ಕರ್ನಾಟಕ

karnataka

ETV Bharat / bharat

ಲ್ಯಾಂಡಿಂಗ್ ವೇಳೆ ರನ್​ವೇಯಿಂದ ಜಾರಿದ ಏರ್​ ಇಂಡಿಯಾ ವಿಮಾನ.. ಪ್ರಯಾಣಿಕರು ಸುರಕ್ಷಿತ - ರನ್​ ವೇಯಿಂದ ಜಾರಿದ ವಿಮಾನ

55 ಪ್ರಯಾಣಿಕರನ್ನು ಹೊತ್ತು ದೆಹಲಿಯಿಂದ ಮಧ್ಯಪ್ರದೇಶಕ್ಕೆ ತೆರಳುತ್ತಿದ್ದ ಏರ್​ ಇಂಡಿಯಾ ವಿಮಾನ ಲ್ಯಾಂಡಿಂಗ್ ವೇಳೆ ರನ್​ವೇಯಿಂದ ಜಾರಿರುವ ಘಟನೆ ನಡೆದಿದೆ.

Air India Plane Skids Off Runway
Air India Plane Skids Off Runway

By

Published : Mar 12, 2022, 4:14 PM IST

ಜಬಲ್ಪುರ್​(ಮಧ್ಯಪ್ರದೇಶ): ಲ್ಯಾಂಡಿಂಗ್​ ಆಗ್ತಿದ್ದ ವೇಳೆ ಏರ್​ ಇಂಡಿಯಾ ವಿಮಾನವೊಂದು ಸ್ಕಿಡ್​ ಆಗಿ ರನ್​ವೇಯಿಂದ ಜಾರಿರುವ ಘಟನೆ ಡುಮ್ನಾ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಲ್ಯಾಂಡಿಂಗ್ ವೇಳೆ ರನ್​ವೇಯಿಂದ ಜಾರಿದ ಏರ್​ ಇಂಡಿಯಾ ವಿಮಾನ

ಇದನ್ನೂ ಓದಿ:ಉದ್ಯೋಗಿಗಳಿಗೆ ಕಹಿ ಸುದ್ದಿ.. EPF ಬಡ್ಡಿ ದರಕ್ಕೆ ಕತ್ತರಿ

ಏರ್ ಇಂಡಿಯಾ ವಿಮಾನ ದೆಹಲಿ-ಜಬಲ್ಪುರ್-ಬಿಲಾಸ್ಪುರ್ ನಡುವೆ ಪ್ರಯಾಣ ಬೆಳೆಸಿತ್ತು. ದೆಹಲಿ ಏರ್​ಪೋರ್ಟ್​​ನಿಂದ ಜಬಲ್ಪುರ್​ ಡುಮ್ನಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವಿಮಾನ ಲ್ಯಾಂಡಿಂಗ್​ ಆಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಘಟನೆಯಿಂದಾಗಿ ವಿಮಾನದ ಒಂದು ಚಕ್ರ ನೆಲಕ್ಕೆ ಅಪ್ಪಳಿಸಿದ್ದು, ದಿಢೀರ್​ ಆಗಿ ಸ್ಫೋಟಗೊಂಡಿದೆ. ಆದರೆ, ಅದೃಷ್ಟವಶಾತ್​​ ಯಾವುದೇ ಪ್ರಯಾಣಿಕರಿಗೆ ತೊಂದರೆ ಆಗಿಲ್ಲ.

ಅಪಘಾತದ ಬಗ್ಗೆ ವಿಮಾನ ನಿಲ್ದಾಣದ ಆಡಳಿತ ಮಂಡಳಿ ಈಗಾಗಲೇ ತನಿಖೆಗೆ ಸೂಚನೆ ನೀಡಿದೆ ಎಂದು ವರದಿಯಾಗಿದೆ.

ABOUT THE AUTHOR

...view details