ಮುಂಬೈ : ಬಾಲಿವುಡ್ ಡಿವಾ ಮಲೈಕಾ ಅರೋರಾ ಮತ್ತೆ ಮಾಜಿ ಪತಿ ನಟ, ನಿರ್ದೇಶಕ ಅರ್ಬಾಜ್ ಖಾನ್ ಜೊತೆ ಮುಂಬೈ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡರು. ವಿದೇಶದಿಂದ ಬಂದ ಮಗನನ್ನು ಸ್ವಾಗತಿಸಲು ಮಾಜಿ ಪತಿ ಜೊತೆ ಮಲೈಕಾ ವಿಮಾನ ನಿಲ್ದಾಣಕ್ಕೆ ಹೋಗಿದ್ದರು.
ಮಗನನ್ನು ಸ್ವಾಗತಿಸಲು ಮಾಜಿ ಪತಿಯೊಂದಿಗೆ ಏರ್ಪೋರ್ಟ್ಗೆ ಬಂದ ಮಲೈಕಾ..! ಹೇಗಿತ್ತು ಗೊತ್ತಾ ಆ ಭಾವನೆ? - Malaika Arora and Arbaaz Khan spotted together
ವಿದೇಶದಿಂದ ಬಂದ ಮಗನನ್ನು ಬರಮಾಡಿಕೊಳ್ಳಲು ಮಾಜಿ ಪತಿಯೊಂದಿಗೆ ಮಲೈಕಾ ಅರೋರಾ ತೆರಳಿದ್ದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಬಹಳ ದಿನಗಳ ನಂತರ ಮಗನನ್ನು ಕಂಡು ಬಾಲಿವುಡ್ ನಟಿ ಮಲೈಕಾ, ಬಿಗಿದಪ್ಪಿಕೊಂಡು ಭಾವುಕರಾದರು.
ಮಲೈಕಾ ಅರೋರಾ ವಿಡಿಯೋ: ವಿದ್ಯಾಭ್ಯಾಸ ಮಾಡಲು ವಿದೇಶಕ್ಕೆ ಹೋಗಿದ್ದ ಮಲೈಕಾ-ಅರ್ಬಾಜ್ ಖಾನ್ ಮಗ ಅರ್ಹನ್ ಖಾನ್ ಶುಕ್ರವಾರ ಸ್ವದೇಶಕ್ಕೆ ಮರಳಿದರು. ಈ ಸಂದರ್ಭದಲ್ಲಿ ಇಬ್ಬರೂ ಏರ್ಪೋರ್ಟ್ಗೆ ತೆರಳಿ ಮಗನನ್ನು ಸ್ವಾಗತಿಸಿಕೊಂಡಿದ್ದಾರೆ. ಮಗನನ್ನು ಕಂಡ ಮಲೈಕಾ ಬಿಗಿಯಾಗಿ ಅಪ್ಪಿಕೊಂಡು ಮಗನಿಗೆ ಸ್ವಾಗತ ಕೋರಿದರು. ಸದ್ಯ ಮಗನ ಭೇಟಿಯ ವಿಡಿಯೋ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
Malaika Arora : 2016 ರಲ್ಲಿ ಅರ್ಬಾಜ್ ಖಾನ್, ಮಲೈಕಾ ತಮ್ಮ 19 ವರ್ಷದ ವಿವಾಹ ಜೀವನಕ್ಕೆ ಗುಡ್ಬೈ ಹೇಳಿದ್ದರು. ಅದಾದ ನಂತರ 2021ರಲ್ಲಿ ಅರ್ಹನ್ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಿದ್ದರು. ಅಂದು ಸಹ ಮಗನನ್ನು ನೆನೆದು ಮಲೈಕಾ ಪ್ರೀತಿಯ ವಿದಾಯದ ಸಂದೇಶ ಹಂಚಿಕೊಂಡಿದ್ದರು. ಮಗನ ಹುಟ್ಟುಹಬ್ಬಕ್ಕೂ ಇಬ್ಬರ ಜೊತೆಗಿನ ಫೋಟೋ ಒಂದನ್ನ ಶೇರ್ ಮಾಡಿ, 'ಮೈ ಬರ್ತ್ಡೇ ಬಾಯ್, ಮಿಸ್ ಯು ಲಾಟ್' ಅಂತ ಬರೆದುಕೊಂಡಿದ್ದರು. ಇದನ್ನು ಮಲೈಕಾ ಸಹೋದರಿ ಅಮೃತಾ ಅರೋರಾ ಸಹ ಶೇರ್ ಮಾಡಿಕೊಂಡಿದ್ದರು.