ಕರ್ನಾಟಕ

karnataka

ETV Bharat / bharat

ಮುಂಬೈ ಏರ್​ಪೋರ್ಟ್‌ನಲ್ಲಿ ವಿಮಾನದ ಬಳಿಯೇ ಹೊತ್ತಿ ಉರಿದ ಪುಶ್‌ಬ್ಯಾಕ್‌ ವಾಹನ - ಹೊತ್ತಿ ಉರಿದ ಪುಶ್​ಬ್ಯಾಕ್ ವಾಹನ

ಪ್ರಯಾಣಿಕರಿಂದ ತುಂಬಿದ್ದ ಏರ್​ ಇಂಡಿಯಾ ವಿಮಾನದ ಬಳಿ ಪುಶ್​ಬ್ಯಾಕ್​ ವಾಹನವೊಂದು ಹೊತ್ತಿ ಉರಿದ ಘಟನೆ ಮುಂಬೈ ಏರ್ಪೋರ್ಟ್‌ನಲ್ಲಿ ಇಂದು ನಡೆದಿದೆ.

pushback vehicle Air India flight at Mumbai
pushback vehicle Air India flight at Mumbai

By

Published : Jan 10, 2022, 3:38 PM IST

ಮುಂಬೈ(ಮಹಾರಾಷ್ಟ್ರ):ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವನೀಯ ದುರಂತವೊಂದು ಕೊಂಚದರಲ್ಲೇ ತಪ್ಪಿದೆ.

ಏರ್​ ಇಂಡಿಯಾ ವಿಮಾನಕ್ಕೆ ಪುಶ್​​ಬ್ಯಾಕ್​ ನೀಡುತ್ತಿದ್ದ ವಾಹನ ವಿಮಾನದ ಬಳಿಯೇ ಹೊತ್ತಿ ಉರಿಯಿತು. ಇಂದು ಬೆಳಗ್ಗೆ 11 ಗಂಟೆಗೆ ಈ ಘಟನೆ ನಡೆದಿದೆ. ವಿಮಾನ ನಿಲ್ದಾಣದ ಅಧಿಕಾರಿಗಳು 10 ನಿಮಿಷದಲ್ಲಿ ಬೆಂಕಿ ಹತೋಟಿಗೆ ತಂದಿದ್ದಾರೆ.

ಮುಂಬೈ ಏರ್​ಪೋರ್ಟ್​​ನಲ್ಲಿ ತಪ್ಪಿದ ಭಾರಿ ದುರಂತ

ಲಭ್ಯವಾಗಿರುವ ಮಾಹಿತಿ ಪ್ರಕಾರ, ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಯಾವುದೇ ರೀತಿಯ ಗಾಯ ಅಥವಾ ಪ್ರಾಣಹಾನಿ ಆಗಿಲ್ಲ.

ಏರ್​ ಇಂಡಿಯಾ ವಿಮಾನ ಮುಂಬೈನಿಂದ ಗುಜರಾತ್‌ನ ಜಾಮ್​ನಗರಕ್ಕೆ ತೆರಳುತ್ತಿತ್ತು. ಇದರಲ್ಲಿ 85 ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ:Fact Check: ರೈಲ್ವೇ ಪ್ರೊಟೆಕ್ಷನ್‌ ಫೋರ್ಸ್‌ ಹುದ್ದೆಗಳಿಗೆ ನೇಮಕಾತಿ ಸುದ್ದಿ ಸುಳ್ಳು

ABOUT THE AUTHOR

...view details