ನವದೆಹಲಿ:ಅನೇಕ ಸಿಹಿ-ಕಹಿ ನೆನಪುಗಳೊಂದಿಗೆ 2021ಕ್ಕೆ ಗುಡ್ಬೈ ಹೇಳಿ ಇದೀಗ ಎಲ್ಲರೂ ಹೊಸ ವರ್ಷ 2022 ಬರಮಾಡಿಕೊಳ್ಳಲು ಸಜ್ಜುಗೊಂಡಿದ್ದಾರೆ. ಹೊಸ ವರ್ಷದ ಆರಂಭದಲ್ಲೇ ಅನೇಕ ನಿಯಮಗಳು ಬದಲಾಗಲಿದ್ದು, ಜನಸಾಮಾನ್ಯರ ಮೇಲೆ ಇದರ ನೇರ ಪರಿಣಾಮ ಬೀರಲಿದೆ.
ಪ್ರಮುಖವಾಗಿ ಬ್ಯಾಂಕಿಂಗ್, ಹಣಕಾಸು ವಲಯ, ಎಲ್‌ಪಿಜಿ ಸಿಲಿಂಡರ್, ಇಂಧನ ದರ ಸೇರಿದಂತೆ ಪ್ರಮುಖ ವಲಯದಲ್ಲಿ ಮಹತ್ವದ ಬದಲಾವಣೆ ಆಗಲಿವೆ.
ಜ. 1ರಿಂದ ATM ವಿತ್ ಡ್ರಾ ಶುಲ್ಕದಲ್ಲಿ ಹೆಚ್ಚಳ..
ಹೊಸ ವರ್ಷದ ಆರಂಭದಿಂದಲೇ ಎಟಿಎಂ ವಿತ್ ಡ್ರಾ ಶುಲ್ಕದಲ್ಲಿ ಬದಲಾವಣೆಯಾಗಲಿದೆ. ಉಚಿತ ವಹಿವಾಟು ಮುಕ್ತಾಯಗೊಂಡ ಬಳಿಕ ಪ್ರತಿ ವಿತ್ ಡ್ರಾ ಮೇಲೆ 21ರೂ. ಪಾವತಿ ಮಾಡಬೇಕಾದ ಅನಿವಾರ್ಯತೆ ನಿರ್ಮಾಣಗೊಳ್ಳಲಿದೆ. ಇಷ್ಟು ದಿನ 20ರೂ. ಅಕೌಂಟ್ನಿಂದ ಕಟ್ ಆಗುತ್ತಿತ್ತು.
ಇದನ್ನೂ ಓದಿರಿ:ಬ್ಯಾಡ್ಮಿಂಟನ್ ಆಟಗಾರ್ತಿ ಆತ್ಮಹತ್ಯೆ.. ಸಾವಿಗೂ ಮುನ್ನ ಸಹೋದರಿಗೆ ಬಂತು WhatsApp ಸಂದೇಶ!
ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ..
ಪ್ರತಿ ತಿಂಗಳ ಆರಂಭದಲ್ಲಿ ಅಡುಗೆ ಅನಿಲ ದರದಲ್ಲಿ ಬದಲಾವಣೆ ಕಂಡು ಬರುತ್ತಿದ್ದು, ಜನವರಿಯಲ್ಲೂ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳ ಕಂಡು ಬರಲಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಸಿಲಿಂಡರ್ ಬೆಲೆಯಲ್ಲಿ ಗಮನಾರ್ಹವಾದ ಏರಿಕೆ ಕಂಡು ಬಂದಿದ್ದು, ಇದೀಗ ಹೊಸ ವರ್ಷದಂದೇ ಮತ್ತೊಮ್ಮೆ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
GST ಪಾವತಿ ಮಾಡದಿದ್ದರೆ ರಿಟರ್ನ್ ಸಲ್ಲಿಸಲು ಅಸಾಧ್ಯ..
ಡಿಸೆಂಬರ್ 31ರೊಳಗೆ ಮಾಸಿಕ ಜಿಎಸ್ಟಿ ಪಾವತಿ ಮಾಡದಿದ್ದರೆ, ಹೊಸ ವರ್ಷದಿಂದ GSTR-1 ಮಾರಾಟದ ರಿಟರ್ನ್ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಕಳೆದ ಕೆಲ ದಿನಗಳ ಹಿಂದೆ ನಡೆದ GST ಕೌನ್ಸಿಲ್ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಇಂಧನ ದರಗಳಲ್ಲಿ ಬದಲಾವಣೆ : ಇಂಧನದ ಚಿಲ್ಲರೆ ದರವನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಈಗಾಗಲೇ ಕಚ್ಚಾ ತೈಲ ಬೆಲೆ ಏರಿಕೆಯ ಮಧ್ಯೆ ಭಾರತದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಜನವರಿ ತಿಂಗಳಲ್ಲೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಬದಲಾವಣೆ ಕಂಡು ಬರಬಹುದು ಎನ್ನಲಾಗ್ತಿದೆ.