ಕರ್ನಾಟಕ

karnataka

ETV Bharat / bharat

ಮನೆ ಮನೆಗೆ ಕೋವಿಡ್​ ಬೂಸ್ಟರ್ ಡೋಸ್.. ಆರೋಗ್ಯ ಸಚಿವ ಹರೀಶ್ ರಾವ್ ಸೂಚನೆ - Harish Rao orders to give a Booster dose to door to door in Telangana

ತೆಲಂಗಾಣದಲ್ಲಿ ಕೋವಿಡ್​ ಬೂಸ್ಟರ್​ ಡೋಸ್​ ಅಭಿಯಾನ- ಮನೆ ಮನೆಗೆ ತೆರಳಿ ವ್ಯಾಕ್ಸಿನ್​- ಅಧಿಕಾರಿಗಳಿಗೆ ಆರೋಗ್ಯ ಸಚಿವ ಹರೀಶ್ ರಾವ್ ಸೂಚನೆ

ಕೋವಿಡ್​ ಡೋಸ್​
ಕೋವಿಡ್​ ಡೋಸ್​

By

Published : Jul 25, 2022, 8:08 PM IST

ತೆಲಂಗಾಣ:ಮನೆ ಬಾಗಿಲಿಗೆ ತೆರಳಿ ಬೂಸ್ಟರ್ ಡೋಸ್ ನೀಡಲು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ರಾಜ್ಯ ಆರೋಗ್ಯ ಸಚಿವ ಹರೀಶ್ ರಾವ್ ಆದೇಶಿಸಿದ್ದಾರೆ. ಅಧಿಕಾರಿಗಳು ಬೂಸ್ಟರ್ ಡೋಸ್ ನೀಡಲು ತಮ್ಮ ಮನೆಗಳಿಗೆ ಬಂದಾಗ ಜನರು ಸಹ ಸಹಕರಿಸುತ್ತಾರೆ ಎಂದು ಅಭಿಪ್ರಾಯಪಟ್ಟರು.

ಹರೀಶ್ ಕಾಲೋಚಿತ ರೋಗಗಳ ಕುರಿತು ಜಿಲ್ಲಾಧಿಕಾರಿಗಳು, ಹೆಚ್ಚುವರಿ ಜಿಲ್ಲಾಧಿಕಾರಿಗಳು ಮತ್ತು ಐಟಿಡಿಎ ಪಿಒಗಳೊಂದಿಗೆ ಪರಿಶೀಲನೆ ನಡೆಸಿದರು. ಕಾಲೋಚಿತ ರೋಗಗಳ ನಿಯಂತ್ರಣದ ನಿಮಿತ್ತ ಸರ್ಕಾರದಿಂದ ವಿಶೇಷ ಕಾರ್ಯಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ತಿಳಿಸಿದರು.

ಹಾಸ್ಟೆಲ್​​ಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡಲು ಕ್ರಮಕೈಗೊಳ್ಳಬೇಕು. ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಮನೆ ಮನೆಗೆ ತೆರಳಿ ಬೂಸ್ಟರ್ ಡೋಸ್ ನೀಡಲು ಯೋಜನೆ ರೂಪಿಸಬೇಕು. ಸಾರ್ವಜನಿಕರಿಗೆ ಕಾಲೋಚಿತ ರೋಗಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹರೀಶ್​ ರಾವ್ ಹೇಳಿದರು.

ಓದಿ:ಅಕ್ರಮ ಮದ್ಯ ಸೇವಿಸಿ 8 ಮಂದಿ ಸಾವಿಗೀಡಾಗಿರುವ ಶಂಕೆ

For All Latest Updates

ABOUT THE AUTHOR

...view details