ಕರ್ನಾಟಕ

karnataka

ETV Bharat / bharat

ನಟ, ರಾಜಕಾರಣಿ ಕಮಲ್​ಹಾಸನ್​ ಕಾರಿನ ಮೇಲೆ ದಾಳಿ ಆರೋಪ - Makkal Needhi Maiam

ನಟ ಹಾಗೂ ಮಕ್ಕಲ್ ನೀಧಿ ಮಯಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಅವರ ಕಾರಿನ ಮೇಲೆ ವ್ಯಕ್ತಿಯೋರ್ವನಿಂದ ದಾಳಿ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

attack
ಕಮಲ್​ಹಾಸನ್​ ಕಾರಿನ ಮೇಲೆ ದಾಳಿ ಆರೋಪ

By

Published : Mar 15, 2021, 8:09 AM IST

ಚೆನ್ನೈ(ತಮಿಳುನಾಡು):ಮಕ್ಕಲ್ ನೀಧಿ ಮಯಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಅವರ ಕಾರಿನ ಮೇಲೆ ವ್ಯಕ್ತಿಯೊಬ್ಬ ದಾಳಿ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಆದರೆ, ಈ ದಾಳಿಯಲ್ಲಿ ಕಮಲ್​ ಹಾಸನ್​ ಅವರು ಗಾಯಗೊಂಡಿಲ್ಲ ಎಂದು ಹೇಳಲಾಗುತ್ತಿದೆ. ಕಮಲ್​ ಮೇಲೆ ದಾಳಿಗೆ ಮುಂದಾದ ವ್ಯಕ್ತಿಯನ್ನ ಪಕ್ಷದ ಕಾರ್ಯಕರ್ತರು ಹಿಡಿದು ಥಳಿಸಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ಟ್ವೀಟ್​ ಮಾಡಿರುವ ನಿವೃತ್ತ ಐಪಿಎಸ್​ ಆಫೀಸರ್​​ ಎ ಜಿ ಮೌರ್ಯ, ಹಾಸನ್​ಗೆ ಯಾವುದೇ ಗಾಯಗಳಾಗಿಲ್ಲ. ಆದರೆ ಕಾರಿನ ಗ್ಲಾಸ್​​​ ಡ್ಯಾಮೇಜ್​ ಆಗಿದೆ. ದಾಳಿ ಮಾಡಿದ ವ್ಯಕ್ತಿಯನ್ನ ಕಮಲ್​ ಹಾಸನ್​ ಅವರು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಹೇಳಿದ್ದಾರೆ.

ದಾಳಿ ಮಾಡಿದ ವ್ಯಕ್ತಿಯ ದೃಶ್ಯಾವಳಿಗಳನ್ನ ಸ್ಥಳೀಯ ಚಾನಲ್​ವೊಂದು ವರದಿ ಕೂಡಾ ಮಾಡಿದೆ.

ABOUT THE AUTHOR

...view details