತ್ತಾ? - ಮಾನಸಿಕ ಆರೋಗ್ಯ

'ಫಿಟ್ನೆಸ್ ಕ್ವೀನ್' ಮಲೈಕಾ ಅರೋರಾ ತನ್ನ ಮಾನಸಿಕ ಸ್ಥಿತಿಯ ಬಗ್ಗೆ 2021 ರ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಗೆ ಒಂದು ದಿನ ಮೊದಲು ಬಹಿರಂಗಪಡಿಸಿದ್ದಾರೆ. ಮಾನಸಿಕ ಆರೋಗ್ಯಕ್ಕೆ ಯೋಗ ಎಷ್ಟು ಮುಖ್ಯ ಮತ್ತು ಪರಿಣಾಮಕಾರಿ ಎಂದು ಮಲೈಕಾ ಹೇಳಿದ್ದಾರೆ. ಈ ಸಂದರ್ಭದಲ್ಲಿ, ಮಲೈಕಾ ಕೂಡ ತನ್ನ ನ್ಯೂನತೆಗಳನ್ನು ಬಹಿರಂಗಪಡಿಸಿದರು ಮತ್ತು ತನ್ನ ತಪ್ಪಿನ ಬಗ್ಗೆ ಹೇಳಿದರು. ಅಲ್ಲದೇ, ಯೋಗವು ತನಗೆ ಹೇಗೆ ಹೊಸ ಜೀವನ ನೀಡಿತು ಎಂದು ನಟಿ ಹೇಳಿಕೋಂಡಿದ್ದಾರೆ.

yoga
ಮಲೈಕಾ ಅರೋರಾ

By

Published : Oct 9, 2021, 7:21 PM IST

ಹೈದರಾಬಾದ್​​:ತನ್ನ ಆರೋಗ್ಯ ಹಾಗೂ ಫಿಟ್​ನೆಸ್​ ಬಗ್ಗೆ ಎಲ್ಲರಿಗಿಂತ ತುಸು ಹೆಚ್ಚೇ ಕಾಳಜಿ ವಹಿಸುವ ನಟಿ ಮಲೈಕಾ ಅರೋರಾ, ತಾನು ದೈಹಿಕವಾಗಿ ಸದೃಢಳಾಗಿದ್ದರೆ ಮಾನಸಿಕವಾಗಿ ಕೂಡ ಸದೃಢಳಾಗುತ್ತೇನೆ ಎಂದು ನಂಬಿದ್ದರು. ಆದರೆ ಅವಳು ಈ ರೀತಿ ಯೋಚಿಸಿದ್ದು ದೊಡ್ಡ ತಪ್ಪು ಎಂದು ಅವರೇ ಹೇಳಿದ್ದಾರೆ. ಮಲೈಕಾ ಅರೋರಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಕುರಿತು ಒಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ಆಕೆಯ ಮಾನಸಿಕ ಆರೋಗ್ಯವನ್ನು ಆರೋಗ್ಯಕರವಾಗಿಸಲು ಏನೆಲ್ಲಾ ಮಾಡಿದರು ಎಂದು ಹೇಳಿಕೊಂಡಿದ್ದಾರೆ.

ಮಲೈಕಾ ಅರೋರಾ

'ಫಿಟ್ನೆಸ್ ಕ್ವೀನ್' ಮಲೈಕಾ ಅರೋರಾ ತನ್ನ ಮಾನಸಿಕ ಸ್ಥಿತಿಯ ಬಗ್ಗೆ 2021 ರ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಗೆ ಒಂದು ದಿನ ಮೊದಲು ಬಹಿರಂಗಪಡಿಸಿದ್ದಾರೆ. ಮಾನಸಿಕ ಆರೋಗ್ಯಕ್ಕೆ ಯೋಗ ಎಷ್ಟು ಮುಖ್ಯ ಮತ್ತು ಪರಿಣಾಮಕಾರಿ ಎಂದು ಮಲೈಕಾ ಹೇಳಿದರು. ಈ ಸಂದರ್ಭದಲ್ಲಿ, ಮಲೈಕಾ ಕೂಡ ತನ್ನ ನ್ಯೂನತೆಗಳನ್ನು ಬಹಿರಂಗಪಡಿಸಿದರು ಮತ್ತು ತನ್ನ ತಪ್ಪಿನ ಬಗ್ಗೆ ಹೇಳಿದ್ದಾರೆ ಅಲ್ಲದೇ, ಯೋಗವು ತನಗೆ ಹೇಗೆ ಹೊಸ ಜೀವನ ನೀಡಿತು ಎಂದು ಹೇಳಿಕೊಂಡಿದ್ದಾರೆ.

ಅಂದು ನಾನು ಏನೇ ಮಾಡಿದರೂ ಕಣ್ಣೀರು ನಿಲ್ಲಲಿಲ್ಲ

ನಾನು ಮೊದಲು ಕೆಲವು ಯೋಗ ತರಗತಿಯಲ್ಲಿದ್ದಾಗ, ಒಂದು ದಿನ ನನ್ನ ಬ್ರೇಕಿಂಗ್ ಪಾಯಿಂಟ್ ಬಂತು. ಏನೇ ಮಾಡಿದರು ನನ್ನ ಕಣ್ಣೀರು ನಿಲ್ಲಲಿಲ್ಲ. ನಾನು ನನ್ನೊಳಗೆ ಹಿಂಸೆಪಟ್ಟುಕೊಂಡು ಬದುಕುಳಿದೆ. ನಾನು ಎಂದಿಗೂ ನನ್ನನ್ನು ಬುಲೆಟ್ ಪ್ರೂಫ್ ಎಂದು ಕರೆಯುವುದಿಲ್ಲ.

ಏಕೆಂದರೆ ನಮ್ಮಲ್ಲಿ ಯಾರೂ ಬುಲೆಟ್ ಪ್ರೂಫ್ ಇಲ್ಲ. ನಾನು ಸ್ಥಿರವಾಗಿ, ಮಾನಸಿಕವಾಗಿ, ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಆರೋಗ್ಯವಾಗಿರಲು ಬಯಸುವ ಹಾದಿಯಲ್ಲಿ ನನ್ನನ್ನು ಕರೆದುಕೊಂಡು ಹೋಗುತ್ತೇನೆ. ಇದು ನನ್ನ ಸರ್ವಸ್ವ. ನಿಮ್ಮ ಕಥೆಯನ್ನು ನಮಗೂ ತಿಳಿಸಿ, ನಾವು ಕೇಳುತ್ತೇವೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ನಾಳೆ ವಿಶ್ವ ಮಾನಸಿಕ ಆರೋಗ್ಯ ದಿನ

ವಿಶ್ವ ಮಾನಸಿಕ ಆರೋಗ್ಯ ದಿನ 2021 ಅನ್ನು ಪ್ರತಿ ವರ್ಷ 10 ಅಕ್ಟೋಬರ್‌ನಲ್ಲಿ ಆಚರಿಸಲಾಗುತ್ತದೆ. ಈ ದಿನ, ಮಾನಸಿಕ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕೆಲಸ ಮಾಡಲಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಕಾರ, ಮಾನಸಿಕ ಆರೋಗ್ಯ ಸಮಸ್ಯೆಗಳ ಕುರಿತು ಕೆಲಸ ಮಾಡುವ ಎಲ್ಲಾ ಪಾಲುದಾರರಿಗೆ ಈ ದಿನವು ಅವರ ಕೆಲಸದ ಬಗ್ಗೆ ಮತ್ತು ಪ್ರಪಂಚದಾದ್ಯಂತದ ಜನರಿಗೆ ಮಾನಸಿಕ ಆರೋಗ್ಯ ಕಾಳಜಿಯನ್ನು ಮಾಡಲು ಅಗತ್ಯವಿರುವ ಪ್ರಯತ್ನಗಳ ಬಗ್ಗೆ ಮಾತನಾಡಲು ಅವಕಾಶವನ್ನು ಒದಗಿಸುತ್ತದೆ. ಈ ವರ್ಷದ ಥೀಮ್ 'ವಿಶಿಷ್ಟ ಜಗತ್ತಿನಲ್ಲಿ ಮಾನಸಿಕ ಆರೋಗ್ಯ'. ಈ ವರ್ಷ ಕೊರೊನಾ ವೈರಸ್‌ನಿಂದ ಬಳಲುತ್ತಿರುವ ಜನರ ಮಾನಸಿಕ ಆರೋಗ್ಯವನ್ನು ಸಹ ಗಮನದಲ್ಲಿರಿಸಿಕೊಳ್ಳಲಾಗಿದೆ.

ABOUT THE AUTHOR

...view details