ಕರ್ನಾಟಕ

karnataka

ETV Bharat / bharat

ಟ್ರಕ್​ ಹಿಂಬದಿಗೆ ಡಿಕ್ಕಿ ಹೊಡೆದ ಬೊಲೆರೋ.. ಕುಲದೇವಿ ದರ್ಶನಕ್ಕೆ ತೆರಳುತ್ತಿದ್ದ ಒಂದೇ ಕುಟುಂಬದ 6 ಜನ ಸಾವು!

ಕುಲದೇವಿಯ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಭೀಕರ ರಸ್ತೆ ಅಘಘಾತ ಸಂಭವಿಸಿ ಒಂದೇ ಕುಟುಂಬದ ಆರು ಜನ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಜೋಧಪುರ ಜಿಲ್ಲೆಯಲ್ಲಿ ನಡೆದಿದೆ.

Road Accident in Jodhpur  ETV Bharat Rajasthan News  Jodhpur Road Accident  Truck and car Collision in Jodhpur  Rajasthan Hindi News  Jodhpur Latest News  Major Road Accident in Jodhpur  ಜೋಧ್‌ಪುರದಲ್ಲಿ ರಸ್ತೆ ಅಪಘಾತ  ಈಟಿವ ಭಾರತ್ ರಾಜಸ್ಥಾನ ನ್ಯೂಸ್  ರಾಜಸ್ಥಾನದಲ್ಲಿ ಟ್ರಕ್ ಮತ್ತು ಕಾರ್ ಮಧ್ಯೆ ಡಿಕ್ಕಿ  ರಾಜಸ್ಥಾನ ಹಿಂದಿ ಸುದ್ದಿ  ಜೋಧ್‌ಪುರದಲ್ಲಿ ರಸ್ತೆ ಅಪಘಾತ ಸುದ್ದಿ
ಕುಲದೇವಿ ದರ್ಶನಕ್ಕೆ ತೆರಳುತ್ತಿದ್ದ ಒಂದೇ ಕುಟುಂಬದ 6 ಜನ ಸಾವು

By

Published : Apr 15, 2022, 8:30 AM IST

ಜೋಧಪುರ, ರಾಜಸ್ಥಾನ: ಜೋಧಪುರ-ಜೈಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ 6 ಜನರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಥುರಾದಾಸ್ ಮಾಥುರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚುರು ಗ್ರಾಮದ ನಿವಾಸಿಗಳು ನಾಗಣಾ ಕುಲದೇವಿಯ ದರ್ಶನಕ್ಕೆ ಹೋಗುತ್ತಿದ್ದರು. ಬಿಲಾರ ಸಮೀಪದ ಜುರ್ಲಿ ಫಾಂಟಾ ಬಳಿ ರಾತ್ರಿ ಒಂದು ಗಂಟೆ ಸುಮಾರಿಗೆ ಟ್ರಕ್ ಹಿಂಬದಿಗೆ ಬೊಲೆರೊ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಬೊಲೆರೋನಲ್ಲಿದ್ದ 6 ಮಂದಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದರು. ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದರು.

ಓದಿ:ಕಾರು ಅಪಘಾತದಲ್ಲಿ ಕೊಲಂಬಿಯಾ ಫುಟ್​ಬಾಲ್ ತಂಡದ ಮಾಜಿ ನಾಯಕ ಸಾವು

ಮಾಹಿತಿ ಪಡೆದ ಬಿಲಾಡ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬಿಲಾರ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಜಿಲ್ಲಾಧಿಕಾರಿ ಹಿಮಾಂಶು ಗುಪ್ತಾ ಕೂಡ ಎಂಡಿಎಂ ಆಸ್ಪತ್ರೆಗೆ ಆಗಮಿಸಿ ಗಾಯಾಳುಗಳಿಗೆ ಚಿಕಿತ್ಸೆ ವ್ಯವಸ್ಥೆ ಮಾಡಿದ್ದಾರೆ.

ಈ ಅಪಘಾತದಲ್ಲಿ ಚುರು ನಿವಾಸಿಗಳಾದ ವಿಜಯ್ ಸಿಂಗ್, ಉದಯ್ ಪ್ರತಾಪ್ ಸಿಂಗ್, ಮಂಜು ಕನ್ವರ್, ಪ್ರವೀಣ್ ಸಿಂಗ್, ದರ್ಪಣ್ ಸಿಂಗ್ ಮತ್ತು ಮಧುಕಂವರ್​ ಸಾವನ್ನಪ್ಪಿದ್ದಾರೆ. ಈ ಪೈಕಿ 3 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಿಲಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಮತ್ತೆ ಮೂವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದಲ್ಲಿ ಗಾಯಗೊಂಡಿರುವ ಸಂಜು ಕನ್ವರ್ ಮತ್ತು ಪವನ್ ಸಿಂಗ್​ರನ್ನು ಜೋಧ್‌ಪುರಕ್ಕೆ ಶಿಫಾರಸು ಮಾಡಲಾಗಿದ್ದು, ಚೈನ್ ಸಿಂಗ್​ಗೆ ಬಿಲಾರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೊಲೆರೋ ವಾಹನದಲ್ಲಿದ್ದವರು ನಾಗಣಾ ಕುಲದೇವಿಯ ದರ್ಶನಕ್ಕೆ ತೆರಳುತ್ತಿದ್ದು, ಈ ವೇಳೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details