ಕರ್ನಾಟಕ

karnataka

ETV Bharat / bharat

ಹೆಲಿಕಾಪ್ಟರ್ ದುರ್ಘಟನೆ: ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿದ ಸೇನಾ ಪೈಲಟ್ ಅಂತ್ಯಕ್ರಿಯೆ - ರಾಜಸ್ಥಾನದ ಸೇನಾ ಪೈಲಟ್

ಶುಕ್ರವಾರ ಅರುಣಾಚಲ ಪ್ರದೇಶದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದ, ಮೇಜರ್ ಮುಸ್ತಫಾ ಬೋಹ್ರಾ ಅವರ ಅಂತ್ಯಕ್ರಿಯೆಯನ್ನು ಭಾನುವಾರ ಉದಯಪುರದಲ್ಲಿ ಸೇನಾ ಗೌರವದೊಂದಿಗೆ ನೆರವೇರಿಸಲಾಯಿತು.

ಸಕಲ ಗೌರವದೊಂದಿಗೆ ನೆರವೇರಿದ ಸೇನಾ ಪೈಲಟ್ ಅಂತ್ಯಕ್ರಿಯೆ
ಸಕಲ ಗೌರವದೊಂದಿಗೆ ನೆರವೇರಿದ ಸೇನಾ ಪೈಲಟ್ ಅಂತ್ಯಕ್ರಿಯೆ

By

Published : Oct 24, 2022, 10:01 AM IST

Updated : Oct 24, 2022, 10:12 AM IST

ಉದಯಪುರ (ರಾಜಸ್ಥಾನ):ಅರುಣಾಚಲ ಪ್ರದೇಶದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ರಾಜಸ್ಥಾನದ ಸೇನಾ ಪೈಲಟ್ ಅವರ ಅಂತ್ಯಕ್ರಿಯೆಯನ್ನು ಭಾನುವಾರ ಉದಯಪುರದಲ್ಲಿ ಸೇನಾ ಗೌರವದೊಂದಿಗೆ ನೆರವೇರಿಸಲಾಯಿತು. ಶುಕ್ರವಾರ ಅರುಣಾಚಲ ಪ್ರದೇಶದ ಟ್ಯೂಟಿಂಗ್ ಬಳಿ ಸೇನಾ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು, ಇದರಲ್ಲಿ ಮೇಜರ್ ಮುಸ್ತಫಾ ಬೋಹ್ರಾ ಮತ್ತು ನಾಲ್ವರು ಸೇನಾ ಸಿಬ್ಬಂದಿ ಮೃತಪಟ್ಟಿದ್ದರು.

ಸಕಲ ಗೌರವದೊಂದಿಗೆ ನೆರವೇರಿದ ಸೇನಾ ಪೈಲಟ್ ಅಂತ್ಯಕ್ರಿಯೆ

ಹುತಾತ್ಮ ಯೋಧನ ಪಾರ್ಥಿವ ಶರೀರವನ್ನು ಮಿಲಿಟರಿ ಟ್ರಕ್‌ನಲ್ಲಿ ಖಂಜಿಪೀರ್‌ನಲ್ಲಿರುವ ಸ್ಮಶಾನಕ್ಕೆ ತರಲಾಗಿದೆ. ಖಂಜಿಪೀರ್‌ನಲ್ಲಿರುವ ಸ್ಮಶಾನದ ಮುಂಭಾಗದಲ್ಲಿರುವ ಲುಕ್ಮಾನಿ ಮಸೀದಿಯಲ್ಲಿ ಮುಸ್ತಫಾ ಅವರಿಗೆ ಆರ್ಮಿ ಗಾರ್ಡ್ ಆಫ್ ಆನರ್ ನೀಡಲಾಯಿತು. ಬೋಹ್ರಾ ಕುಟುಂಬವು ಉದಯಪುರದ ಹಾಥಿಪೋಲ್‌ನಲ್ಲಿ ಸುಮಾರು 15 ವರ್ಷಗಳಿಂದ ನೆಲೆಸಿದೆ.

ಮುಸ್ತಫಾ ಅವರ ಮದುವೆ ಏಪ್ರಿಲ್‌ನಲ್ಲಿ ನಡೆಯಬೇಕಿತ್ತು. ಅಪಘಾತವಾಗುವ ಕೆಲವು ಕ್ಷಣಗಳ ಮೊದಲೇ ಅವರು ನಿಶ್ಚಿತಾರ್ಥ ಮಾಡಿಕೊಂಡ ಹುಡುಗಿ ಫಾತಿಮಾ ಅವರೊಂದಿಗೆ ಮಾತುಕತೆ ನಡೆಸಿದ್ದರು. ಮುಸ್ತಫಾ ಸಾವಿನ ಸುದ್ದಿ ಕೇಳಿ ಅವರ ಕುಟುಂಬ ಕಂಗಾಲಾಗಿತ್ತು. ವ್ಯಾಪಾರ ಸಮುದಾಯಕ್ಕೆ ಸೇರಿದ ಮುಸ್ತಫಾ ಯಾವಾಗಲೂ ಭಾರತೀಯ ಸೇನೆಗೆ ಸೇರುವ ಮತ್ತು ರಾಷ್ಟ್ರದ ಸೇವೆ ಮಾಡುವ ಕನಸನ್ನು ಹೊಂದಿದ್ದರು.

ಇದನ್ನೂ ಓದಿ:ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನ: ಇಬ್ಬರ ಸಾವು


Last Updated : Oct 24, 2022, 10:12 AM IST

ABOUT THE AUTHOR

...view details