ಲಖನೌ:ಮೈನ್ಪುರಿ ಲೋಕಸಭಾ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಡಿಂಪಲ್ ಯಾದವ್ ಮೂರನೇ ಸುತ್ತಿನ ಮತ ಏಣಿಕೆಯಲ್ಲಿ 4,800 ಮತಗಳಿಂದ ಮುಂದಿದ್ದಾರೆ.
ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ರಘುರಾಜ್ ಶಕ್ಯಾ ಅವರಿಗಿಂತ ಅವರು ಮುನ್ನಡೆ ಕಾಯ್ದುಕೊಂಡಿದ್ದಾರೆ. ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಹರೀಶ್ ಚಂದ್ರ ಶ್ರೀವಾತ್ಸವ, ಸಮಾಜವಾದಿ ಪಕ್ಷದಿಂದ ನಾವು ಸ್ಥಾನ ಪಡೆದುಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.