ಹಿಸಾರ್:ಹರಿಯಾಣ ಮೂಲದ ಬಿಜೆಪಿ ಮುಖಂಡೆ ಮತ್ತು ಟಿಕ್ಟಾಕ್ ತಾರೆ ಸೋನಾಲಿ ಫೋಗಾಟ್ ಮನೆಯಲ್ಲಿ ಭಾರಿ ಕಳ್ಳತನವಾಗಿದೆ.
ಚಿನ್ನಾಭರಣ, ಲೈಸೆನ್ಸ್ ರಿವಾಲ್ವರ್, 10 ಲಕ್ಷ ರೂ. ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಖದೀಮರು ಕದ್ದು ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ತಿಂಗಳ 9 ರಂದು ಮನೆಗೆ ಬೀಗ ಹಾಕಿ ಚಂಡೀಗಢ್ಗೆ ಹೋಗಿದ್ದೆ. ಫೆಬ್ರವರಿ 15 ರಂದು ಹಿಸಾರ್ನಲ್ಲಿರುವ ತಮ್ಮ ನಿವಾಸಕ್ಕೆ ಮರಳಿದ್ದಾಗ ಮನೆಯ ಬೀಗಗಳು ಮುರಿದುಹೋಗಿದ್ದವು. ಮನೆಯೊಳಗೆ ನೋಡಿದಾಗ ಸುಮಾರು 10 ಲಕ್ಷ ನಗದು, ಬಂಗಾರ, ಗನ್ ಸೇರಿದಂತೆ ಬೆಲೆಬಾಳುವ ವಸ್ತುಗಳ ಕಳ್ಳತವಾಗಿದೆ ಎಂದು ಮಾಜಿ ಬಿಗ್ಬಾಸ್ ಸ್ಪರ್ಧಿಯೂ ಆಗಿರುವ ಸೋನಾಲಿ ಫೋಗಾಟ್ ಪೊಲೀಸರಿಗೆ ದೂರು ನೀಡಿದ್ದಾರೆ.