ಕರ್ನಾಟಕ

karnataka

ETV Bharat / bharat

ಬೆನ್ನು ನೋವು, ಕುತ್ತಿಗೆ ನೋವು ಬಾರದಂತೆ ಮಾಡಲು ಸರಿಯಾದ ಭಂಗಿ ಅನುಸರಿಸಿ - ಈಟಿವಿ ಭಾರತ್​ ಸುಖೀಭವ

ತಪ್ಪಾದ ಭಂಗಿಯು ನಮ್ಮ ದೇಹದಲ್ಲಿ ಅನೇಕ ರೀತಿಯ ನೋವು ಮತ್ತು ಇತರ ಸಮಸ್ಯೆಗಳಿಗೆ ಕಾರಣವಾಗಬಹುದು. ಅದಕ್ಕಾಗಿಯೇ ಸರಿಯಾದ ರೀತಿಯಲ್ಲಿ ನಡೆಯುವುದು, ಕುಳಿತುಕೊಳ್ಳುವುದು ಮತ್ತು ನಿಲ್ಲುವುದು ಅವಶ್ಯಕ. ಆದ್ದರಿಂದ, ಸರಿಯಾದ ಭಂಗಿಯನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

Maintain The Right Posture To Avoid Pain
Maintain The Right Posture To Avoid Pain

By

Published : Oct 12, 2021, 6:47 PM IST

ಸದೃಢವಾದ ದೇಹವು ಹಲವಾರು ಆರೋಗ್ಯ ಸಂಬಂಧಿತ ಸ್ಥಿತಿಗಳನ್ನು ಹಾಗೂ ದೇಹದ ಯಾವುದೇ ಭಾಗದಲ್ಲಿ ನೋವು ತಡೆಯಬಹುದು ಎಂಬ ಅಂಶ ಎಲ್ಲರಿಗೂ ತಿಳಿದಿದೆ. ಆದರೂ ನಿಯಮಿತವಾಗಿ ವ್ಯಾಯಾಮ ಮಾಡುವ, ಸಮತೋಲಿತ ಆಹಾರ ಸೇವಿಸುವ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವ ಜನರ ಸಂಖ್ಯೆ ಬಹಳ ಕಡಿಮೆ ಇದೆ.

ಅಷ್ಟೇ ಅಲ್ಲ ಇದರ ಹೊರತಾಗಿಯೂ, ಜನರು ಸಾಮಾನ್ಯವಾಗಿ ಮರೆಯುವ ಮೂಲ ವಿಷಯ ಎಂದರೆ ಸರಿಯಾದ ಭಂಗಿಯನ್ನು ಕಾಪಾಡಿಕೊಳ್ಳುವುದು. ಆದ್ದರಿಂದ ಇಂದು, ಈಟಿವಿ ಭಾರತ್ ಸುಖೀಭವ ನಿಮ್ಮೊಂದಿಗೆ ಸರಿಯಾದ ಭಂಗಿಯನ್ನು ಅನುಸರಿಸಲು, ಅನೇಕ ರೀತಿಯ ನೋವುಗಳು ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಕೆಲವು ಮಾರ್ಗಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದೆ.

ಸರಿಯಾದ ಭಂಗಿ ಎಂದರೇನು?

ಕುಳಿತುಕೊಳ್ಳುವುದು, ನಿಂತುಕೊಳ್ಳುವುದು, ತಪ್ಪಾಗಿ ನಡೆಯುವುದು ಅಥವಾ ಮುಂದಕ್ಕೆ ವಾಲುವುದು ಮತ್ತು ಸಡಿಲವಾದ ಭುಜಗಳಿಂದ ನಡೆಯುವುದು ದೇಹಕ್ಕೆ ನೋವನ್ನು ಉಂಟುಮಾಡಬಹುದು. ಡೆಹ್ರಾಡೂನ್ ಮೂಲದ ಹಿರಿಯ ಮೂಳೆಚಿಕಿತ್ಸಕ ಡಾ. ಹೇಮ್​ ಜೋಶಿ, ಹೆಚ್ಚಿನ ಬೆನ್ನು ನೋವು, ಬಿಗಿಯಾದ ಕುತ್ತಿಗೆ , ಭುಜದ ನೋವು ಇತ್ಯಾದಿಗಳಿಗೆ ತಪ್ಪು ಭಂಗಿಯೇ ಕಾರಣ ಎಂದು ವಿವರಿಸುತ್ತಾರೆ. ಅದಕ್ಕಾಗಿಯೇ ಎದ್ದೇಳುವಾಗ, ಕುಳಿತುಕೊಳ್ಳುವಾಗ, ಬಾಗುವಾಗ, ಮಲಗುವಾಗ ಮತ್ತು ನಿಂತಾಗಲೂ ಸರಿಯಾದ ಭಂಗಿ (right poster) ಅನುಸರಿಸುವುದು ಬಹಳ ಮುಖ್ಯ.

ಸರಿಯಾಗಿ ಕುಳಿತುಕೊಳ್ಳುವುದು:

ನೀವು ಯಾವಾಗಲೂ ಮುಂದಕ್ಕೆ ಅಥವಾ ವಿಲಕ್ಷಣವಾದ ಭಂಗಿಯಲ್ಲಿ ಕುಳಿತುಕೊಳ್ಳುತ್ತಿದ್ದರೆ, ಬೆನ್ನುಮೂಳೆಯ ಮೇಲೆ ಹೆಚ್ಚಿನ ಒತ್ತಡ ಇರುತ್ತದೆ. ನೀವು ಕುರ್ಚಿಯ ಮೇಲೆ ಕುಳಿತಿದ್ದರೆ, ನಿಮ್ಮ ಬೆನ್ನು ಕುರ್ಚಿಯ ಹಿಂಭಾಗಕ್ಕೆ ಸಂಪೂರ್ಣವಾಗಿ ಪಕ್ಕದಲ್ಲಿದೆ ಎಂದು ಖಚಿತಪಡಿಸಿಕೊಳ್ಳಿ.

ಕುಳಿತುಕೊಳ್ಳುವುದರ ಹೊರತಾಗಿ, ಓದುವಾಗ ಅಥವಾ ಮೇಜಿನ ಬಳಿ ಕೆಲಸ ಮಾಡುವಾಗ ನೀವು ಕುಳಿತಿರುವ ಕುರ್ಚಿ ಮತ್ತು ಮೇಜಿನ ನಡುವಿನ ಅಂತರವು ತುಂಬಾ ಹೆಚ್ಚಿಲ್ಲ, ಹಾಗೆಯೇ ಕುರ್ಚಿಯ ಎತ್ತರ ಮತ್ತು ಟೇಬಲ್ ಕೂಡ ಸರಿಯಾಗಿರುವುದನ್ನು ಗಮನಿಸುವುದು ಮುಖ್ಯವಾಗಿದೆ. ಕುರ್ಚಿಯ ಮೇಲೆ ದೀರ್ಘಕಾಲ ಕುಳಿತುಕೊಳ್ಳುವುದು ನಿಸ್ಸಂದೇಹವಾಗಿ ಸೊಂಟದ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ ಮತ್ತು ನೋವು ತರುತ್ತದೆ. ಆದ್ದರಿಂದ ಸಾಧ್ಯವಾದರೆ, ಆಗಾಗ ಕುರ್ಚಿಯಿಂದ ಎದ್ದು ಸ್ವಲ್ಪ ಹೊತ್ತು ನಡೆಯಿರಿ.

ನೇರವಾಗಿ ನಿಂತುಕೊಳ್ಳಿ:

ಸಾಮಾನ್ಯವಾಗಿ ಯಾರೊಂದಿಗಾದರೂ ನಿಂತು ಮಾತನಾಡುವಾಗ ಅಥವಾ ಕೆಲಸ ಮಾಡುವಾಗ ಅಥವಾ ನಡೆಯುವಾಗ, ಜನರು ಸಾಮಾನ್ಯವಾಗಿ ಭುಜಗಳನ್ನು ಬಾಗಿಸುತ್ತಾರೆ, ನೇರವಾಗಿ ನಿಂತು ಮಾತನಾಡುವುದಿಲ್ಲ. ಇದು ನೋವನ್ನು ಉಂಟುಮಾಡುವುದಲ್ಲದೇ, ವ್ಯಕ್ತಿಯ ವ್ಯಕ್ತಿತ್ವದ ಮೇಲೂ ಪರಿಣಾಮ ಬೀರುತ್ತದೆ.

ಆದ್ದರಿಂದ, ನಿಂತಿರುವಾಗ, ಮುಂದಕ್ಕೆ ಓರೆಯಾಗದಂತೆ ನಿಲ್ಲುವುದನ್ನು ಅಭ್ಯಾಸ ಮಾಡಿ ಮತ್ತು ನಿಮ್ಮ ಭುಜಗಳು, ಸೊಂಟ, ಕುತ್ತಿಗೆ ಮತ್ತು ಮೊಣಕಾಲುಗಳನ್ನು ನೇರವಾಗಿ ಇರಿಸಿ. ಸರಿಯಾದ ಭಂಗಿಯಲ್ಲಿ ನಿಲ್ಲುವುದು ನಮ್ಮ ನಡಿಗೆಯನ್ನು ಸುಧಾರಿಸುತ್ತದೆ.

'ಟೆಕ್ಸ್ಟ್ ನೆಕ್'(Text Neck) ಕುತ್ತಿಗೆಯ ಬಗ್ಗೆ ಎಚ್ಚರದಿಂದಿರಿ:

ಇತ್ತೀಚಿನ ದಿನಗಳಲ್ಲಿ, ಮಕ್ಕಳು, ಹಿರಿಯರು, ಯುವಕರು ಪ್ರತಿಯೊಬ್ಬರೂ ತಮ್ಮ ಹೆಚ್ಚಿನ ಸಮಯವನ್ನು ಫೋನ್ ಬಳಕೆಯಲ್ಲೇ ಕಳೆಯುತ್ತಾರೆ. ಆದರೆ, ತಲೆಗಳನ್ನು ಕೆಳಕ್ಕೆ ಓರೆಯಾಗಿಸಿಕೊಂಡು ಫೋನ್​​ ಸ್ಕ್ರೀನ್​​ ಮೇಲೆ ನಿರಂತರವಾಗಿ ನೋಟ ಇಡುವುದು 'ಟೆಕ್ಸ್ಟ್ ನೆಕ್' ಎಂಬ ಸ್ಥಿತಿಗೆ ಕಾರಣವಾಗಬಹುದು. ಇದು ಕುತ್ತಿಗೆ ನೋವು, ಕಣ್ಣುಗಳಲ್ಲಿ ನೋವು, ತಲೆಯಲ್ಲಿ ಭಾರವಾದ ಭಾವನೆ ಇತ್ಯಾದಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ, 'ಟೆಕ್ಸ್ಟ್ ನೆಕ್' ಕುತ್ತಿಗೆಯನ್ನು ತಪ್ಪಿಸಲು, ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಅಥವಾ ಡೆಸ್ಕ್‌ಟಾಪ್‌ಗಳನ್ನು ಬಳಸುವಾಗ, ನಿಮ್ಮ ಸ್ಕ್ರೀನ್​​ ನಿಮ್ಮ ಕಣ್ಣಿನ ಮಟ್ಟದಲ್ಲಿರಬೇಕು, ಇದರಿಂದ ನೀವು ದೀರ್ಘಕಾಲದವರೆಗೆ ನಿಮ್ಮ ಕುತ್ತಿಗೆಯನ್ನು ಬಗ್ಗಿಸುವ ಅವಶ್ಯಕತೆ ಬರುವುದಿಲ್ಲ.

ಡ್ರೈವಿಂಗ್​ ಮಾಡುವಾಗ ಜಾಗರೂಕರಾಗಿರಿ:

ಲಾಂಗ್​​ ಡ್ರೈವ್​ ಮಾಡುವಾಗ ಚಾಲಕನು ಸ್ವಲ್ಪ ಮುಂದಕ್ಕೆ ವಾಲುವುದು ಮತ್ತೆ ಆರಾಮದಾಯಕ ಸ್ಥಾನದಲ್ಲಿ ಕುಳಿತುಕೊಳ್ಳುವುದು ಸಹಜ, ಆದರೆ, ಇದು ಸರಿಯಲ್ಲ. ಚಾಲನೆ ಮಾಡುವಾಗ, ವ್ಯಕ್ತಿಯು ತಮ್ಮ ಬೆನ್ನನ್ನು ಸಾಧ್ಯವಾದಷ್ಟು ನೇರವಾಗಿಡಲು ಪ್ರಯತ್ನಿಸಬೇಕು. ಇತ್ತೀಚಿನ ದಿನಗಳಲ್ಲಿ, ಸೀಟ್ ಹಾಗೂ ಸ್ಟೀರಿಂಗ್ ವೀಲ್ ಹೊಂದಾಣಿಕೆ ವೈಶಿಷ್ಟ್ಯವು ಬಹುತೇಕ ಎಲ್ಲಾ ಕಾರುಗಳಲ್ಲಿ ಲಭ್ಯವಿದೆ. ಈ ರೀತಿಯಾಗಿ, ಚಾಲಕ/ಚಾಲಕಿ ತನ್ನ ಎತ್ತರಕ್ಕೆ ಅನುಗುಣವಾಗಿ ತನ್ನ ಸೀಟ್​​ ಅನ್ನು ಸರಿಹೊಂದಿಸಿಕೊಂಡು ಕೂರಬಹುದು.

ಆದರೆ, ನೆನಪಿಡಿ, ಸ್ಟೀರಿಂಗ್ ವೀಲ್ ಅನ್ನು ನಿಮ್ಮ ಭುಜದೊಂದಿಗೆ ಸಂಪೂರ್ಣವಾಗಿ ಜೋಡಿಸುವ ರೀತಿಯಲ್ಲಿ ಸೀಟ್​ ಅನ್ನು ಸರಿಹೊಂದಿಸಬೇಕು. ಇದು ತುಂಬಾ ಎತ್ತರವಾಗಬಾರದು ಅಥವಾ ತುಂಬಾ ಕಡಿಮೆಯಾಗಿರಬಾರದು. ಅಲ್ಲದೇ, ನಿಮ್ಮ ಮತ್ತು ಸ್ಟೀರಿಂಗ್ ಚಕ್ರದ ನಡುವಿನ ಅಂತರವು ಅನುಪಾತದಲ್ಲಿರಬೇಕು, ಆದ್ದರಿಂದ ನೀವು ಚಾಲನೆ ಮಾಡುವಾಗ ಬ್ರೇಕ್ ಮತ್ತು ಗೇರ್‌ಗಳಿಗಾಗಿ ನಿಮ್ಮ ದೇಹವನ್ನು ಹೆಚ್ಚು ಎಳೆಯಬೇಕಾಗಿಲ್ಲ. ಈ ರೀತಿ ಮಾಡುವ ಮೂಲಕ ದೀರ್ಘ ಪ್ರಯಾಣದ ಬಳಿಕ ಎದುರಾಗುವ ಬೆನ್ನು ನೋವು ಮತ್ತು ಕುತ್ತಿಗೆಯ ಬಿಗಿತವನ್ನು ತಪ್ಪಿಸಬಹುದು.

ದಪ್ಪ ದಿಂಬುಗಳನ್ನು ಬಳಸಬೇಡಿ:

ದಪ್ಪವಾದ ದಿಂಬಿನ ಮೇಲೆ ಮಲಗುವುದರಿಂದ ಕುತ್ತಿಗೆ ನೋವು ಮತ್ತು ಬಿಗಿತ ಉಂಟಾಗಬಹುದು. ಏಕೆಂದರೆ ಎತ್ತರದ ದಿಂಬು ದೇಹದ ಸಮತೋಲನವನ್ನು ಕದಡುತ್ತದೆ ಮತ್ತು ನಮ್ಮ ಕುತ್ತಿಗೆಯ ಮೇಲೆ ಹೆಚ್ಚಿನ ಒತ್ತಡವನ್ನು ಬೀರುತ್ತದೆ. ಆದ್ದರಿಂದ, ಈಗಾಗಲೇ ಬೆನ್ನುನೋವಿನಿಂದ ಅಥವಾ ಬೆನ್ನುಹುರಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಅಂತಹ ಎತ್ತರದ ದಿಂಬುಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು ಮತ್ತು ತೆಳ್ಳಗಿನ ಅಥವಾ ಯಾವುದೇ ಕಡಿಮೆ ಎತ್ತರದ ದಿಂಬನ್ನು ಆರಿಸಿಕೊಳ್ಳಬೇಕು.

ನೀವು ಬಗ್ಗುವಾಗ ಎಚ್ಚರ ವಹಿಸಿ:

ಬಾಗುವಾಗ ಸರಿಯಾದ ಭಂಗಿಯನ್ನು ಕಾಯ್ದುಕೊಳ್ಳುವುದು ಅಗತ್ಯವಾಗಿರುತ್ತದೆ, ವಿಶೇಷವಾಗಿ ನೀವು ಏನನ್ನಾದರೂ ಎತ್ತಲು ಅಥವಾ ತೆಗೆದುಕೊಳ್ಳಲು ಬಾಗಿದಾಗ ಎಚ್ಚರವಹಿಸಬೇಕು. ಏಕೆಂದರೆ ಅದರ ಬಗ್ಗೆ ತೋರುವ ನಿರ್ಲಕ್ಷ್ಯದಿಂದ ಬೆನ್ನು ನೋವು ಉಂಟಾಗಬಹುದು ಮತ್ತು ಈಗಾಗಲೇ ಇರುವ ನೋವು ಇನ್ನಷ್ಟು ಹೆಚ್ಚಾಗಲು ಕಾರಣವಾಗಬಹುದು. ಓರೆಯಾಗಬೇಡಿ. ಏನನ್ನಾದರೂ ಎತ್ತುವಾಗ ನಿಮ್ಮ ಸೊಂಟದ ಮೇಲೆ ಒತ್ತಡ ಬಿದ್ದರೆ ,ನಿಮ್ಮ ಮೊಣಕಾಲುಗಳ ಮೇಲೆ ಬಾಗಿ ಅಥವಾ ಕುಳಿತುಕೊಳ್ಳಿ ಮತ್ತು ನಂತರ ಅದನ್ನು ಮೇಲಕ್ಕೆತ್ತಿ. ಈ ರೀತಿಯಾಗಿ ಮಾಡಿದರೆ ನಿಮ್ಮ ಕೆಳ ಬೆನ್ನಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ABOUT THE AUTHOR

...view details