ಕರ್ನಾಟಕ

karnataka

ETV Bharat / bharat

ಮೋಟಾರ್‌ ಸೈಕಲ್‌ನಲ್ಲಿ ಸ್ಫೋಟಕ ಅಳವಡಿಕೆ; ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ದುರಂತ - ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌

ಮೋಟಾರ್‌ಸೈಕಲ್‌ನಲ್ಲಿ ಅಳವಡಿಸಲಾಗಿದ್ದ 2.4 ಕೆ.ಜಿ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಸಕಾಲದಲ್ಲಿ ಪತ್ತೆ ಹಚ್ಚಿದ ಪೊಲೀಸರು ಬಳಿಕ ನಾಶಪಡಿಸಿದ್ದಾರೆ.

Major tragedy averted as IED-fitted motorcycle detected in J-K's Poonch
ಸರಿಯಾದ ಸಮಯಕ್ಕೆ ಸುಧಾರಿತ ಸ್ಫೋಟ ಪತ್ತೆ ಮಾಡಿ ನಾಶ

By

Published : Jan 10, 2021, 6:15 PM IST

ಜಮ್ಮು: ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನಲ್ಲಿ ಮೋಟಾರ್‌ ಸೈಕಲ್‌ನಲ್ಲಿ ಅಳವಡಿಸಲಾಗಿದ್ದ 2.4 ಕೆ.ಜಿ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಪತ್ತೆ ಹಚ್ಚಿ ನಾಶಪಡಿಸಲಾಗಿದೆ. ಈ ಮುಖಾಂತರ ದೊಡ್ಡ ದುರಂತವೊಂದು ತಪ್ಪಿದೆ.

ಶನಿವಾರ ರಾತ್ರಿ 10 ರ ಸುಮಾರಿಗೆ ಘಟನೆ ಪೊಲೀಸರ ಗಮನಕ್ಕೆ ಬಂದಿದೆ. ನಂತರ ಕಾರ್ಯಾಚರಣೆ ನಡೆಸಿ ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಾಂಬ್ ನಿಷ್ಕೃೀಯ ದಳ ಸ್ಫೋಟಕವನ್ನು ನಾಶಗೊಳಿಸಿದೆ ಎಂದು ಪೂಂಚ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಆಂಗ್ರಾಲ್ ತಿಳಿಸಿದರು.

ಭಯೋತ್ಪಾದಕನೊಬ್ಬ ಇದನ್ನು ಬಿಟ್ಟು ಹತ್ತಿರದ ಅರಣ್ಯ ಪ್ರದೇಶಕ್ಕೆ ತೆರಳಿದ್ದಾನೆಂದು ಶಂಕಿಸಲಾಗಿದೆ. ಆತನನ್ನು ಬಂಧಿಸಲು ಇಡೀ ಪ್ರದೇಶವನ್ನು ಪೊಲೀಸರು ಮತ್ತು ಸೇನೆ ಸುತ್ತುವರೆದಿದ್ದು, ಜಂಟಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ABOUT THE AUTHOR

...view details