ನವದೆಹಲಿ: 13 ವರ್ಷದ ಬಾಲಕಿಯೋರ್ವಳ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಐಪಿಎಸ್ ಅಧಿಕಾರಿಯನ್ನ ಅಮಾನತುಗೊಳಿಸುವಂತೆ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಒತ್ತಾಯಿಸಿದೆ. ಐಪಿಎಸ್ ಅಧಿಕಾರಿ ಗೌರವ್ ಉಪಾಧ್ಯಾಯ ಅವರನ್ನ ಅಮಾನತುಗೊಳಿಸುವಂತೆ ಕೋರಿ ಸುಷ್ಮಿತಾ ದೇವ್ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಆಪತ್ ಕಾಲದಲ್ಲಿ ಮೋದಿ ಸರ್ಕಾರಕ್ಕೆ RBIನಿಂದ ₹1ಲಕ್ಷ ಕೋಟಿ.. ಏನಿದು ಲಾಭಾಂಶ ವರ್ಗಾವಣೆ?
ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಪತ್ರ ಬರೆಯಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿ ವಿರುದ್ಧ ಸಂತ್ರಸ್ತೆಯ ತಾಯಿ 2019ರ ಡಿಸೆಂಬರ್ನಲ್ಲಿ ದೂರು ದಾಖಲು ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಬೋಡೋಲ್ಯಾಂಡ್ ಪ್ರಾದೇಶಿಕ ಪ್ರದೇಶದ ವ್ಯಾಪ್ತಿಯ ಜಿಲ್ಲೆವೊಂದರಲ್ಲಿ ಇತ್ತೀಚೆಗೆ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿದ್ದ ಅಧಿಕಾರಿಯನ್ನ ಅಮಾನತುಗೊಳಿಸುವಂತೆ ಅವರು ಆಗ್ರಹಿಸಿದ್ದಾರೆ.
2020ರ ಜನವರಿಯಲ್ಲಿ ಉಪಾಧ್ಯಾಯ ವಿರುದ್ಧ ಬಾಲಾಪರಾಧಿ ದೌರ್ಜನ್ಯ ಪ್ರಕರಣ ದಾಖಲಾಗಿದೆ.ತನಿಖೆ ನಂತರ ಸಿಐಡಿ, ಅಸ್ಸೋಂ ಪೊಲೀಸರು, ಅಧಿಕಾರಿ ವಿರುದ್ಧ ಲೈಂಗಿಕ ಅಪರಾಧ (ಮಕ್ಕಳ ರಕ್ಷಣೆ ಪೋಕ್ಸೋ ಕಾಯ್ದೆ) ಸೆಕ್ಷನ್ 354,354 ಎ ಅಡಿ ದೂರು ದಾಖಲು ಮಾಡಲಾಗಿದೆ.