ಶ್ರೀಕಾಳಹಸ್ತಿ(ಆಂಧ್ರಪ್ರದೇಶ): ಆಂಧ್ರಪ್ರದೇಶದ ಶ್ರೀಕಾಳಹಸ್ತಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿ, 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಲಾರಿ ಮತ್ತು ವ್ಯಾನ್ ಮಧ್ಯೆ ನಡೆದ ಅಪಘಾತದಿಂದ ಈ ದುರ್ಘಟನೆ ಸಂಭವಿಸಿದೆ.
ರೇಣಿಗುಂಟಾ-ನಾಯ್ಡುಪೇಟೆ ಮುಖ್ಯರಸ್ತೆ ಕಾಣುಪುರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ, ಮಿನಿ ವ್ಯಾನ್ನಲ್ಲಿ ತಿರುಪತಿಗೆ ತೆರಳಿದ್ದು, ಅಲ್ಲಿಂದ ಶ್ರೀಕಾಳಹಸ್ತಿಯ ಅರ್ಧನಾರೀಶ್ವರ ಸ್ವಾಮಿ ದೇವಸ್ಥಾನದ ಬಳಿ ಬರುತ್ತಿದ್ದ ವೇಳೆ ಎದುರುಗಡೆ ಬಂದ ಲಾರಿಗೆ ವ್ಯಾನ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಾಯಗೊಂಡಿರುವ ಎಲ್ಲರನ್ನೂ ಶ್ರೀಕಾಳಹಸ್ತಿಯ ಏರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಕೆಲವರ ಸ್ಥಿತಿ ತೀವ್ರ ಚಿಂತಾಜನಕವಾಗಿದೆ.