ಕರ್ನಾಟಕ

karnataka

ETV Bharat / bharat

ಕಮಾಂಡೆಂಟ್​ನ ಮಗ, ಅತ್ತೆ, ತಾಯಿ ಮೇಲೆ ಹಲ್ಲೆ ಮಾಡಿ ಕೆಲಸದಾಕೆ ಆತ್ಮಹತ್ಯೆ! - ರಾಂಚಿ ಇತ್ತೀಚಿನ ಸುದ್ದಿ

ಸಿಆರ್​ಪಿಎಫ್​​ ಕಮಾಂಡೆಂಟ್ ಮನೆಯಲ್ಲಿ ಕೆಲಸ ಮಾಡ್ತಿದ್ದ ಮಹಿಳೆಯೊಬ್ಬಳು ಅವರ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿರುವ ಘಟನೆ ರಾಂಚಿಯಲ್ಲಿ ನಡೆದಿದೆ.

Women attack
Women attack

By

Published : Feb 5, 2021, 5:04 PM IST

ರಾಂಚಿ(ಜಾರ್ಖಂಡ್​):ಸಿಆರ್​​ಪಿಎಫ್​ನ ಸಹಾಯಕ ಕಮಾಂಡೆಂಟ್​​ ಡಾ. ಜಗತ್​ ಆನಂದ್​ ಸುರಿನ್​ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದು, ಅದಕ್ಕೂ ಮೊದಲು ಮನೆಯವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾಳೆ.

ಕಮಾಂಡೆಂಟ್ ಮಗನ ಮೇಲೆ ಹಲ್ಲೆ ಮಾಡಿದ ಕೆಲಸದಾಕೆ

ಕೆಲಸದಾಕೆ ಕಮಾಂಡೆಂಟ್​ನ ಮಗ, ಅತ್ತೆ ಮತ್ತು ತಾಯಿ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿವೆ. ನಗರದ ಬರಿಯಾತು ಪ್ರದೇಶದಲ್ಲಿ ಜಗತ್ ಆನಂದ್ ಸುರಿನ್ ವಾಸವಾಗಿದ್ದರು. ಇವರ ಮನೆಯಲ್ಲಿ ಸಲೋನಿ ಕೆಲಸದಾಕೆ ಆಗಿ ಸೇವೆ ಸಲ್ಲಿಸುತ್ತಿದ್ದರು. ಇಂದು ಏಕಾಏಕಿಯಾಗಿ 7 ವರ್ಷದ ಮಗ, ತಾಯಿ ಹಾಗೂ ಅತ್ತೆ ಮೇಲೆ ಕಬ್ಬಿಣದ ರಾಡ್​ನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದು, ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಓದಿ: ಜೈಲಿಂದ ಬಂದವನಿಂದ ಬಾಲಕಿ ಮೇಲೆ ಅತ್ಯಾಚಾರ: ಹೊಲದಲ್ಲಿ ಪತ್ತೆಯಾಯ್ತು ಸಂತ್ರಸ್ತೆ ಶವ

ಆನಂದ್​ ಪತ್ನಿ ಜತೆ ಮಾರುಕಟ್ಟೆಗೆ ತೆರಳಿದ್ದ ವೇಳೆ ಈ ಕೃತ್ಯ ನಡೆದಿದ್ದು, ಮಹಿಳೆ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ ಕೆಲಸದಾಕೆ ಮಾನಸಿಕ ಅಸ್ವಸ್ಥಳಾಗಿದ್ದು, ಕಳೆದ 8 ವರ್ಷಗಳಿಂದ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಫೆಬ್ರವರಿ 3ರಂದು ಆಸ್ಪತ್ರೆಗೆ ದಾಖಲು ಮಾಡುವಂತೆ ವೈದ್ಯರು ಸೂಚನೆ ಸಹ ನೀಡಿದ್ದರು ಎಂದು ತಿಳಿದು ಬಂದಿದೆ. ಆದರೆ ಇವರನ್ನ ಆಸ್ಪತ್ರೆಗೆ ದಾಖಲು ಮಾಡಿರಲಿಲ್ಲ. ಇದೀಗ ಹಲ್ಲೆ ನಡೆಸಿ, ಆತ್ಮಹತ್ಯೆಗೆ ಶರಣಾಗಿದ್ದಾಳೆ.

ABOUT THE AUTHOR

...view details