ಕರ್ನಾಟಕ

karnataka

ETV Bharat / bharat

ರಾಮಮಂದಿರಕ್ಕೆ ದೇಣಿಗೆ ನೀಡಿದ ಮಹಮ್ಮದ್ ಹಸನ್: ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಕ್ಷಣ - ಉತ್ತರಾಖಂಡ ಸುದ್ದಿ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ರಾಷ್ಟ್ರವ್ಯಾಪಿ ದೇಣಿಗೆ ಸಂಗ್ರಹವಾಗುತ್ತಿದ್ದು, ಮಹಮ್ಮದ್ ಹಸನ್ ಎಂಬವರು ರೂ.1,100 ದೇಣಿಗೆ ನೀಡಿದ್ದಾರೆ. ಈ ಮೂಲಕ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.

mahmud hasan
ದೇಣಿಗೆ ನೀಡಿದ ಮಹಮ್ಮದ್ ಹಸನ್

By

Published : Jan 18, 2021, 12:30 PM IST

ಮಸ್ಸೂರಿ (ಉತ್ತರಾಖಂಡ):ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಜನರು ವ್ಯಾಪಕವಾಗಿ ದೇಣಿಗೆ ನೀಡುತ್ತಿದ್ದಾರೆ. ಈ ಅಭಿಯಾನದಲ್ಲಿ ಮುಸ್ಲಿಂ ಬಾಂಧವರು ಸಹ ಭಾಗಿಯಾಗಿದ್ದು, ಮಹಮ್ಮದ್ ಹಸನ್ ಎಂಬವರು ರೂ. 1,100 ದೇಣಿಗೆ ನೀಡಿದ್ದಾರೆ.

70 ವರ್ಷದ ಮಹಮ್ಮದ್ ಹಸನ್ ಜಾತ್ಯತೀತತೆ ಉತ್ತೇಜಿಸುವ ಹೆಜ್ಜೆಯಾಗಿ 1,100 ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ. ಇದು ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದೆ.

ಇದನ್ನು ಓದಿ: ಟ್ರ್ಯಾಕ್ಟರ್​ ಪರೇಡ್ ತಡೆಗೆ ಯಾವುದೇ ಆದೇಶ ನೀಡಲು ಸುಪ್ರೀಂ ನಕಾರ: ಅರ್ಜಿ ವಿಚಾರಣೆ ಮುಂದೂಡಿಕೆ

ಮಹಮ್ಮದ್ ಹಸನ್ ಈ ಮೊತ್ತವನ್ನು ರಾಮ ದೇವಾಲಯದ ಹಣವನ್ನು ಸಂಗ್ರಹಿಸುತ್ತಿರುವ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ರಾಕೇಶ್ ರಾವತ್ ಅವರಿಗೆ ನೀಡಿದರು. ಇದೇ ವೇಳೆ ಮಾತನಾಡಿದ ಅವರು, " ನಾನು ಮಧ್ಯಮ ವರ್ಗದ ವ್ಯಕ್ತಿ. ನನ್ನ ಸಾಮರ್ಥ್ಯಕ್ಕೆ ಅನುಸಾರವಾಗಿ ದೇಣಿಗೆ ನೀಡಿದ್ದೇನೆ. ಶ್ರೀಮಂತಿಕೆ ಇದ್ದರೆ ಹೆಚ್ಚಿನ ಹಣ ನೀಡುತ್ತಿದ್ದೆ" ಎಂದರು. ಪ್ರಧಾನಿ ಮೋದಿಯವರ ಕ್ರಮದಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ ಎಂದು ಹೇಳಿದ್ದಾರೆ.

ದೇಶದ ಏಕತೆ ಮತ್ತು ಸಮಗ್ರತೆಯ ಬೆಳವಣಿಗೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡುತ್ತಿರುವ ಕಾರ್ಯದ ಬಗ್ಗೆ ಅವರು ಸಂತೋಷಪಟ್ಟಿದ್ದಾರೆ. ಈ ವೇಳೆ ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣಕ್ಕೆ ಸಹಕಾರ ನೀಡಲು ಜನರು ಮುಂದೆ ಬರಬೇಕೆಂದು ಮನವಿ ಮಾಡಿದರು.

ABOUT THE AUTHOR

...view details