ಉದ್ಯಮಿ ಆನಂದ್ ಮಹೀಂದ್ರಾ ಅವರು ಕಾರುಗಳಿಗೆ ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಕ್ಯಾಮೆರಾಗಳು ಯಾವ ರೀತಿ ಸಹಾಯಕವಾಗುತ್ತವೆ ಎಂಬುದಕ್ಕೆ ಟ್ವಿಟ್ಟರ್ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಮಹೀಂದ್ರಾ ಅವರು ಹಂಚಿಕೊಂಡಿರುವ 30 ಸೆಕೆಂಡುಗಳ ವಿಡಿಯೋದಲ್ಲಿ ನಾಯಿಯೊಂದು ತನ್ನ ಕೌಶಲ್ಯಗಳ ಮೂಲಕ ಕಾರ್ ಡ್ರೈವರ್‌ಗೆ ರಿವರ್ಸ್ ಪಾರ್ಕ್ ಮಾಡಲು ಇತರ ತಂತ್ರಜ್ಞಾನಗಳಂತೆ ನಿಖರವಾಗಿ ಹೇಗೆ ಮಾರ್ಗದರ್ಶನ ನೀಡಲು ಸಾಧ್ಯವಾಯಿತು ಎಂಬುದನ್ನು ತೋರಿಸುತ್ತದೆ.