ನವದೆಹಲಿ:ಬಜೆಟ್ ಅಧಿವೇಶನ ಆರಂಭಗೊಂಡಿದ್ದು, ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಪಕ್ಷದವರು ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಇಂದು ಮಾತನಾಡಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಕೇಂದ್ರ ಸರ್ಕಾರದಿಂದ ಭಾರತದ ಇತಿಹಾಸ ಬದಲಾಯಿಸುವ ಕೆಲಸವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೋಕಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಟಿಎಂಸಿ ಸಂಸದೆ ಮಹುವಾ ಲೋಕಸಭೆಯಲ್ಲಿ ಭಾಗಿಯಾಗಿ ಮಾತನಾಡಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಜನರ ನಿರ್ಧಾರ ನಿಯಂತ್ರಿಸಲು ಮುಂದಾಗಿರುವ ಬಿಜೆಪಿ, ಇದೀಗ ಭಾರತದ ಇತಿಹಾಸ ಬದಲಾಯಿಸುವ ಕೆಲಸ ಮಾಡ್ತಿದೆ. ಇದರಿಂದ ಮುಂಬರುವ ದಿನಗಳ ಬಗ್ಗೆ ಭಯ ಪಡುವಂತಾಗಿದೆ ಎಂದರು.
ಇದನ್ನೂ ಓದಿರಿ:ಶಾಲೆ ತೆರೆಯಲು ಮಾರ್ಗಸೂಚಿ ಹೊರಡಿಸಿದ ಕೇಂದ್ರ ಸರ್ಕಾರ.. ಏನೆಲ್ಲ ನಿಯಮ ಪಾಲನೆ?
ರಾಷ್ಟ್ರಪತಿಗಳ ವಂದನಾ ನಿರ್ಣಯದ ಮೇಲೆ ಮಾತನಾಡಿರುವ ತೃಣಮೂಲ ಕಾಂಗ್ರೆಸ್ ಸಂಸದೆ, ರಾಷ್ಟ್ರಪತಿಗಳು ಭಾಷಣದ ವೇಳೆ ಸ್ವಾತಂತ್ರ್ಯ ಹೋರಾಟಗಾರರ ಸೇವೆ ಬಗ್ಗೆ ಉಲ್ಲೇಖ ಮಾಡಿದ್ದು, ಅದೊಂದು ಸಣ್ಣ ಸೇವೆ ಎಂದು ಕರೆದಿದ್ದಾರೆ. ಈ ಹೇಳಿಕೆ ಸಲ್ಲದು. ದೇಶದ ಹೋರಾಟದಲ್ಲಿ ಭಾಗಿಯಾಗಲು ಸುಭಾಷ್ ಚಂದ್ರ ಬೋಸ್ ಇಂಡಿಯನ್ ನ್ಯಾಷನಲ್ ಆರ್ಮಿ ಕಟ್ಟಿದ್ದರು. ಇದಕ್ಕಾಗಿ ನಿರ್ಮಾಣಗೊಂಡಿದ್ದ ಲಾಂಛನದಲ್ಲಿ ಟಿಪ್ಪು ಸುಲ್ತಾನ್ ಅವರ ಭಾವಚಿತ್ರವಿತ್ತು. ಆದರೆ, ಕೇಂದ್ರ ಸರ್ಕಾರ ಪಠ್ಯಪುಸ್ತಕಗಳಲ್ಲಿನ ಅವರ ಪಾಠ, ಜೀವನ ಚರಿತ್ರೆ ಅಳಿಸಿ ಹಾಕಿದೆ ಎಂದು ವಾಗ್ದಾಳಿ ನಡೆಸಿದರು.
ಭಾಷಣಕ್ಕೂ ಮುನ್ನ ಟ್ವೀಟ್ ಮಾಡಿದ್ದ ಸಂಸದೆ..ಲೋಕಸಭೆಯಲ್ಲಿ ಭಾಷಣ ಮಾಡುವುದಕ್ಕೂ ಮುಂಚಿತವಾಗಿ ಟ್ವೀಟ್ ಮಾಡಿದ್ದ ಮಹುವಾ ಮೊಯಿತ್ರಾ, ಇಂದು ಸಂಜೆ ಲೋಕಸಭೆಯಲ್ಲಿ ಮಾತನಾಡುತ್ತೇನೆ. 'ಟೀಕಿಸುವ ತಂಡ ಗೋಮೂತ್ರ ಕುಡಿದು, ಸಿದ್ಧರಾಗಿರಿ' ಎಂದು ಬರೆದುಕೊಂಡಿದ್ದರು.