ಕರ್ನಾಟಕ

karnataka

ETV Bharat / bharat

'ಮಲೈ ರೋಟಿ': ಇದು ಜೋಧ್‌ಪುರದ ಅಪರೂಪದ ಸಿಹಿ ಖಾದ್ಯ! - rajastrani special dessert

'ಮಲೈ ರೋಟಿ' ಹಾಲಿನ ಕೆನೆ ಪದರದಿಂದ ತಯಾರಿಸುವ ರಾಜಸ್ತಾನದ ಸಿಹಿ ಖಾದ್ಯ. ತಯಾರಿಕೆ ಹೇಗೆ? ಇಲ್ಲಿದೆ ಮಾಹಿತಿ.

'Malai Roti'- an epic Jodhpuri dessert
'ಮಲೈ ರೋಟಿ': ದೇಶದ ಅಪರೂಪದ ಸಿಹಿ ತಿಂಡಿ

By

Published : Dec 28, 2022, 10:30 PM IST

Updated : Dec 28, 2022, 10:39 PM IST

ಜೋಧ್‌ಪುರ (ರಾಜಸ್ಥಾನ): ಭವ್ಯ ಕೋಟೆ, ಹಳೆಯ ದೇವಾಲಯಗಳು ಮತ್ತು ರಾಜರ ಅರಮನೆಗಳಿಗೆ ಹೆಸರುವಾಸಿಯಾದ ರಾಜಸ್ಥಾನದ ಎರಡನೇ ದೊಡ್ಡ ನಗರ ಜೋಧ್‌ಪುರ ಭಾರತದಲ್ಲಿ ಮಾತ್ರವಲ್ಲ, ವಿಶ್ವದ ಅತ್ಯುತ್ತಮ ಪ್ರವಾಸಿ ತಾಣಗಳಲ್ಲಿ ಒಂದು. ಇದೇ ಜೋಧ್‌ಪುರ ಎಲ್ಲ ಭವ್ಯತೆ ಮತ್ತು ಅದರ ರಾಜಮನೆತನದ ಪಾಕಪದ್ಧತಿಗೂ ಹೆಸರುವಾಸಿಯಾಗಿದೆ.

ನಗರದ ಕಾಲುದಾರಿಗಳ ಉದ್ದಕ್ಕೂ ನಡೆದಾಡುವಾಗ ಪ್ರಸಿದ್ಧ ಪಾಕಶಾಲೆಗಳ ಬಾಗಿಲು ಜಗತ್ತಿಗೆ ತೆರೆದುಕೊಳ್ಳುತ್ತಿದೆ. ಅಂಥ ಜನಪ್ರಿಯ ಖಾದ್ಯಗಳಲ್ಲಿ ಒಂದು 'ಮಲೈ ರೋಟಿ'. ಈ ಹೆಸರನ್ನು ಕೇಳದೆ ಇದ್ದರೆ ಜೋಧ್‌ಪುರ ಆಹಾರ ತಿನಿಸಿನ ಕುರಿತು ಚರ್ಚೆ ಸಂಪೂರ್ಣಗೊಳ್ಳದು.

ಇದು ಅಪರೂಪದ ತಿನಿಸು: ಮಲೈ ರೋಟಿಯು ಏಲಕ್ಕಿ ಮತ್ತು ಸಾಂಬಾರ ಪದಾರ್ಥಗಳಾದ ಮೇಸ್ ಮತ್ತು ಜಾಯಿಕಾಯಿಯ ಬಳಕೆಯಿಂದ ವಿಶೇಷ ರುಚಿ ನೀಡುತ್ತದೆ. ಮಲೈ ರೋಟಿಯನ್ನು ಸಂಪೂರ್ಣವಾಗಿ 'ಮಲೈ'ನಿಂದ (ಹಾಲಿನ ಕೆನೆ) ತಯಾರಿಸಲಾಗುತ್ತದೆ. ಈ ಕೆನೆಯನ್ನು ಶುದ್ಧ ದೇಸಿ ತುಪ್ಪದಲ್ಲಿ ಬೇಯಿಸಿ, ಸಕ್ಕರೆ ಪಾಕದಲ್ಲಿ ನೆನೆಸಿ, ಕೇಸರಿ ಎಳೆ ಮತ್ತು ಪಿಸ್ತಾ, ಬಾದಾಮಿ, ಒಣ ದ್ರಾಕ್ಷಿ ಗೋಡಂಬಿ.. ಹೀಗೆ ಇತ್ಯಾದಿ ಪದಾರ್ಥಗಳಿಂದ ಅಲಂಕರಿಸಲಾಗುತ್ತದೆ.

'ನನ್ನ ತಂದೆ ಜವ್ರಿಲಾಲ್ ಭಾಟಿ ಅವರು 1980ರ ದಶಕದಲ್ಲಿ ಮಲೈ ರೋಟಿ ಸಿಹಿ ಪದಾರ್ಥವನ್ನು ಕಂಡುಹಿಡಿದರು. 1.5 ಕೆಜಿ ರೊಟ್ಟಿ ಮಾಡಲು 15 ಲೀಟರ್ ಹಾಲು ಬೇಕಾಗುತ್ತದೆ. ಹಾಲಿನಿಂದ ತಯಾರಾದ ಮಲೈ ರೊಟ್ಟಿಯನ್ನು ರೆಫ್ರಿಜರೇಟರ್‌ಗಳಲ್ಲಿ ಇರಿಸುವುದಿಲ್ಲ. ಆದ್ದರಿಂದ ಮಲೈ ರೋಟಿಯನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ತಯಾರಿಸಲಾಗುತ್ತದೆ. ಸಾಮಾನ್ಯ ದಿನಗಳಲ್ಲಿ, ಪ್ರತಿದಿನ ಕೇವಲ 25 ಮಲೈ ರೊಟ್ಟಿಗಳನ್ನು ತಯಾರಿಸುತ್ತೇವೆ. ಆದರೆ ವಿಶೇಷ ಸಂದರ್ಭದಲ್ಲಿ, ಪ್ರವಾಸಿಗರು ಬರುವ ಸಮಯದಲ್ಲಿ 40 ರೊಟ್ಟಿಗಳನ್ನು ತಯಾರಿಸಲಾಗುತ್ತದೆ' ಎಂದು ಮಲೈ ರೋಟಿ ತಯಾರಕ ಭರತ್ ಭಾಟಿ ಹೇಳಿದರು.

ಇದನ್ನೂ ಓದಿ:ಜಗತ್ತಿನ ಅತ್ಯಂತ ದುಬಾರಿ ವೈದ್ಯಕೀಯ ಸ್ಥಿತಿ ಸೆಪ್ಸಿಸ್​: ಜೀವಕೋಶಗಳ ಸಾವಿಗೆ ಇದುವೇ ಕಾರಣ!

Last Updated : Dec 28, 2022, 10:39 PM IST

ABOUT THE AUTHOR

...view details