ಪಾಟ್ನಾ: ತಮ್ಮ ಧ್ವನಿಯಿಂದಲೇ ಜನರ ಮನವನ್ನು ಗೆದ್ದಿರುವ ಗಾಯಕಿ ಮೈಥಿಲಿ ಠಾಕೂರ್ ಇಂದು ತಮ್ಮ ಟ್ವಿಟರ್ ಖಾತೆಯಲ್ಲಿ ತಮಗಾಗಿರುವ ನೋವಿನ ಬಗ್ಗೆ ಹಂಚಿಕೊಂಡಿದ್ದಾರೆ. ಟ್ವಿಟರ್ನಲ್ಲಿ 6E-2022 (ಮೈಥಿಲಿ ಠಾಕೂರ್ ವಿಮಾನ ಸಂಖ್ಯೆ 6E 2022 ) ನಿಂದ ಪಾಟ್ನಾಗೆ ಪ್ರಯಾಣಿಸುವ ಮೂಲಕ ಈ ದಿನವು ಕೆಟ್ಟ ಅನುಭವದೊಂದಿಗೆ ಪ್ರಾರಂಭವಾಯಿತು.
ಇಂಡಿಗೋ ಏರ್ಲೈನ್ ಸಿಬ್ಬಂದಿ ಜಿ.ಎಸ್. ತೇಜೇಂದ್ರ ಸಿಂಗ್ ತೀರಾ ಅಸಭ್ಯವಾಗಿ ವರ್ತಿಸಿದ್ದು, ಇದನ್ನು ನಾನು ನಿರೀಕ್ಷಿಸಿರಲಿಲ್ಲ. ಇಂದಿನ ನಡವಳಿಕೆಯಿಂದಾಗಿ, ನಾನು ಅದೇ ಏರ್‌ಲೈನ್‌ನಲ್ಲಿ ಮತ್ತೆ ಪ್ರಯಾಣಿಸಬೇಕೇ ಎಂಬ ಸಂದಿಗ್ಧತೆಗೆ ಸಿಲುಕಿರುವೆ? ಎಂದು ಮೈಥಿಲಿ ಠಾಕೂರ್ ದೆಹಲಿಯಿಂದ ಪಟ್ನಾಗೆ ತಲುಪಿದ ನಂತರ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.