ಜೆಮ್ಶೆಡ್ಪುರ(ಜಾರ್ಖಂಡ್) :ಟಾಟಾ ಸ್ಟೀಲ್ ಕೋಕ್ ಪ್ಲಾಂಟ್ನಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ನಂತರ ಅನಿಲ ಸೋರಿಕೆ ಮತ್ತು ಬೆಂಕಿಯ ಘಟನೆಯಿಂದಾಗಿ ಭೀತಿ ಉಂಟಾಗಿದೆ. ಐಎಂಎಂಎಂ(IMMM) ಕೋಕ್ ಸ್ಥಾವರದ ಬ್ಯಾಟರಿ ಸಂಖ್ಯೆ 6 ಮತ್ತು 7ರಲ್ಲಿ ಅಪಘಾತ ಸಂಭವಿಸಿದೆ.
ಈ ಘಟನೆಯಿಂದಾಗಿ ಪ್ಲಾಂಟ್ನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಬ್ಯಾಟರಿ ಸಂಖ್ಯೆ ಐದು, ಆರು, ಏಳು ಇರುವ ಗ್ಯಾಸ್ ಲೈನ್ನಲ್ಲಿ ಹಾಟ್ ಜಬ್ ಅಂದರೆ ಗ್ಯಾಸ್ ಕಟಿಂಗ್ ಮತ್ತು ವೆಲ್ಡಿಂಗ್ ಕೆಲಸ ನಡೆಯುತ್ತಿತ್ತು.