ನವದೆಹಲಿ:ವೃತ್ತಿಪರ ಮಟ್ಟದಲ್ಲಿ ಬ್ಯಾಟ್ಸಮನ್ಗಳಿಗೆ ಹೆಲ್ಮೆಟ್ ಬಳಕೆ ಕಡ್ಡಾಯಗೊಳಿಸುವಂತೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮನವಿ ಮಾಡಿದ್ದು, ಇದರ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ಅಕ್ಟೋಬರ್ 24ರಂದು ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದ ಘಟನೆ ಮೆಲಕು ಹಾಕಿ ಸಚಿನ್ ಈ ಮನವಿ ಮಾಡಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಪಂಜಾಬ್ ತಂಡ ನಿಕೋಲಸ್ ಪೂರನ್ ಎಸೆದ ಚೆಂಡು ಬ್ಯಾಟ್ಸಮನ್ ವಿಜಯ್ ಶಂಕರ್ ಅವರ ಮುಖಕ್ಕೆ ಬಿದ್ದು, ಗಾಯಗೊಂಡಿದ್ದರು.
ಅಂತಾರಾಷ್ಟ್ರೀಯ ಅಥವಾ ವೃತ್ತಿಪರ ಕ್ರಿಕೆಟ್ನಲ್ಲಿ ಹೆಲ್ಮೆಟ್ ಹಾಕಿಕೊಂಡು ಕಣಕ್ಕಿಳಿಯುತ್ತಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಇತರರಿಗೂ ಮಾದರಿಯಾಗಿದ್ದಾರೆ.
ಆಟವು ವೇಗವಾಗಿದೆ. ಆದರೆ ಅದು ಸುರಕ್ಷಿತವಾಗುತ್ತಿದೆಯೇ? ಇತ್ತೀಚೆಗೆ ನಡೆದ ಒಂದು ಘಟನೆ ಇದಕ್ಕೆ ಸಾಕ್ಷಿಯಾಗಿದೆ. ಸ್ಪಿನ್ನರ್ ಅಥವಾ ವೇಗಿ ಆಗಿರಲಿ. ಹೆಲ್ಮೆಟ್ ಧರಿಸುವುದು ವೃತ್ತಪರ ಮಟ್ಟದಲ್ಲಿ ಬ್ಯಾಟ್ಸಮನ್ಗಳಿಗೆ ಕಡ್ಡಾಯವಾಗಿರಬೇಕು ಎಂದು ಸಚಿನ್ ತಿಳಿಸಿದ್ದಾರೆ. ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ ಅವರಿಗೆ ಟ್ವೀಟ್ ಟ್ಯಾಗ್ ಮಾಡಿದ್ದಾರೆ. 2014ರಲ್ಲಿ ಆಸ್ಟ್ರೇಲಿಯಾದ ಫಿಲ್ ಹ್ಯೂಸ್ ಘಟನೆ ಕೂಡ ಇದಕ್ಕೆ ಸಾಕ್ಷಿಯಾಗಿದೆ.